ಬಂಟ್ವಾಳ ,ಜ 08: ಲಾರಿಯೊಂದರ ಬ್ರೇಕ್ ವೈಫಲ್ಯಗೊಂಡು ರಸ್ತೆಗೆ ಉರುಳಿ ಬಿದ್ದ ಘಟನೆ ಎಸ್ವಿಎಸ್ ಕಾಲೇಜು ಬಳಿ ನಡೆದಿದೆ.
ಮೂಡುಬಿದ್ರೆ ರಸ್ತೆ ನಡುವಿನ ಎಸ್ವಿಎಸ್ ಕಾಲೇಜು ಬಳಿ ಇಳಿಜಾರು ರಸ್ತೆಯಲ್ಲಿ ಕಾರ್ಕಳದಿಂದ ಬಂಟ್ವಾಳ ಕಡೆಗೆ ಬೆಳಿಗ್ಗೆ ಅಕ್ಕಿ ಸಾಗಿಸುತ್ತಿದ್ದ ಲಾರಿಯೊಂದು ಬ್ರೇಕ್ ವೈಫಲ್ಯಗೊಂಡು ರಸ್ತೆ ಬದಿ ಉರುಳಿ ಬಿದ್ದ ಪರಿಣಾಮ ಲಾರಿ ಚಾಲಕ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.