ಕನ್ನಡ ವಾರ್ತೆಗಳು

ಸಾರ್ವಜನಿಕರ ಸಂಚಾರಿ ಸಮಸ್ಯೆ ಬಗೆಹರಿಸಲು ನಗರದಲ್ಲಿ ಸುಗಮ ಸಂಚಾರಕ್ಕೆ ಚರ್ಚೆ

Pinterest LinkedIn Tumblr

Twnhall_trfic_prblm_1

ಮಂಗಳೂರು,ಜ.18 : ನಗರದಲ್ಲಿ ಸಂಚಾರಿ ವ್ಯವಸ್ಥೆಯನ್ನು ಸುಗಮಗೊಳಿಸಲು ಸಾರ್ವಜನಿಕರೊಂದಿಗಿನ ಚರ್ಚೆಯನ್ನು ಮಂಗಳೂರಿನ ಪುರಭವನದಲ್ಲಿ ಸೋಮವಾರ ಏರ್ಪಡಿಸಲಾಯಿತು.

ಮನಪಾ ಹಾಗೂ ಪೊಲೀಸ್ ಇಲಾಖೆ ಇವರ ಸಹಭಾಗಿತ್ವದಲ್ಲಿ ಈ ಚರ್ಚೆಯು ನಡೆಯಿತು. ಶಾಸಕ ಜೆ.ಆರ್.ಲೋಬೊ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಸಾರ್ವಜನಿಕರಿಗೆ ಟ್ರಾಫಿಕ್‌ನಿಂದ ಯಾವೆಲ್ಲಾ ಸಮಸ್ಯೆಗಳು ಉಂಟುಗುತ್ತದೆ. ಹಾಗೂ ಇದನ್ನು ಹೇಗೆ ಬಗೆಹರಿಸಬಹುದೆಂಬ ಹಿನ್ನೆಲೆಯಲ್ಲಿ ಈ ಚರ್ಚೆ ಹಮ್ಮಿಕೊಳ್ಳಲಾಗಿದೆ ಹಾಗೂ ಟ್ರಾಫಿಕ್ ಸುಗಮಗೊಳಿಸಲು ಪೊಲೀಸರೊಂದಿಗೆ ಟ್ರಾಫಿಕ್ ವಾರ್ಡನ್ ಗಳು, ಸಾರ್ವಜನಿಕರು ಸಹಕರಿಸಬೇಕೆಂದು ಎಂದು ಅವರು ತಿಳಿಸಿದರು.

Twnhall_trfic_prblm_2 Twnhall_trfic_prblm_3 Twnhall_trfic_prblm_4 Twnhall_trfic_prblm_5

ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್ , ಎಸಿಪಿ ಉದಯನಾಯಕ್, ಮನಪಾ ಆಯುಕ್ತ ಗೋಪಾಲ ಕೃಷ್ಣ, ಉಪಮೇಯರ್ ಪುರುಷೋತ್ತಮ್ ಚಿತ್ರಾಪುರ, ಕೇಶವ್ ಮರೋಳಿ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Write A Comment