ಕನ್ನಡ ವಾರ್ತೆಗಳು

ಬಾರ್ಕೂರು ಏಕನಾಥೇಶ್ವರೀ ದೇವಸ್ಥಾನದ ಶಿಲನ್ಯಾಸ; ಇದು ದೇವಾಡಿಗರ ವಿಶ್ವರೂಪ ದರ್ಶನ:ಪಲಿಮಾರು ಶ್ರೀ(updated)

Pinterest LinkedIn Tumblr

ಉಡುಪಿ: ದೇವರನ್ನು ಅತೀ ಹತ್ತಿರದಿಂದ ನೋಡಿದ ಹಾಗೂ ದೇವರನ್ನು ಆಡಿಸಿದ ಸಮಾಜವೇ ದೇವಾಡಿಗ ಸಮಾಜವಾಗಿದೆ. ದೇವಾಡಿಗರು ದೇವರ ಅನುಗ್ರಹವನ್ನು ಪಡೆದವರಾಗಿದ್ದಾರೆ. ಒಂದು ದಿನದಲ್ಲಿ ಇಷ್ಟು ಮಕ್ಕಳನ್ನು ಒಟ್ಟು ಸೇರಿಸುವ ಮೂಲಕ ತನ್ನ ದೇಗುಲವನ್ನು ಶೀಘ್ರದಲ್ಲಿಯೇ ತಾಯಿ ಏಕನಾಥೇಶ್ವರೀ ಕಟ್ಟಿಸಿಕೊಳ್ಳುವಳು, ಇಂದು ದೇವಾಡಿಗರ ವಿಶ್ವರೂಪ ದರ್ಶನವಾಗಿದೆ.ನಾವು ದೇವರನ್ನು ಎಷ್ಟು ಪೂಜಿಸುತ್ತೇವೋ ಹಾಗೆಯೇ ದೇವರು ನಮ್ಮನ್ನು ಅಷ್ಟು ಮೆಚ್ಚಿಕೊಳ್ಳುತ್ತಾನೆ, ದೇವರ ಹುಂಡಿ ತುಂಬಿದರೇ ಮನೆಯ ಖಜಾನೆ ತುಂಬಿದ ಹಾಗೆ ಎಂದು ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ನುಡಿದರು.

ಅವರು ಬಾರ್ಕೂರಿನ ಕಚ್ಚೂರಿನಲ್ಲಿ ಐದೂವರೆ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಶ್ರೀ ಏಕನಾಥೇಶ್ವರೀ ದೇವಸ್ಥಾನ’ದ ಶಿಲನ್ಯಾಸ ಸಮಾರಂಭವನ್ನು ಗುರುವಾರ ಬೆಳಿಗ್ಗೆ ನೆರವೇರಿಸಿ ಬಳಿಕ ಆಶೀರ್ವಚನವನ್ನು ನೀಡಿದರು.

Barkuru_Yekanatheshwari Temple_Stone Laying (34) Barkuru_Yekanatheshwari Temple_Stone Laying (23) Barkuru_Yekanatheshwari Temple_Stone Laying (26) Barkuru_Yekanatheshwari Temple_Stone Laying (10) Barkuru_Yekanatheshwari Temple_Stone Laying (8) Barkuru_Yekanatheshwari Temple_Stone Laying (5) Barkuru_Yekanatheshwari Temple_Stone Laying (4) Barkuru_Yekanatheshwari Temple_Stone Laying (6) Barkuru_Yekanatheshwari Temple_Stone Laying (39) Barkuru_Yekanatheshwari Temple_Stone Laying (40) Barkuru_Yekanatheshwari Temple_Stone Laying (42) Barkuru_Yekanatheshwari Temple_Stone Laying (28)

Barkuru_Yekanatheshwari Temple_Stone Laying (14)

Barkuru_Yekanatheshwari Temple_Stone Laying (33)

Barkuru_Yekanatheshwari Temple_Stone Laying (38) Barkuru_Yekanatheshwari Temple_Stone Laying (25) Barkuru_Yekanatheshwari Temple_Stone Laying (21) Barkuru_Yekanatheshwari Temple_Stone Laying (17) Barkuru_Yekanatheshwari Temple_Stone Laying (36) Barkuru_Yekanatheshwari Temple_Stone Laying (13)

Barkuru_Yekanatheshwari Temple_Stone Laying (29)

Barkuru_Yekanatheshwari Temple_Stone Laying (16)

