ಮಂಗಳೂರು,ಜ.16 : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಂಗಳೂರು ವಕೀಲರ ಸಂಘ ಇದರ ಜಂಟಿ ಸಹಭಾಗಿತ್ವದಲ್ಲಿ ಪ್ಯಾನಲ್ ನ್ಯಾಯವಾದಿಗಳಿಗೆ 2 ದಿನಗಳ ತರಬೇತಿ ಕಾರ್ಯಾಗಾರವನ್ನು ದ.ಕ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲ್ಲಿಶನಿವಾರ ಹಮ್ಮಿಕೊಂಡಿತ್ತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಉಮಾ.ಎಮ್. ಜಿ ಅವರು ಈ ಕಾರ್ಯಗಾರವನ್ನು ಉದ್ಘಾಟಿಸಿ, ಕಾನೂನಿನ ಬಗ್ಗೆ ಸಾರ್ವಜನಿಕರಿಗೆ ತಿಳಿದಷ್ಟು, ಕಾನೂನು ಪಂಡಿತರಿಗೆ ಅದರ ಬಗ್ಗೆ ತಿಳಿವಳಿಕೆ ಇಲ್ಲ ಎಂಬ ಮಾತು ಎಲ್ಲಡೆ ಕೇಳಿಬರುತ್ತೀರುವ ಹಿನ್ನೆಲೆ ಈ ಎರಡು ದಿನಗಳ ತರಬೇತಿ ಕಾರ್ಯಗಾರವನ್ನು ಆರಂಭಿಸಿದ್ದೇವೆ ಎಂದೂ ಅವರು ಹೇಳಿದರು.
ಸಂವಿಧಾನದಲ್ಲಿರುವ 3 ಪ್ರಮುಖ ಅಂಗಳಲ್ಲಿ ನ್ಯಾಯಾಂಗವು ಎಲ್ಲಕ್ಕಿಂತ ಶ್ರೇಷ್ಟವೆಂಬುದು ಎಲ್ಲರ ನಂಬಿಕೆ, ಅದರೆ ಇಂದು ಸಾರ್ವಜನಿಕರು ಕಾನೂನಿನ ವಿಷಯದಲ್ಲಿ ನ್ಯಾಯಧೀಶರು ಹಾಗೂ ನ್ಯಾಯಾವಾದಿಗಳನ್ನೇ ಪ್ರಶ್ನಿಸುವ ಮಟ್ಟಕ್ಕೆ ಬಂದಿದ್ದಾರೆ ಎಂದರೆ ಕಾನೂನು ಪಂಡಿತರಿಗೆ ಕಾನೂನಿಗ ಬಗ್ಗೆ ಹೆಚ್ಚಿನ ಮಾಹಿತಿ ಬಗ್ಗೆ ತಿಳಿದಿರುವುದಿಲ್ಲ ಎಂದು ದೃಡಪಟ್ಟಂತಾಗಿದೆ. ಕಾನೂನು ಪಂಡಿತರಿಗಿಂತ ಜನಸಾಮಾನ್ಯರಿಗೆ ಕಾನೂನಿನ ಮಾಹಿತಿ ಹೆಚ್ಚು ರವಾನೆಯಾಗುತ್ತಿದೆಯಾ ಅಥವಾ ಕಕ್ಷಿದಾರರಿಗೆ ನಾವೇ ಉಚಿತವಾಗಿ ಕಾನೂನಿನ ಮಾಹಿತಿ ನೀಡುವುದ ರಲ್ಲಿ ಸಫಲವಾಗಿದ್ದೇವಾ ಎಂಬ ಪ್ರಶ್ನೆಗಳನ್ನಾಧರಿಸಿ ನಾವು ರಾಷ್ಟ್ರೀಯ ಕಾನೂನು ಪ್ರಾಧಿಕಾರದ ಸೂಚನೆ ಮೇರೆಗೆ ಇಂತಹ ಕಾರ್ಯಾಗಾರ ಆರಂಭಿಸಿದ್ದೇವೆ ಎಂದು ಅವರು ತಿಳಿಸಿದರು.
ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಐ.ಎಸ್.ಆಂಟಿನ್, ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಬೈಲೂರು ಶಂಕರ ರಾಮ, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಶಿ , ಗಣೇಶ್ ಬಿ., ಎಚ್.ವಿ.ರಾಘವೇಂದ್ರ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು