ಕನ್ನಡ ವಾರ್ತೆಗಳು

ಕುಂದಾಪುರ: ಕೊಡಪಾಡಿ-ಗುಹೇಶ್ವರ ದೇವಸ್ಥಾನ ರಸ್ತೆಯ ಗುದ್ದಲಿ ಪೂಜೆ ನಡೆಸಿದ ಕೋಟ ಶ್ರೀನಿವಾಸ್ ಪೂಜಾರಿ

Pinterest LinkedIn Tumblr

ಕುಂದಾಪುರ: ಸುಗಮ ಸಂಚಾರಕ್ಕೆ ಅನಾನುಕೂಲವಾಗಿರುವ ಗುಜ್ಜಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕೊಡ್ಪಾಡಿಯಿಂದ ಗುಹೇಶ್ವರ ರಸ್ತೆಯ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಮಂಗಳವಾರ ಮಧ್ಯಾಹ್ನ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಈ ರಸ್ತೆಯ ಕಾಮಗಾರಿಗೆ ಚಾಲನೆ ನೀಡಿದ್ದು ಸಂಸದ ಬಿ.ಎಸ್. ಯಡಿಯೂರಪ್ಪ, ವಿಧಾನಪರಿಷತ್ ಸದಸ್ಯ ಬಿ.ಜೆ. ಪುಟ್ಟಸ್ವಾಮೀ ಹಾಗೂ ತನ್ನ ಅನುಧಾನದ ಅಂದಾಜು 7.5 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿಯನ್ನು ನಡೆಸುತ್ತಿದ್ದು, ಈ ರಸ್ತೆ ಯಶಸ್ವಿಯಾಗಿ ನಿರ್ಮಾಣಗೊಂಡು ನಾಗರೀಕರು ಹಾಗೂ ದೇವಳಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲಿ ಎಂಬುದು ಆಶಯವಾಗಿದೆ ಎಂದರು.

Kodapadi_Raod_Guddalipooja (6) Kodapadi_Raod_Guddalipooja (8) Kodapadi_Raod_Guddalipooja (4) Kodapadi_Raod_Guddalipooja (1) Kodapadi_Raod_Guddalipooja (2) Kodapadi_Raod_Guddalipooja (10) Kodapadi_Raod_Guddalipooja (5) Kodapadi_Raod_Guddalipooja (11) Kodapadi_Raod_Guddalipooja (9) Kodapadi_Raod_Guddalipooja (3) Kodapadi_Raod_Guddalipooja (7)

ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಅಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ, ಗುಜ್ಜಾಡಿ ಗ್ರಾ.ಪಂ. ಅಧ್ಯಕ್ಷ ಹರೀಶ್ ಮೇಸ್ತ, ಉಪಾಧ್ಯಕ್ಷೆ ಬಿಂದು, ಸದಸ್ಯರಾದ ವೇದಾವತಿ, ಶೇಖರ್ ದೇವಾಡಿಗ, ಬಿಜೆಪಿ ಜಿ.ಪಂ. ಖಂಬದಕೋಣೆ ಕ್ಷೇತ್ರದ ಅಭ್ಯರ್ಥಿ ಪ್ರಿಯದರ್ಶಿನಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಕೊಡಪಾಡಿ-ಗುಹೇಶ್ವರ ದೇವಸ್ಥಾನ ಸಂಪರ್ಕ ರಸ್ತೆಯು ಜರ್ಝರಿತಗೊಂಡಿದ್ದು ಸುಗಮ ಸಂಚಾರ ಕಷ್ಟಸಾಧ್ಯವಾಗಿದೆ, ಅಲ್ಲಲ್ಲಿ ಗುಂಡಿಗಳಿದ್ದು ದ್ವಿಚಕ್ರ ವಾಹನ ಸವಾರರು ಏಳು ಬೀಳಿನ ನಡುವೆಯೇ ಸಂಚರಿಸಬೇಕಾದ ಅನಿವಾರ್ಯತೆ ಇದ್ದಿತ್ತು.

Write A Comment