Barkuru_Yekanatheshwari Temple_Stone Laying (11) Barkuru_Yekanatheshwari Temple_Stone Laying (1) Barkuru_Yekanatheshwari Temple_Stone Laying (2) Barkuru_Yekanatheshwari Temple_Stone Laying (3) Barkuru_Yekanatheshwari Temple_Stone Laying (12) Barkuru_Yekanatheshwari Temple_Stone Laying (9) Barkuru_Yekanatheshwari Temple_Stone Laying (7) Barkuru_Yekanatheshwari Temple_Stone Laying (15)   Barkuru_Yekanatheshwari Temple_Stone Laying (19)

Barkuru_Yekanatheshwari Temple_Stone Laying (20)

Barkuru_Yekanatheshwari Temple_Stone Laying (22)  Barkuru_Yekanatheshwari Temple_Stone Laying (24) Barkuru_Yekanatheshwari Temple_Stone Laying (27)  Barkuru_Yekanatheshwari Temple_Stone Laying (30) Barkuru_Yekanatheshwari Temple_Stone Laying (31) Barkuru_Yekanatheshwari Temple_Stone Laying (32)

Barkuru_Yekanatheshwari Temple_Stone Laying (18)

Barkuru_Yekanatheshwari-Temple_Stone-Laying. (3)

Barkuru_Yekanatheshwari Temple_Stone Laying (35) Barkuru_Yekanatheshwari Temple_Stone Laying (41) Barkuru_Yekanatheshwari Temple_Stone Laying (37)

Barkuru Yekanateshwari_Temple_Stone Laying (48)

ದೇವರ ಉಪಾಸನೆ ಅತ್ಯಗತ್ಯ: ಸಚಿವ ಸೊರಕೆ
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಚಾರಿತ್ರಿಕ ಇತಿಹಾಸವುಳ್ಳ ಬಾರ್ಕೂರಿನಲ್ಲಿ ಏಕನಾಥೇಶ್ವರೀ ದೇವಸ್ಥಾನ ನಿರ್ಮಾಣಗೊಳ್ಳುವ ಮೂಲಕ ಇನ್ನಷ್ಟು ಕೀರ್ತಿ ಹೊಂದಿ ಪರಿಪೂರ್ಣಗೊಳ್ಳಲಿದೆ. ದೇವಾಡಿಗ ಸಮಾಜವು ಸಣ್ಣ ಸಮುದಾಯವಾಗಿದ್ದರೂ ಕೂಡ ಸ್ವಂತ ಶಕ್ತಿಯ ಮೇಲೆ ಕೀರ್ತಿಯನ್ನು ಸಂಪಾದಿಸಿದ ಸಾಧಕರು ಸಮಾಜದಲ್ಲಿ ಹಲವರಿದ್ದಾರೆ. ಮನುಷ್ಯನಲ್ಲಿ ಎಷ್ಟೇ ಹಣ, ಆಸ್ತಿ-ಪಾಸ್ತಿಗಳಿದ್ದರೂ ಕೂಡ ದೇವರ ಪ್ರಾರ್ಥನೆ ಮಾತ್ರದಿಂದಲೇ ಮನಃಶಾಂತಿ ಲಭಿಸುತ್ತದೆ. ದೇವರನ್ನು ಒಳಿಸಿಕೊಳ್ಳಲು ದಾನಧರ್ಮದಂತಹ ಕಾರ್ಯಗಳನ್ನು ಹೆಚ್ಚುಹೆಚ್ಚಾಗಿ ಮಾಡಬೇಕಿದೆ. ದೇವಾಡಿಗ ಸಮುದಾಯದವರೆಲ್ಲರೂ ಒಗ್ಗೂಡಿ ಹಕ್ಕಿಗಳಂತೆ ಬೆರೆತು ಈ ದೇವಾಲಯವನ್ನು ನಿರ್ಮಿಸಿ, ಇದಕ್ಕೆ ಸರಕಾರದ ಸಂಪೂರ್ಣ ನೀಡುವುದಾಗಿಯೂ ಅವರು ತಿಳಿಸಿದರು.

