ಕನ್ನಡ ವಾರ್ತೆಗಳು

ಪ್ಯಾನ್ ಕಾರ್ಡ್ ಕಡ್ಡಾಯ ವಿರೋಧಿಸಿ ಸ್ವರ್ಣ ವ್ಯಾಪಾರಿಗಳಿಂದ ಪ್ರತಿಭಟನೆ.

Pinterest LinkedIn Tumblr

gold_pan_card_1

ಮಂಗಳೂರು,ಜ.21: ಚಿನ್ನಾಭರಣ ವ್ಯವಹಾರದಲ್ಲಿ 2 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಖರೀದಿಗೆ ಪ್ಯಾನ್‌ ಕಾರ್ಡ್‌ ಕಡ್ಡಾಯ ಮಾಡಿರುವ ಸರಕಾರದ ನೀತಿಯನ್ನು ವಿರೋಧಿಸಿ ದ.ಕ ಜಿಲ್ಲಾ ಸ್ವರ್ಣ ವ್ಯಾಪಾರಿ ಸಂಘದವರು ಮೇಣದ ಬತ್ತಿ ಉರಿಸಿ ಮೌನ ಪ್ರತಿಭಟನೆ ನಡೆಸಿದ್ದಾರೆ.

ಕೇಂದ್ರ  ಸರಕಾರದ ಈ ಕಾನೂನು ಸ್ವರ್ಣೋದ್ಯಮಕ್ಕೆ  ಮಾರಕವಾಗಿ ಪರಿಣಮಿಸಿದೆ. ದೇಶದ ಜನಸಂಖ್ಯೆಯ ಸುಮಾರು ಶೇ 86ರಷ್ಟು ಜನರು ಪಾನ್ ಕಾರ್ಡ್ ಹೊಂದಿಲ್ಲ. ಇದರಿಂದ ಈ ದೇಶದ ಜೆಡಿಪಿಯಲ್ಲಿ ಸುಮಾರು ಶೇ3.5 ರಷ್ಟು ಪಾಲು ನೀಡುತ್ತಿರುವ ಸ್ಪರ್ಣೊದ್ಯಮ ಅವನತಿಯತ್ತ ಸಾಗಲಿದೆ ಎಂದು ಕೋರಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅವರಿಗೆ ದ.ಕ ಜಿಲ್ಲಾ ಸ್ವರ್ಣ ವ್ಯಾಪಾರಿ ಸಂಘದವರು ಮನವಿಯನ್ನು ಸಲ್ಲಿಸಿದ್ದರು.

gold_pan_card_4 gold_pan_card_3 gold_pan_card_2

ಈ ಪ್ಯಾನ್ ಕಾರ್ಡ್ ಜಾರಿಗೆ ಬಂದರೆ ಸ್ವರ್ಣೋದ್ಯಮದ ಬೆಳವಣಿಗೆಗೆ ಮಾರಕವಾಗಿದೆ, ಇದು,ಅಪ್ರಾಯೋಗಿಕ ತೀರ್ಮಾನವಾಗಿದ್ದು ಇದನ್ನು ತಿದ್ದುಪಡಿ ಮಾಡಬೇಕು ಹಾಗೂ ಪ್ಯಾನ್‌ ಕಾರ್ಡ್‌ ಕಡ್ಡಾಯ ಮಾಡಿರುವುದು ಚಿನ್ನ ಖರೀದಿಸುವ ಸಾಮಾನ್ಯ ಜನತೆಗೆ ಹೊಡೆತ ಉಂಟುಮಾಡುತ್ತದೆ ಎಂದು ಪ್ರತಿಭಟನಾಕಾರರು ಹೇಳಿದ್ದರು.

Write A Comment