ಕನ್ನಡ ವಾರ್ತೆಗಳು

ಸಾರ್ವಜನಿಕ ಮಾಹಿತಿ ಹಕ್ಕು ಕಾಯ್ದೆಯ ಕಾರ್ಯಾಗಾರ

Pinterest LinkedIn Tumblr

Zp_meet_photo_1

ಮಂಗಳೂರು,ಜ.12: ಕರ್ನಾಟಕ ಮಾಹಿತಿ ಆಯೋಗ, ದ.ಕ ಜಿಲ್ಲಾಡಳಿತದ ಸಹಯೋಗದಲ್ಲಿ 2005 ರ ಕುರಿತು ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗಾಗಿ ಮಾಹಿತಿ ಹಕ್ಕು ಕಾಯ್ದೆ ಕುರಿತು ಕಾರ್ಯಾಗಾರವು ದ.ಕ ಜಿಲ್ಲಾ ಪಂಚಾಯತ್‌‌ನಲ್ಲಿ ಸೋಮವಾರ ನಡೆಯಿತು.

ರಾಜ್ಯ ಮಾಹಿತಿ ಆಯುಕ್ತ ಡಾ. ಶೇಖರ್ ಡಿ. ಸಜ್ಜನರ್, ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ರಾಜ್ಯದಲ್ಲಿ 2013-14ನೇ ಸಾಲಿನಲ್ಲಿ 4,94,491 ಮತ್ತು 2014-15 ನೇ ಸಾಲಿನಲ್ಲಿ 6,18,425 ಮಾಹಿತಿ ಕೋರಿ ಅರ್ಜಿಗಳು ಸಲ್ಲಿಸಲ್ಪಟ್ಟಿವೆ. ಈ ಪೈಕಿ ಶೇ. 96ರಷ್ಟು ಅರ್ಜಿಗಳು ಮೊದಲ ಹಂತದಲ್ಲೇ ಇತ್ಯರ್ಥವಾಗಿವೆ. ರಾಜ್ಯದಲ್ಲಿ 30,000 ಅರ್ಜಿಗಳು ಮಾಹಿತಿ ಆಯೋಗಕ್ಕೆ ಸಲ್ಲಿಸಲ್ಪಟ್ಟಿವೆ ಎಂದು ಹೇಳಿದರು.

Zp_meet_photo_2 Zp_meet_photo_3 Zp_meet_photo_4

ಮಾಹಿತಿ ಹಕ್ಕು ಕಾಯ್ದೆ ಮತ್ತು ಅರ್ಜಿದಾರರ ಬಗ್ಗೆ ಇರುವ ಮನೋಸ್ಥಿತಿಯನ್ನು ಅಧಿಕಾರಿಗಳು ಬದಲಿಸಿಕೊಳ್ಳಬೇಕು. ಮಾಹಿತಿ ಸಾರ್ವಜನಿಕರ ಹಕ್ಕು ಎಂಬುದನ್ನು ತಿಳಿದುಕೊಂಡು ಸಕಾಲದಲ್ಲಿ ಮಾಹಿತಿ ನೀಡುವ ಮೂಲಕ ಮೇಲ್ಮನವಿ ಪ್ರಮಾಣವನ್ನು ಕಡಿಮೆ ಮಾಡಬೇಕು. ಸಾರ್ವಜನಿಕರು ಮಾಹಿತಿ ಕೋರಿ ಅರ್ಜಿ ಹಾಕುವ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲು ಹಾಗೂ ಹೋಸ ಯೋಜನೆಯನ್ನು ಅನುಷ್ಠಾನಗೊಳಿಸಿ ಮಾಹಿತಿಗಳನ್ನು ವೆಬ್‌‌‌‌ಸೈಟ್‌‌‌ಗೆ ಹಾಕಬೇಕು ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪಿ.ಐ. ಶ್ರೀವಿದ್ಯಾ, ಉಪ ಕಾರ್ಯದರ್ಶಿ ಎ.ಆರ್‌. ಉಮೇಶ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Write A Comment