ಎಲ್ಲರ ಕರಸೇವೆ ಇರಲಿ: ಕೋಟ ಶ್ರೀನಿವಾಸ್ ಪೂಜಾರಿ
ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ದೇವಸ್ಥಾನಗಳನ್ನು ಕಟ್ಟುವುದು ತುಂಬಾ ಕಷ್ಟದ ವಿಚಾರವಾಗಿದ್ದು ಅದರಲ್ಲಿಯೂ ಸಣ್ಣ ಸಮುದಾಯವಾದ ದೇವಾಡಿಗ ಸಮಾಜವು ಬದುಕಿಗೆ ಆದರ್ಶವಾಗಬಲ್ಲ ಕುಲ ದೇವರ ದೇವಾಲಯವನ್ನು ಸ್ಥಾಪಿಸ ಹೊರಟಿರುವುದು ಎಲ್ಲರಿಗೂ ಮಾದರಿಯಾಗಿದೆ. ಧಾರ್ಮಿಕ ನಂಬಿಕೆಗಳನ್ನು ಉಳಿಸಿಕೊಳ್ಳುವ ಪ್ರಯತ್ನದ ಜೊತೆಗೆ ಸಾಂಸ್ಕ್ರತಿಕ ನಗರಿ ಬಾರ್ಕೂರಿನಲ್ಲಿ ದೇವಸ್ಥಾನ ನಿರ್ಮಾಣವಾಗುತ್ತಿರುವುದು ಉತ್ತಮವಾಗಿದೆ. ದೇವಸ್ಥಾನ ನಿರ್ಮಾಣದಲ್ಲಿ ಪ್ರತಿಯೊಬ್ಬರ ಬೆವರ ಹನಿ ಇರಬೇಕಾಗಿದ್ದು, ಹಣ ನೀಡಲಾಗದವರು ತಮ್ಮ ಕರ ಸೇವೆ ನೀಡಿ ದೇವಳದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ, ಒಗ್ಗಟ್ಟಿನ ಪ್ರಯತ್ನದ ಮೂಲಕ ದೇವಳ ನಿರ್ಮಾಣವಾಗಲಿ ಎಂದು ಹಾರೈಸಿದರು. ಇನ್ನು ದೇವಾಡಿಗರ ಸಂಘ‌ಇತ್ತೀಚಿನ ಹಲವು ವರ್ಷಗಳಲ್ಲಿ ದೇಶವಿದೇಶಗಳನ್ನು ವ್ಯಾಪಿಸಿದರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ದುಬೈ ಉದ್ಯಮಿ ಹರೀಶ್ ಶೇರಿಗಾರ್ ಮಾತನಾಡಿ, ಇದೊಂದು ಐತಿಹಾಸಿಕ ದಿನವಾಗಿದ್ದು ಈ ಕಾರ್ಯಕ್ರಮದಲ್ಲಿ ಪಾಲ್ಘೊಂಡು ಅತೀವ ಸಂತಸವಾಗಿದೆ ಎಂದರು. ಅಲ್ಲದೇ ತಮ್ಮ ಕುಟುಂಬದ ವತಿಯಿಂದ ದೇವಸ್ಥಾನ ನಿರ್ಮಾಣಕ್ಕೆ ಕುಟುಂಬದ ಪರವಾಗಿ 10 ಲಕ್ಷ ದೇಣಿಗೆ ನೀಡುವುದಾಗಿಯೂ ಘೋಷಿಸಿದರು.

Barkuru Yekanateshwari_Temple_Stone Laying (9) Barkuru Yekanateshwari_Temple_Stone Laying (14) Barkuru Yekanateshwari_Temple_Stone Laying (19) Barkuru Yekanateshwari_Temple_Stone Laying (20) Barkuru Yekanateshwari_Temple_Stone Laying (24) Barkuru Yekanateshwari_Temple_Stone Laying (30) Barkuru Yekanateshwari_Temple_Stone Laying (22) Barkuru Yekanateshwari_Temple_Stone Laying (32) Barkuru Yekanateshwari_Temple_Stone Laying (37) Barkuru Yekanateshwari_Temple_Stone Laying (34) Barkuru Yekanateshwari_Temple_Stone Laying (40) Barkuru Yekanateshwari_Temple_Stone Laying (28) Barkuru Yekanateshwari_Temple_Stone Laying (31) Barkuru Yekanateshwari_Temple_Stone Laying (41) Barkuru Yekanateshwari_Temple_Stone Laying (45)  Barkuru Yekanateshwari_Temple_Stone Laying (43) Barkuru Yekanateshwari_Temple_Stone Laying (46) Barkuru Yekanateshwari_Temple_Stone Laying (42) Barkuru Yekanateshwari_Temple_Stone Laying (51) Barkuru Yekanateshwari_Temple_Stone Laying (50) Barkuru Yekanateshwari_Temple_Stone Laying (49) Barkuru Yekanateshwari_Temple_Stone Laying (47) Barkuru Yekanateshwari_Temple_Stone Laying (54)

