ಉಳ್ಳಾಲ,ಜ.16: ಉಳ್ಳಾಲ ಬೈಲಿನಲ್ಲಿ ಡಸ್ಟರ್ ಕಾರು ಮೋರಿಗೆ ಬಿದ್ದ ಪರಿಣಾಮ ಚಾಲಕನಿಗೆ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ಗಾಯಗೊಂಡ ಚಾಲಕನನ್ನು ಕೇರಳ ಮೂಲದ ಹೆಲ್ಫಿನ್(36) ಎಂದು ಗುರುತಿಸಲಾಗಿದೆ.
ಉಳ್ಳಾಲ ಮುಖ್ಯ ರಸ್ತೆಯ ಕಾಂಕ್ರಿಟೀಕರಣ ವಾಗುತ್ತಿದ್ದು, ರಸ್ತೆ ವಿಭಾಜಕವನ್ನು ಗಮನಿಸದೆ ಯುವಕ ಕಾಂಕ್ರಿಟೀಕರಣವಾಗುತ್ತಿದ್ದ ಮೋರಿಯೊಳಗೆ ಬಿದ್ದಿದ್ದಾರೆ ಎಂದು ತಿಳಿಸಲಾಗಿದೆ.
ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.