ಕನ್ನಡ ವಾರ್ತೆಗಳು

ಹೆಲ್ಮೆಟ್ ಕಡ್ಡಾಯ; ಕುಂದಾಪುರದ ಅಂಗಡಿಗಳಲ್ಲಿ ತರಹೇವಾರಿ ಹೆಲ್ಮೆಟ್‌ಗಳು; ಖರೀದಿ ಜೋರು

Pinterest LinkedIn Tumblr

ಕುಂದಾಪುರ: ಬೀದಿಬದಿ ಅಂಗಡಿಗಳಲ್ಲಿ ಕಿಕ್ಕಿರಿದು ತುಂಬಿದ ಗ್ರಾಹಕರು, ತರಹೇವಾರಿ ಹೆಲ್ಮೆಟ್ ಮಾರಾಟದಲ್ಲಿ ತೊಡಗಿದ ಮಾಲೀಕರು. ಹೌದು ಇದೆಲ್ಲಾ ಕುಂದಾಪುರದಲ್ಲಿ ಒಂದೆರಡು ದಿನಗಳಿಂದ ಕಂಡು ಬರುತ್ತಿರುವ ದೃಶ್ಯಗಳು. ಹೆಲ್ಮೆಟ್ ಕಡ್ಡಾಯ ಮಾಡಿದ ಬೆನ್ನಲ್ಲೇ ದ್ವಿಚಕ್ರ ವಾಹನ ಸವಾರರು ಫುಲ್ ಆಲರ್ಟ್ ಆಗಿದ್ದಾರೆ. ಅಷ್ಟೇ ಅಲ್ಲ ಹೆಲ್ಮೆಟ್ ಖರೀದಿಗೆ ಮುಗಿಬಿದ್ದಿದ್ದಾರೆ. ಈ ಕುರಿತ ಒಂದು ಸ್ಟೋರಿಯಿಲ್ಲಿದೆ.

Kndpr_helmate_News

ಭರ್ಜರಿ ವ್ಯಾಪಾರ:
ಈ ಹಿಂದೆ ಬೆಂಗಳೂರು ಸೇರಿದಂತೆ ಎಂಟು ಮಹಾನಗರಗಳಲ್ಲಿ ಮಾತ್ರವೇ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಿತ್ತು. ಆದರೇ ಇತ್ತೀಚೆಗೆ ಬೈಕ್ ಸವಾರರು ಹಾಗೂ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಎಂಬ ಕಟ್ಟುನಿಟ್ಟಿನ ಆದೇಶವನ್ನು ರಾಜ್ಯದೆಲ್ಲೆಡೆ ವಿಸ್ತರಿಸಿ ಸರಕಾರದ ಆದೇಶ ನೀಡಿತ್ತು. ಜ.12 ರಿಂದಲೇ ಈ ಆದೇಶ ಬಂದಿದ್ದರೂ ಕೂಡ ಜನರಲ್ಲಿ ಈ ಬಗ್ಗೆ ಅಷ್ಟಾಗಿ ಅರಿವು ಹಾಗೂ ಜಾಗೃತಿ ಮೂಡಿರಲಿಲ್ಲ. ಪ್ರಸ್ತುತ ಹೆಲ್ಮೆಟ್ ಕಡ್ಡಾಯ ವಿಚಾರ ಜನಸಾಮಾನ್ಯರ ಗಮನಕ್ಕೆ ಬರುತ್ತಿದ್ದು ಎಲ್ಲೆಡೆ ಹೆಲ್ಮೆಟ್ ಖರೀದಿ ಹೆಚ್ಚುತ್ತಿದೆ. ಕುಂದಾಪುರ ತಾಲೂಕಿನ ವಿವಿದೆಡೆಗಳಲ್ಲಿ ಬೀದಿ ಬದಿಗಳಲ್ಲಿ ಹೆಲ್ಮೆಟ್ ವ್ಯಾಪಾರಸ್ಥರು ವಿವಿಧ ನಮೂನೆಯ ಹೆಲ್ಮೆಟ್ ಮಾರಾಟದಲ್ಲಿ ತೊಡಗಿಸಿಕೊಂಡಿದ್ದು ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಯುವತಿಯರು ಸೇರಿದಂತೆ ನಾಗರೀಕರು ಭರ್ಜರಿಯಾಗಿಯೇ ಹೆಲ್ಮೆಟ್ ಖರೀದಿಸುತ್ತಿದ್ದಾರೆ. ತಾಲೂಕಿನಲ್ಲಿ ಬಹುತೇಕ ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸುತ್ತಿದ್ದು ಹಿಂಬದಿ ಸವಾರರು ಮಾತ್ರ ಹೆಲ್ಮೆಟ್ ಧರಿಸುತ್ತಿಲ್ಲ.