Barkuru Yekanateshwari_Temple_Stone Laying (44) Barkuru Yekanateshwari_Temple_Stone Laying (23) Barkuru Yekanateshwari_Temple_Stone Laying (52) Barkuru Yekanateshwari_Temple_Stone Laying (38) Barkuru Yekanateshwari_Temple_Stone Laying (35) Barkuru Yekanateshwari_Temple_Stone Laying (39) Barkuru Yekanateshwari_Temple_Stone Laying (36) Barkuru Yekanateshwari_Temple_Stone Laying (26) Barkuru Yekanateshwari_Temple_Stone Laying (25) Barkuru Yekanateshwari_Temple_Stone Laying (18) Barkuru Yekanateshwari_Temple_Stone Laying (17) Barkuru Yekanateshwari_Temple_Stone Laying (11) Barkuru Yekanateshwari_Temple_Stone Laying (7) Barkuru Yekanateshwari_Temple_Stone Laying (6) Barkuru Yekanateshwari_Temple_Stone Laying (1) Barkuru Yekanateshwari_Temple_Stone Laying (3)

Barkuru Yekanateshwari_Temple_Stone Laying (29)

Barkuru Yekanateshwari_Temple_Stone Laying (8) Barkuru Yekanateshwari_Temple_Stone Laying (5) Barkuru Yekanateshwari_Temple_Stone Laying (4) Barkuru Yekanateshwari_Temple_Stone Laying (10) Barkuru Yekanateshwari_Temple_Stone Laying (2) Barkuru Yekanateshwari_Temple_Stone Laying (12) Barkuru Yekanateshwari_Temple_Stone Laying (13) Barkuru Yekanateshwari_Temple_Stone Laying (15) Barkuru Yekanateshwari_Temple_Stone Laying (21) Barkuru Yekanateshwari_Temple_Stone Laying (27)  Barkuru Yekanateshwari_Temple_Stone Laying (55) Barkuru Yekanateshwari_Temple_Stone Laying (53)  Barkuru Yekanateshwari_Temple_Stone Laying (16)

Barkuru_Yekanatheshwari-Temple_Stone-Laying. (1) Barkuru_Yekanatheshwari-Temple_Stone-Laying. (2)

ದಾನಿಗಳಿಂದ ದೇಣಿಗೆ:
ಶ್ರೀ ಏಕನಾಥೆಶ್ವರೀ ದೇವಸ್ಥಾನ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಮತ್ತು ವಿಶ್ವಸ್ಥ ಯು.ಧರ್ಮಪಾಲ್ ದೇವಾಡಿಗ 15 ಲಕ್ಷ, ವಿಶ್ವಸ್ಥರಾದ ದಿನೇಶ್ ಚಂದ್ರಶೇಖರ್ ದೇವಾಡಿಗ ಕುಟುಂಬಿಕರು 25 ಲಕ್ಷ ಮತ್ತು ವಿಶ್ವಸ್ಥ ನಾರಾಯಣ ದೇವಾಡಿಗ ದುಬೈ 15 ಲಕ್ಷ ದೇಣಿಗೆ ನೀಡುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಹಲವು ದಾನಿಗಳು ಮುಂಗಡ ಹಣವನ್ನು ದೇವಳಕ್ಕೆ ದೇಣಿಗೆ ರೂಪದಲ್ಲಿ ನೀಡಿದರು ದೇವಾಡಿಗ ಸಮಾಜದ ವಿವಿಧ ಭಾಗಗಳ ಸಂಘಗಳು ದೇಣಿಗೆ ನೀಡಿದ್ದಲ್ಲದೇ ಇನ್ನಷ್ಟು ದೇಣಿಗೆಯನ್ನು ದೇವಾಲಯಕ್ಕೆ ನೀಡುವ ಭರವಸೆಯನ್ನು ನೀಡಿದರು.

