ಕನ್ನಡ ವಾರ್ತೆಗಳು

ಪಡುಬಿದ್ರೆ: ಅಂತರ್ಜಿಲ್ಲಾ ಕಳ್ಳ ಕೈನೆಟಿಕ್ ಅಬೂಬಕರ್ ಸೆರೆ; ಚಿನ್ನಾಭರಣ ವಶ

Pinterest LinkedIn Tumblr

ಉಡುಪಿ: ಅದಮಾರು ಕಾಲೇಜು ಸಮೀಪ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣಕೆ ಸಂಬಂಧಿಸಿದಂತೆ ಪಡುಬಿದ್ರಿ ಮತ್ತು ಕಾಪು ವೃತ್ತದ ಪೊಲೀಸರ ತಂಡವು ಅಂತರ್ ಜಿಲ್ಲಾ ಕುಖ್ಯಾತಿಯ ಮನೆಗಳ್ಳನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಚಿಕ್ಕಮಗಳೂರು ಉಪ್ಪಳ್ಳಿ ನಿವಾಸಿ ಅಬೂಬಕರ್ ಯಾನೆ ಅಬ್ದುಲ್ ಖಾದರ್ ಅಲಿಯಾಸ್ ಕೈನೆಟಿಕ್ ಅಬೂಬಕರ್(60) ಬಂಧಿತ ಆರೋಪಿಯಿಂದ ಡಿ. 26ರಂದು ಅದಮಾರಿನಲ್ಲಿ ನಡೆದಿದ್ದ ಮನೆಗಳ್ಳತನಕ್ಕೆ ಸಂಬಂಧಿಸಿ 38 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Padubidre_Theaf_Arrest (1)

Padubidre_Theaf_Arrest (3) Padubidre_Theaf_Arrest (2)

ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು ಬಳಿಯ ಪಿ. ಜನಾರ್ದನ ಅವರ ಮನೆಯಲ್ಲಿ ಡಿ. 26ರ ರಾತ್ರಿ ಮನೆಯವರು ನಿದ್ದೆಯಲ್ಲಿದ್ದ ವೇಳೆ ಮನೆಗಳ್ಳತನ ನಡೆದಿತ್ತು. ಆ ವೇಳೆ ಸುಮಾರು 1.65 ಲಕ್ಷ ರೂ ಬೆಲೆಬಾಳುವ 70 ಗ್ರಾಂ ಬಂಗಾರದೊಡವೆಗಳು ಹಾಗೂ 6,000 ರೂ. ನಗದು ಕಳ್ಳತನವಾಗಿದ್ದು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಈ ಕೃತ್ಯದ ಬಳಿಕ ಆರೋಪಿ ಅಬೂಬಕರ್ ತಲೆಮರೆಸಿಕೊಂಡಿದ್ದ.

ಮಹತ್ವದ ಸುಳಿ ವೊಂದನ್ನು ಬೆನ್ನತ್ತಿದ ಪೊಲೀಸರು ಈತನನ್ನು ಬಂಧಿಸಿ ಈತನಿಂದ 38ಗ್ರಾಂ ತೂಕದ 2 ಬಳೆ, 1 ನೆಕ್ಲೆಸ್ ಹಾಗೂ 1 ಉಂಗುರವನ್ನು ವಶಪಡಿಸಿಕೊಳ್ಳಲಾಗಿದೆ. ಈತನ ಜತೆ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೋರ್ವ ಆರೋಪಿ ಪರಾರಿಯಾಗಿದ್ದು ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಜಿಲ್ಲಾ ಪೊಲೀಸ್ ಎಸ್ಪಿ ಕೆ. ಅಣ್ಣಾಮಲೈ, ಹೆಚ್ಚುವರಿ ಎಸ್ಪಿ ಸಂತೋಷ್ ಕುಮಾರ್ ಮತ್ತು ಕಾರ್ಕಳ ಎ‌ಎಸ್‌ಪಿ ಡಾ| ಸುಮನ್ ಮಾರ್ಗದರ್ಶನದಲ್ಲಿ ಕಾಪು ಸಿಪಿ‌ಐ ಸುನಿಲ್ ನಾಯಕ್ ನೇತೃತ್ವದಲ್ಲಿ ನಡೆದಿದ್ದ ಈ ಕಾರ್ಯಾಚರಣೆಯಲ್ಲಿ ಪಡುಬಿದ್ರಿ ಠಾಣಾ ಪಿ‌ಎಸ್‌ಐ ಅಜ್ಮತ್ ಅಲಿ ಹಾಗೂ ಪೊಲೀಸರಾದ ನಾಗೇಶ, ಪ್ರವೀಣ್, ವಿಶ್ವಜಿತ್, ಧರ್ಮಪ್ಪ, ಶ್ರೀಧರ, ಬಾಲಸುಬ್ರಹ್ಮಣ್ಯ, ಚಾಲಕ ಜಗದೀಶ್, ಜೀವನ್, ದಾಮೋದರ್ ಭಾಗವಹಿಸಿದ್ದರು.

Write A Comment