ಮಂಗಳೂರು,ಜ.13: ಉಡುಪಿ ಶ್ರೀ ಪೇಜಾವರ ಮಠದ ಪರಮ ಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾಂದಗಳವರ ಪರ್ಯಾಯೋತ್ಸವದ ಅಂಗವಾಗಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಿಂದ ಹೊರೆಕಾಣಿಕೆ-ಹೊರೆದಿಬ್ಬಣದ ಬಗ್ಗೆ ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಅಮರನಾಥ ಶೆಟ್ಟಿ, ಮೂಡಬಿದಿರೆ, ಶಶಿಧರ ಹೆಗ್ಡೆ, ಎ.ಜೆ. ಶೆಟ್ಟಿ, ಹರಿಕೃಷ್ಣ ಪುನರೂರು, ಸವಣೂರು ಸೀತಾರಾಮ ರೈ, ಶ್ರೀಪತಿ ಭಟ್ ಮೂಡಬಿದಿರೆ, ಎಂ.ಬಿ. ಪುರಾಣಿಕ್ ಮುಂತಾದವರ ನೇತೃತ್ವದಲ್ಲಿ ಈಗಾಗಲೇ ಸಿದ್ಧತೆ ಭರದಿಂದ ಸಾಗುತ್ತಿದೆ.
ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದಿಂದ ಹೊರಡುವ ಈ ಭವ್ಯ ಮೆರವಣಿಗೆಯು ಪ್ರೊ| ಎಂ.ಬಿ. ಪುರಾಣಿಕ್, ಶರವು ರಾಘವೇಂದ್ರ ಶಾಸ್ತ್ರಿ, ರತ್ನಾಕರ ಜೈನ್, ಶರವು ಗಣೇಶ್ ಭಟ್, ವಾಸು ದೇವರಾವ್ ಮಣ್ಣಗುಡ್ಡೆ, ರಮೇಶ್‌ರಾವ್ ವುಡ್‌ಲ್ಯಾಂಡ್ಸ್ ಇವರುಗಳಿಂದ ವ್ಯವಸ್ಥೆಗಳು ನಡೆಯುತ್ತಿದ್ದು ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಶ್ರೀ ಮಂಗಳಾದೇವಿ ದೇವಸ್ಥಾನ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ಶ್ರೀ ಮುಖ್ಯಪ್ರಾಣ ದೇವಸ್ಥಾನ, ಶ್ರೀ ರಾಘವೇಂದ್ರ ಮಠ, ಇವುಗಳ ಸಹಯೋಗದೊಂದಿಗೆ ವ್ಯವಸ್ಥೆಗಳು ಏರ್ಪಾಡಾಗುತ್ತಿದ್ದು,
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸ್ವಸಹಾಯ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ದಕ್ಷಿಣ ಕನ್ನಡ ಜಿಲ್ಲಾ ದ್ರಾವಿಡ ಬ್ರಾಹ್ಮಣ ಅಸೋಸಿಯೇಶನ್ (ಎಸ್.ಕೆ.ಡಿ.ಬಿ.), ಕೋಟೇಶ್ವರ ಮಾಗಣೆಯ ಬಂಧುಗಳು, ಎಂ. ಎಸ್. ಗುರುರಾಜ್ ‘ನಮ್ಮವರು’ ತಂಡ, ‘ಸಮತಾ ಬಳಗ’ದ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ರಾವ್ ಪೇಜಾವರ್, ಮಹಿಳಾ ಒಕ್ಕೂಟದ ಶ್ರೀಮತಿ ವಿಜಯಲಕ್ಷ್ಮಿ ಶೆಟ್ಟಿ, ಸುಧಾಕರ ರಾವ್ ಪೇಜಾವರ, ಸುರತ್ಕಲ್‌ನಲ್ಲಿ ಇಡ್ಯಾ ರಮಾನಂದ್ ಭಟ್, ಗಿರಿಧರ ಹತ್ವಾರ್, ಅಗರಿ ರಾಘವೇಂದ್ರರಾವ್, ಐ.ಕೆ. ನಾರಾಯಣರಾವ್, ಕಡಂಗೋಡಿ ಮಹಾಬಲ ಪೂಜಾರಿ, ಮಹೇಶ್‌ಮೂರ್ತಿ ಭಟ್, ವಿಜಯಶಂಕರ ಐತಾಳ್, ಸದಾಶಿವ ಶೆಟ್ಟಿ, ಪಣಂಬೂರು, ಶ್ರೀಮತಿ ಸುಖಲತಾ ಶೆಟ್ಟಿಇವರ ಸಹಯೋಗದೊಂದಿಗೆ, ಬಜಪೆಯಲ್ಲಿ ಶಾಂತಿ ಭವನ- ರಾಘವೇಂದ್ರ ಆಚಾರ್, ಮೂಡಬಿದಿರೆಯಲ್ಲಿ ಶೀನಪ್ಪ, ಮೂಲ್ಕಿ-ಪಾವಂಜೆಯಲ್ಲಿ ಪಟೇಲ್ ವೆಂಕಟೇಶ್‌ರಾವ್, ಕೂಳುವೈಲು ಪದ್ಮನಾಭರಾವ್, ಪಾವಂಜೆ ಕೃಷ್ಣ ಭಟ್, ಪಾವಂಜೆ ಸತೀಶ್ ಭಟ್, ಪುತ್ತೂರುರಾಮಕುಂಜ ಮತ್ತು ಬೆಳ್ತಂಗಡಿ ಉಜಿರೆ ಈ ಎಲ್ಲಾ ಕಡೆಯಿಂದ ಒಟ್ಟು ಕ್ರೋಢಿಕರಿಸಿದ ಹೊರೆಕಾಣಿಕೆ, ಹೊರೆದಿಬ್ಬಣವು ದಿನಾಂಕ 16 ಜನವರಿ ಶನಿವಾರದಂದು ಮಧ್ಯಾಹ್ನ 1.45 ಕ್ಕೆ ಸಾಂಸ್ಕೃತಿಕ-ಬೊಂಬೆಕುಣಿತ ವಾದ್ಯ ಸಂಭ್ರಮದೊಂದಿಗೆ ಶರವು ಮಹಾಗಣಪತಿದೇವಸ್ಥಾನದಿಂದ ಹೊರಟು ಸುರತ್ಕಲ್ ಮಾರ್ಗವಾಗಿ ಮಧ್ಯಾಹ್ನ 2.45ಕ್ಕೆ ಮೂಲ್ಕಿ ತಲುಪಲಿದೆ.