Kundapura_Helmate_Compalsory (14) Kundapura_Helmate_Compalsory (3) Kundapura_Helmate_Compalsory (12) Kundapura_Helmate_Compalsory (22) Kundapura_Helmate_Compalsory (23) Kundapura_Helmate_Compalsory (11) Kundapura_Helmate_Compalsory (9) Kundapura_Helmate_Compalsory (10) Kundapura_Helmate_Compalsory (8) Kundapura_Helmate_Compalsory (7) Kundapura_Helmate_Compalsory (4) Kundapura_Helmate_Compalsory (2) Kundapura_Helmate_Compalsory (18) Kundapura_Helmate_Compalsory (15) Kundapura_Helmate_Compalsory (20) Kundapura_Helmate_Compalsory (21) Kundapura_Helmate_Compalsory (16) Kundapura_Helmate_Compalsory (1) Kundapura_Helmate_Compalsory (19) Kundapura_Helmate_Compalsory (17) Kundapura_Helmate_Compalsory (13) Kundapura_Helmate_Compalsory (6)

Kundapura_Helmate_Compalsory (5)

ಹೇವಾರಿ ಹೆಲ್ಮೆಟ್‌ಳು:
ಇನ್ನು ಸವಾರರ ಬೇಡಿಕೆಗೆ ಅನುಗುಣವಾಗಿ 500 ರೂಪಾಯಿಗಳಿಂದ ಆರಂಭಗೊಂಡು ಎರಡೂವರೆ ಸಾವಿರದವರೆಗಿನ ದುಬಾರಿ ಬೆಲೆಯ ಹೆಲ್ಮೆಟ್ ಮಾರುಕಟ್ಟೆಯಲ್ಲಿ ಲಭಿಸುತ್ತಿದೆ. ಐ.ಎಸ್.ಐ ಮಾರ್ಕ್ ಇರುವ ಫುಲ್ ಕವರ್ಡ್ ಹೆಲ್ಮೆಟ್ ಉಪಯೋಗಿಸುವ ಬಗ್ಗೆಯೂ ನಿಯಮಗಳಿರುವ ಕಾರಣ ಹೆಲ್ಮೆಟ್ ಮಳಿಗೆಯಲ್ಲಿ ಮಾರಾಟ ಮಾಡಬಹುದಾದ ನಿಯಮವಿರುವ ತರಹೇವಾರಿ ಹೆಲ್ಮೆಟ್ ಸಿಗುತ್ತಿದೆ. ಇನ್ನು ಮಾಡರ್ನ್ ಹೆಲ್ಮೆಟ್‌ಗಳು ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಗರಿಷ್ಟವಾಗಿ ಮಾರಟಕ್ಕೊಳಗಾಗಿದೆ. ದಿನಕ್ಕೆ ಸಾವಿರಾರು ಹೆಲ್ಮೆಟುಗಳು ಕುಂದಾಪುರದಲ್ಲಿ ಈ ಎರಡು ದಿನಗಳಿಂದ ಮಾರಾಟವಾಗುತ್ತಿದೆ ಎನ್ನಲಾಗಿದೆ.

