ಕನ್ನಡ ವಾರ್ತೆಗಳು

ಕೃಷಿಕರ ಗದ್ದೆಗಳಿಗೆ ನೀರುಣಿಸಲು ವಾರಾಹಿಯ ‘ಬೇಸಿಗೆ ಹಂಗಾಮಿಗೆ ನೀರು ಹರಿಸುವ’ ಕಾರ್ಯಕ್ರಮ

Pinterest LinkedIn Tumblr

ಕುಂದಾಪುರ: ರೈತರ ಗದ್ದೆಗಳಿಗೆ ನೀರೂಣಿಸುವ ಮೂಲಕ ಇಲ್ಲಿನ ಕೃಷಿ ಚಟುವಟಿಕೆಗಳಿಗೆ ಕಾಯಕಲ್ಪ ನೀಡಬೇಕು ಎನ್ನುವ ಸದುದ್ದೇಶದಿಂದ 1983 ರಲ್ಲಿ ಪ್ರಾರಂಭವಾದ ಜಿಲ್ಲೆಯ ಏಕೈಕ್ ಬ್ರಹತ್ ನೀರಾವರಿ ಯೋಜನೆಯಾದ ವಾರಾಹಿ ನೀರಾವರಿ ಯೋಜನೆಗೆ ರಾಜ್ಯದಲ್ಲಿನ ಸಿದ್ದರಾಮಯ್ಯನವರ ನೇತ್ರತ್ವದ ಕಾಂಗ್ರೆಸ್ ಸರ್ಕಾರ ಶಕ್ತಿ ತುಂಬುವ ಕೆಲಸ ಮಾಡಿದ್ದರಿಂದಾಗಿ ಇದೀಗ 2ನೇ ಹಂತದಲ್ಲಿ ಕೃಷಿಕರ ನೀರಿನ ಬೇಡಿಕೆಗಳನ್ನು ಈಡೇರಿಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ ನುಡಿದರು.

ಕುಂದಾಪುರ ತಾಲ್ಲೂಕಿನ ಕುಳ್ಳಂಜೆ ಗ್ರಾಮದ ಭರತ್ಕಲ್ ಎಂಬಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ವಾರಾಹಿ ಯೋಜನೆಯ 2ನೇ ಹಂತದ ’ಬೇಸಿಗೆ ಹಂಗಾಮಿಗೆ ನೀರು ಹರಿಸುವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Varahi_Programme_Sorake (4) Varahi_Programme_Sorake (8) Varahi_Programme_Sorake (11) Varahi_Programme_Sorake (12) Varahi_Programme_Sorake (7) Varahi_Programme_Sorake (6) Varahi_Programme_Sorake (10) Varahi_Programme_Sorake (2) Varahi_Programme_Sorake (1) Varahi_Programme_Sorake (3) Varahi_Programme_Sorake (5)

Varahi_Programme_Sorake (9)

ವಾರಾಹಿ ಯೋಜನೆ ಪ್ರಾರಂಭವಾಗಿ ಕೆಲವು ದಶಕಗಳೇ ಕಳೆದಿದ್ದರೂ ಇಲ್ಲಿನ ಕಾಲುವೆಗಳಿಗೆ ನೀರೂಣಿಸುವ ಕಾರ್ಯವನ್ನು ನಿಗದಿ ಅವಧಿಯಲ್ಲಿ ಮಾಡಲಾಗದೆ ಇರುವುದಕ್ಕೆ ಹಲವು ಸಮಸ್ಯೆಗಳು ತೊಡಕಾಗಿದ್ದವು. ರಾಜ್ಯಸಭಾ ಸಂಸದ ಆಸ್ಕರ್ ಫೆರ್ನಾಂಡಿಸ್ ಅವರ ಮುತುವರ್ಜಿಯಿಂದಾಗಿ ರಾಜ್ಯ ಸರ್ಕಾರದ ಹಲವು ಇಲಾಖೆಗಳಿಂದ ಇದ್ದ ತಾಂತ್ರಿಕ ಸಮಸ್ಯೆಗಳ ಪರಿಹಾರವನ್ನು ಕಂಡು ಕೊಳ್ಳಲಾಗಿದೆ. ಕುಡಿಯುವ ನೀರು ಹಾಗೂ ಕೃಷಿಕರ ಗದ್ದೆಗಳಿಗೆ ನೀರು ನೀಡಬೇಕು ಎನ್ನುವ ಉದ್ದೇಶಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರ ಬದ್ದವಾಗಿದೆ ಎಂದು ಅವರು ತಿಳಿಸಿದರು.

ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಯು.ಆರ್ ಸಭಾಪತಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಆರ್ ಶೆಟ್ಟಿ, ಶಂಕರನಾರಾಯಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾಶಿವ ಶೆಟ್ಟಿ, ಹಾಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸರ್ವೋತ್ತಮ ಹೆಗ್ಡೆ, ಮಾಜಿ ತಾ.ಪಂ ಸದಸ್ಯ ಸಂಪಿಗೇಡಿ ಸಂಜೀವ ಶೆಟ್ಟಿ ಅತಿಥಿಗಳಾಗಿದ್ದರು.

ಕರ್ನಾಟಕ ನೀರಾವರಿ ನಿಗಮದ ಪ್ರಭಾರ ಮುಖ್ಯ ಇಂಜಿನಿಯರ್ ಎಂ.ವೇಣುಗೋಪಾಲ್ ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು, ಕಾರ್ಯಪಾಲಕ ಇಂಜಿನಿಯರ್ ವಿಶ್ವೇಂಧ್ರಮೂರ್ತಿ ಸ್ವಾಗತಿಸಿದರು, ಅನೂಸೂಯ ಭಟ್ ಪ್ರಾರ್ಥಿಸಿದರು, ಸದಾನಂದ ಕಲ್ಮಾಡಿ ವಂದಿಸಿದರು, ಎ.ಎಸ್ ರಾಮಕೃಷ್ಣಯ್ಯ ನಿರೂಪಿಸಿದರು.

Write A Comment