ಮಂಗಳೂರು,ಜ.18 : ರಬ್ಬರ್ ಬೆಳೆಗೆ ಕರ್ನಾಟಕ ರಾಜ್ಯ ಸರ್ಕಾರವು ಕೇರಳ ಮಾದರಿಯಲ್ಲಿ ಪ್ರೋತ್ಸಹ ಧನ ನೀಡುವಂತೆ ಸೋಮವಾರ ನಗರದ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಹಕ್ಕೋತ್ತಾಯ ಸಭೆಯು ನಡೆಯಿತು.
ರಬ್ಬರ್ ಗೆ ಕೇರಳದಲ್ಲಿ ಪ್ರತಿ ಕಿಲೋ 150 ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸಿದೆ, ಕೇರಳ ಬಜೆಟ್ನಲ್ಲಿ 300 ಕೋಟಿ ಅನುದಾನ ಮೀಸಲಿಟ್ಟಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಈ ಯೋಜನೆಯನ್ನು ಹಮ್ಮಿಕೊಳ್ಳಬೇಕು ಎಂದು ಸಭೆಯನ್ನು ಉದ್ದೇಶಿಸಿ ನಿತ್ಯಾನಂದ ಮುಂಡೋಡಿ ಯವರು ಮಾತನಾಡಿದರು.
248 ರೂಪಾಯಿಯಿದ್ದ ರಬ್ಬರ್ ನ ಬೆಲೆ ಈಗ 97 ಆಗಿದ್ದು ರಬ್ಬರ್ ಬೆಳೆಗಾರ ಬಹಳ ಸಂಕಷ್ಟದಲ್ಲಿದ್ದು, ಕೇಂದ್ರ ಹಾಗೂ ರಾಜ್ಯಸರಕಾರವು ಗಮನಹರಿಸಬೇಕಾಗಿದೆ. ನಾವು ಈಗಾಗಲೇ ಕೇಂದ್ರಕ್ಕೆ ಮನವಿ ನೀಡಿದ್ದು, ನಮ್ಮಸಮಸ್ಯೆಯ ಬಗ್ಗೆ ಗಮನಹರಿಸಲಿ ಎಂದರು.
ಬಿ.ಕೆ.ಜಾನಕಿ, ಗೋಪಾಲ ಕೃಷ್ಣ ಭಟ್ ಪಕಳಕುಂಜ, ರಾಜು ಶೆಟ್ಟಿ ಮೊದಲಾದವರು ಈ ಹಕ್ಕೋತ್ತಾಯ ಸಭೆಯಲ್ಲಿ ಪಾಲ್ಗೊಂಡಿದ್ದರು.