ಹಾಗೆಯೇ ಮಧ್ಯಾಹ್ನ ಗಂಟೆ 1.00ಕ್ಕೆ ಮೂಡಬಿದಿರೆಯಿಂದ ಅಮರನಾಥ ಶೆಟ್ಟಿ ನೇತೃತ್ವದಲ್ಲಿ, ಕಟೀಲಿನಿಂದ ಕಟೀಲು ಲಕ್ಷ್ಮೀ ನಾರಾಯಣ ಆಸ್ರಣ್ಣ ನೇತೃತ್ವದಲ್ಲಿ ಪಲ್ಲಕಿ ಸಾಂಸ್ಕೃತಿಕ ಸಂಭ್ರಮದೊಂದಿಗೆ ಕಿನ್ನಿಗೋಳಿ ಮಾರ್ಗವಾಗಿ ಮಧ್ಯಾಹ್ನ ಗಂಟೆ 2.45 ಕ್ಕೆ ಮೂಲ್ಕಿ ತಲುಪಲಿದೆ.
ಮಧ್ಯಾಹ್ನಗಂಟೆ 3.00ಕ್ಕೆ ಮೂಲ್ಕಿಯಿಂದ ಪಲ್ಲಕಿ ಚೆಂಡೆ ಬೊಂಬೆ ಈ ಭವ್ಯ ಹೊರೆಕಾಣಿಕೆ-ಹೊರೆದಿಬ್ಬಣ ಹೊರಟು ಉಡುಪಿಗೆ ತಲುಪಲಿದೆ. ಉಡುಪಿಯ ಜೋಡುಕಟ್ಟೆಯಿಂದ ಸಂಜೆ ಗಂಟೆ 4.00ಕ್ಕೆ ಪರ್ಯಾಯ ಶ್ರೀ ಪೇಜಾವರ ಮಠದ ಸ್ವಾಗತ ಸಂಭ್ರಮದೊಂದಿಗೆ ವಿಶೇಷ ಪಲ್ಲಕಿ, ಬೊಂಬೆ ಕುಣಿತ, ಯಕ್ಷಗಾನ, ಚೆಂಡೆ ವಾದ್ಯ ಸಾಂಸ್ಕೃತಿಕ ಸಂಭ್ರಮದೊಂದಿಗೆ ಅಪಾರ ಜನಸ್ತೋಮ ಸಹಿತ ದಿಬ್ಬಣೋಪಾದಿಯಲ್ಲಿ ಶ್ರೀ ಕೃಷ್ಣ ಮಠವನ್ನು ತಲುಪಲಿದೆ. ಮೆರವಣಿಗೆಯಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ.
ಸಾರ್ವಜನಿಕರು ತಮ್ಮ ತಮ್ಮ ಸಂಘ ಸಂಸ್ಥೆಗಳ ಹೆಸರಿನೊಂದಿಗೆ, ಬ್ಯಾನರ್, ಅಲಂಕೃತ ವಾಹನಗಳೊಂದಿಗೆ ಉಡುಪಿ ಪರ್ಯಾಯ-ರಾಷ್ಟ್ರೀಯ ಉತ್ಸವದ ಈ ದಿಬ್ಬಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಉಡುಪಿ ಪರ್ಯಾಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಮಂಗಳೂರು ಹೊರೆಕಾಣಿಕೆ ಸಮಿತಿಯ ಸಂಚಾಲಕರಾದ ಎಸ್. ಪ್ರದೀಪ ಕುಮಾರ ಕಲ್ಕೂರ ವಿನಂತಿಸಿದ್ದಾರೆ.
ಮಂಗಳೂರಿನ ಶರವು ದೇವಸ್ಥಾನದಲ್ಲಿ ತೆರೆಯಲಾದ ಹಸಿರುವಾಣಿ ಸ್ವೀಕೃತಿ ಕೇಂದ್ರದಲ್ಲಿ ಸಾರ್ವಜನಿಕರು ಹೊರೆಕಾಣಿಕೆಗಳನ್ನು ತಂದೊಪ್ಪಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗೆ:
ಉಡುಪಿ ಪರ್ಯಾಯ ಹೊರೆದಿಬ್ಬಣ ಸಮಿತಿ ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣಾ ಕಾಂಪ್ಲೆಕ್ಸ್, ಮಹಾತ್ಮ ಗಾಂಧಿರಸ್ತೆ, ಕೊಡಿಯಾಲ್‌ಬೈಲ್, ಮಂಗಳೂರು. ದೂರವಾಣಿ: 9845083736 ಶರವು ಗಣೇಶ್-9448133027, ಸುಧಾಕರರಾವ್ ಪೇಜಾವರ ಮೊ :9448123061, ದಯಾನಂದ ಕಟೀಲು-9448545578 ಇವರನ್ನು ಸಂಪರ್ಕಿಸಬಹುದು.