ಹೆಲ್ಮೆಟ್ ಕಳ್ಳರ ಭಯ.!
ಒಂದೆಡೆ ಹೆಲ್ಮೆಟ್ ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಸವಾರರಿಗೆ ಕಡ್ದಾಯ ಎಂಬ ಬೆನ್ನಲ್ಲೇ ಹೆಲ್ಮೆಟ್ ಖರೀದಿ ಜೋರಾಗಿದ್ದರೇ ಇನ್ನೊಂದೆಡೆ ಬೈಕುಗಳಲ್ಲಿ ಇಟ್ಟ ಹೆಲ್ಮೆಟುಗಳು ಮಂಗಮಾಯವಾಗುತ್ತಿರುವ ಬಗ್ಗೆ ಹಲವರಿಂದ ಕಂಪ್ಲೇಂಟ್ ಕೇಳಿಬರುತ್ತಿದೆ. ಇದೀಗಾ ಎಲ್ಲೆಡೆ ಹಬ್ಬ-ಕೆಂಡ ಸೇವೆಗಳ ಸೀಸನ್ ಆಗಿದ್ದು ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಇಟ್ಟು ಹೆಲ್ಮೆಟ್ ಅದರಲಿಟ್ಟು ಹೋಗಿ ಮರಳುವುದರೊಳಗೆ ಹೆಲ್ಮೆಟ್ ಕಣ್ಮರೆಯಾಗಿರುವ ಹಲವು ಘಟನೆಗಳು ನಡೆದಿದೆ. ಅದಕ್ಕಾಗಿಯೇ ಕೆಲವರು ಹೆಲ್ಮೆಟ್ ಕೈಯಲ್ಲಿಯೇ ಹಿಡಿದು ಹೋಗುವ ದೃಶ್ಯಗಳು ಕಂಡುಬರುತ್ತಿದೆ.

ದಂಡ ಎಷ್ಟು?
ಹೆಲ್ಮೆಟ್ ಧರಿಸದೇ ಸಂಚರಿಸಿ ಪೊಲಿಸರ ಕೈಗೆ ಸಿಕ್ಕಿ ಬಿದ್ದರೇ ಮೊದಲ ಬಾರೀ ನೂರು ರೂಪಾಯಿ, ಎರಡನೇ ಬಾರೀ ಮುನ್ನೂರು ರೂ. ಹಾಗೂ ಮೂರನೇ ಬಾರಿ ಐನೂರು ರೂ. ದಂಡ ವಿಧಿಸಲಾಗುತ್ತದೆ. ಇದು ಮತ್ತು ಮುಂದುವರಿದಲ್ಲಿ ನ್ಯಾಯಾಲಯಕ್ಕೆ ಹಾಗೂ ಲೈಸೆನ್ಸ್ ಕ್ಯಾನ್ಸೆಲ್ ಮಾಡುವ ನಿಯಮವೂ ಇದೆ ಎನ್ನಲಾಗಿದೆ.

ಸ್ವಲ್ಪ ರಿಯಾಯಿತಿ ಇದೆ..?
ಬುಧವಾರದಿಂದ ಹೆಲ್ಮೆಟ್ ಕಡ್ಡಾಯವಾದರೂ ಕೂಡ ಇನ್ನಷ್ಟು ಜನರಿಗೆ ಈ ಮಾಹಿತಿ ತಲಪುವ ನಿಟ್ಟಿನಲ್ಲಿ ಪೊಲಿಸರು ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆ ಇದೆ, ಗ್ರಾಮೀಣ ಭಾಗಗಳ ಜನರಿಗೂ ಈ ವಿಚಾರ ತಲುಪುವ ಅಗತ್ಯತೆಯಿದ್ದು ಫೆಬ್ರವರಿ ಒಂದನೇ ತಾರಿಖಿನವೆರೆಗೂ ಪೊಲೀಸರು ಯವುದೇ ರೀತಿಯಾದ ದಂಡ ವಿಧಿಸದಿರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಇಂದಿನಿಂದ ಎಲ್ಲಾ ದ್ವಿಚಕ್ರ ವಾಹನ ಸವಾರರಲ್ಲಿ ಹೆಲ್ಮೆಟ್ ಕಡ್ಡಾಯದ ಬಗ್ಗೆ ಎಚ್ಚರಿಕೆ ನೀಡುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆನ್ನಲಾಗಿದೆ.

ಒಟ್ಟಿನಲ್ಲಿ ರಸ್ತೆ ಅಪಘಾತಗಳಲ್ಲಿ ಹಲವರು ತಲೆಗೆ ಏಟಾಗಿ ಸಾವನ್ನಪ್ಪುತ್ತಿರುವುದು ಸುಳ್ಳಲ್ಲ, ಈ ನಿಟ್ಟಿನಲ್ಲಿ ಸರಕಾರ ಈ ಆದೇಶ ರಸ್ತೆ ಅಪಘಾತಗಳಿಂದ ಉಂಟಾಗುವ ಸಾವು ನೋವನ್ನು ತಡೆಯಲಿ ಎಂಬ ಮಾತುಗಳು ಪ್ರಜ್ಞಾವಂತ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.

ಚಿತ್ರ,ವರದಿ- ಯೋಗೀಶ್ ಕುಂಭಾಸಿ

Write A Comment