ಬಂಟ್ವಾಳ,ಜ.13 :ಬೆಂಗಳೂರಿನ ಮೆಜೆಸ್ಟಿಕ್ ಬಸ್‍ನಿಲ್ದಾಣ ಬಳಿ ಭಾನುವಾರ ಸಂಜೆ ಎರಡು ಬಿಎಂಟಿಸಿ ಬಸ್ಸಿನ ನಡುವೆ ಸಿಲುಕಿ ಅಪಘಾತದಿಂದ ಸಾವನ್ನಪ್ಪಿದ ರಾಯಿ ಸಮೀಪದ ಪೂಜಾರ್ತೋಡಿ ಯುವಕನ ಅಂತ್ಯಕ್ರಿಯೆ ಹುಟ್ಟೂರಿನಲ್ಲಿ ನೆರವೇರಿತು.
ಇಲ್ಲಿನ ನಿವಾಸಿ ಚಂದಪ್ಪ ಪೂಜಾರಿ ಎಂಬವರ ಪುತ್ರ ಮಂಜುನಾಥ ಪೂಜಾರಿ(24) ಈಚೆಗಷ್ಟೇ ಬೆಂಗಳೂರಿನ ಉದ್ಯೋಗದಿಂದ ರಜೆಯಲ್ಲಿ ಊರಿಗೆ ಬಂದು ಭಾನುವಾರ ಮತ್ತೆ ಬೆಂಗಳೂರಿಗೆ ವಾಪಾಸಾದ ವೇಳೆ ದುರ್ಘಟನೆ ಸಂಭವಿಸಿತ್ತು. ಸೋಮವಾರ ರಾತ್ರಿ ಆಂಬುಲೆನ್ಸ್ ಮೂಲಕ ಮೃತದೇಹ ಹುಟ್ಟೂರಿಗೆ ತಲುಪಿದ್ದು, ಸ್ಥಳೀಯ ನೂರಾರು ಮಂದಿ ಉಪಸ್ಥಿತಿಯಲ್ಲಿ ಮನೆ ಎದುರಿನ ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು.