ಕನ್ನಡ ವಾರ್ತೆಗಳು

ಮಂಗಳೂರಿನಲ್ಲೊಂದು ಅಪರೂಪದ ಘಟನೆ : ಎಸಿ ಕಚೇರಿಯ ವಸ್ತುಗಳನ್ನೆ ಜಫ್ತಿ ಮಾಡಿದ ಕೋರ್ಟ್ ಅಧಿಕಾರಿಗಳು

Pinterest LinkedIn Tumblr

Ac_office_Ride_1

ಮಂಗಳೂರು : ಪ್ರಕರಣವೊಂದಕ್ಕೆ ಸಂಬಂಧಿಸಿ ಮುಖ್ಯ ಸಿವಿಲ್ ನ್ಯಾಯಲಯ ನೀಡಿದ ಅದೇಶದ ಹಿನ್ನೆಲೆಯಲ್ಲಿ ಕೋರ್ಟ್ ಅಧಿಕಾರಿಗಳು ದ.ಕ.ಜಿಲ್ಲಾ ಎಸಿ ಕಚೇರಿಯ ಚರ ವಸ್ತುಗಳನ್ನು ಜಫ್ತಿ ಮಾಡಿದ ಅಪರೂಪದ ಘಟನೆಯೊಂದು ಸೋಮವಾರ ಮಂಗಳೂರಿನಲ್ಲಿ ನಡೆದಿದೆ.

ಮಂಗಳುರಿನ ಬಜ್ಪೆಯ ಆದ್ಯಪಾಡಿಯಲ್ಲಿರುವ ಜೋಸೆಫ್ ಡಿಸೋಜಾ ಕುಟುಂಬವು 2005 ರಲ್ಲಿ ತನ್ನ 4.5 ಎಕ್ರೆ ಕೃಷಿ ಬೂಮಿಯನ್ನು ಬಜ್ಪೆ ವಿಮಾನನಿಲ್ದಾಣದ ಅಗಲಿಕರಣಕ್ಕೆ ನೀಡಿದ್ದರು. ಇದಕ್ಕಾಗಿ 59 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿಸಲಾಗಿತ್ತು, ಆದರೆ ಮೊದಲ ಕಂತಿನ ಮೊತ್ತ 13 ಲಕ್ಷ ಪಾವತಿಸಿದ ಬಳಿಕ ಜೋಸೆಫ್ ಕುಟುಂಬಕ್ಕೆ ಯಾವುದೇ ಹಣ ಪಾವತಿಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಜೋಸೆಫ್ 2006 ರಿಂದಲೇ ಹಲವು ಕಚೇರಿಗಳಿಗೆ ಸುತ್ತಿದ್ದು, ಯಾವುದೇ ಪ್ರಯೋಜನವಾಗಿರಲಿಲ್ಲ.

Ac_office_Ride_2 Ac_office_Ride_3 Ac_office_Ride_4 Ac_office_Ride_5

ಈ ಹಿನ್ನೆಲೆಯಲ್ಲಿ ಕೊನೆಗೆ ಅವರು ಕೋರ್ಟ್ ಮೊರೆ ಹೋಗಿದ್ದರು.ಹೀಗಾಗಿ ಉಳಿದ ಹಣ ಪಾವತಿಸುವಂತೆ ಕೋರ್ಟ್ ರೆವಿನ್ಯೂ ಇಲಾಖೆಗೆ ಆದೇಶಿಸಿತ್ತು.ಆದರೆ ಅವರಿಗೆ ಯಾವೂದೇ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಅವರು ಮತ್ತೊಮ್ಮೆ ಕೋರ್ಟ್ ಮೊರೆ ಹೋಗಿದ್ದು, ಹಣ ಪಾವತಿಯಾಗುವವರೆಗೆ ಎಸಿ ಕಚೇರಿಯನ್ನು ಮುಚ್ಚುವಂತೆ ಆದೇಶಿಸಿದೆ. ಕಳೆದ ವರ್ಷಗಳಿಂದ ಈ ಕುಟುಂಬಕ್ಕೆ ಬಾಕಿಯಿರುವ ಮೊತ್ತ ನೀಡದ ಹಿನ್ನೆಲೆಯಲ್ಲಿ ಸಂಪೂರ್ಣ ಬಾಕಿ ಹಣ ಪಾವತಿಯಾಗುವವರೆಗೆ ಎಸಿ ಕಚೇರಿಯ ಚರ ವಸ್ತುಗಳನ್ನು ಜಫ್ತಿ ಮಾಡುವಂತೆ ಮುಖ್ಯ ಸಿವಿಲ್ ನ್ಯಾಯಲಯವು ಆದೇಶ ನೀಡಿದೆ.

ಅದರಂತೆ ಇಂದು ಜೋಸೆಫ್ ಜೊತೆ ಅದೇಶದ ಪ್ರತಿ ಹಿಡಿದುಕೊಂಡು ಬಂದ ಕೋರ್ಟ್ ಅಧಿಕಾರಿಗಳು ಎಸಿ ಕಚೇರಿಯ ಪೀಠೋಪಕರಣ ಸೇರಿದಂತೆ ಕೆಲವೊಂದು ಚರವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಜಫ್ತಿಯ ಬಳಿಕ ಎಸಿಗೆ 15 ದಿನಗಳ ಸಮಯವಕಾಶ ನೀಡಿದ್ದು ಅದರೊಳಗೆ ಹಣಪಾವತಿಸುವಂತೆ ತಿಳಿಸಲಾಗಿದ್ದು, ಇಲ್ಲವಾದಲ್ಲಿ ವಸ್ತುಗಳನ್ನು ಸಾರ್ವಜನಿಕವಾಗಿ ಹರಾಜು ಹಾಕಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

Write A Comment