ಬಂಟ್ವಾಳ,ಜ.21 : ಟಿಪ್ಪು ಜಯಂತಿ ಆಚರಣೆ ಸಂದರ್ಭ ಬಿಸಿ ರೋಡ್‌ನಲ್ಲಿ ಕಲ್ಲು ತೂರಾಟ ಮತ್ತು ಕೋಮು ಗಲಭೆ ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದ ಭುವಿತ್ ಶೆಟ್ಟಿಗೆ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ.
ನ್ಯಾಯಮೂರ್ತಿ ಎ.ವಿ ಚಂದ್ರಶೇಖರ ಈ ಪ್ರಕರಣದಲ್ಲಿ ಭುವಿತ್ ಶೆಟ್ಟಿ ನೇರವಾಗಿ ಪಾಲ್ಗೊಂಡಿರುವ ಬಗ್ಗೆ ಸೂಕ್ತ ಸಾಕ್ಷಾಧಾರಗಳು ದಾಖಲಾಗಿಲ್ಲದಿರುವುದನ್ನು ಪರಿಗಣಿಸಿ ಆತನಿಗೆ ಜಾಮೀನು ನೀಡಿದೆ.
ಭುವಿತ್ ಶೆಟ್ಟಿ ನವೆಂಬರ್ 12 ರಂದು ಬಿಸಿ ರೋಡ್‌ನಲ್ಲಿ ನಡೆದ ಹರೀಶ್ ಪೂಜಾರಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದು ಈ ಪ್ರಕರಣದಲ್ಲೂ ಆತ ಜಾಮೀನು ಅರ್ಜಿ ಸಲ್ಲಿಸಿದ್ದಾನೆ ಎನ್ನಲಾಗಿದೆ.