ಶ್ರೀ ಏಕನಾಥೆಶ್ವರೀ ದೇವಸ್ಥಾನ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಯು.ಧರ್ಮಪಾಲ್ ದೇವಾಡಿಗ ದೇವಸ್ಥಾನ ನಿರ್ಮಾಣದ ಸಮಿತಿ ಬಗ್ಗೆ ವಿವರ ನೀಡಿದರು, ಶ್ರೀ ಏಕನಾಥೇಶ್ವರೀ ದೇವಸ್ಥಾನದ ವಿಶ್ವಸ್ಥ ಮಂಡಳಿ ಅಧ್ಯಕ್ಷ ಬಿ. ಅಣ್ಣಯ್ಯ ಶೇರಿಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭಕೋರಿದರು.

ಕಾರ್ಯಕ್ರಮದಲ್ಲಿ ಸ್ಥಳ ದಾನಿಗಳನ್ನು, ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಅಲ್ಲದೇ ದೇಣಿಗೆ ಸಂಗ್ರಹದ ಉಪಯೋಗಕ್ಕಾಗಿ ‘ಕಾಣಿಕೆ ಹುಂಡಿ’ ಪರಿಕಲ್ಪನೆಯನ್ನು ಯೋಜಿಸಿದ್ದು ಅದರ ಬಿಡುಗಡೆಯನ್ನು ಸುರೇಶ್ ಜಿ. ಪಡುಕೋಣೆ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರು ಹಾಗೂ ಉದ್ಯಮಿ ಬಿ. ಶಾಂತರಾಮ ಶೆಟ್ಟಿ, ಬಾರ್ಕೂರು ಗ್ರಾ.ಪಂ. ಅಧ್ಯಕ್ಷೆ ಶೈಲಾ ಡಿಸೋಜಾ, ನಿವೃತ್ತ ಉಪನ್ಯಾಸಕ ಡಾ.ಬಿ. ಮಂಜುನಾಥ ಸೋಮಯಾಜಿ, ಬಾರ್ಕೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ. ಮಂಜುನಾಥ ರಾವ್, ಚೌಳಿಕೇರಿ ಶ್ರೀ ಭೈರವ ಗಣಪತಿ ಹಾಗೂ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಕೃಷ್ಣಪ್ಪ ಉಪ್ಪೂರು, ಬಾರ್ಕೂರು ಶ್ರೀ ವೀರಭದ್ರ ದೇವಸ್ಥಾನದ ಧರ್ಮದರ್ಶಿ ಶ್ರೀನಿವಾಸ್ ಶೆಟ್ಟಿಗಾರ್, ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಧರ್ಮಗುರು ಐವನ್ ಸಿಕ್ವೇರಾ, ಮುಂಬೈ ಉದ್ಯಮಿ ಬಾಬು ಶಿವ ಪೂಜಾರಿ, ಮೂಡುಕೇರಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಉದಯಕುಮಾರ್ ಶೆಟ್ಟಿ, ವೇಣುಗೋಪಾಲ ದೇವಸ್ಥಾನದ ಧರ್ಮದರ್ಶಿ ಕೆ.ಗೋಪಾಲರಾವ್ ಕಿನ್ನಿಮೂಲ್ಕಿ, ಮಾಸ್ತಿ‌ಅಮ್ಮ ದೇವಸ್ಥಾನದ ಮೊಕ್ತೇಸರ ಅನಂತಪಧ್ಮನಾಭ,ಬಾರ್ಕೂರು ಪಟ್ಟಾಬಿ ರಾಮಚಂದ್ರ ದೇವಸ್ಥಾನದ ಕಾರ್ಯದರ್ಶಿ ವೆಂಕಟರಮಣ ಭಂಡಾರ್ಕಾರ್, ಬಾರ್ಕೂರು ಬಟ್ಟೆ ವಿನಾಯಕ ದೇವಸ್ಥಾನದ ಅರ್ಚಕ ಗಣಪತಿ ಭಟ್, ಕಚ್ಚೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅಧ್ಯಕ್ಷ ಮಧುಸೂದನ್, ಬಾರ್ಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನದ ವಿಶ್ವಸ್ಥರಾದ ಉಪಾಧ್ಯಕ್ಷರಾದ ಜನಾರ್ಧನ ಎಸ್. ದೇವಾಡಿಗ, ನಾರಾಯಣ ಎಂ. ದೇವಾಡಿಗ ದುಬೈ, ದಿನೇಶ್ ಸಿ. ದೇವಾಡಿಗ, ಸುರೇಶ್ ಜಿ. ಪಡುಕೋಣೆ, ನರಸಿಂಹ ಬಿ. ದೇವಾಡಿಗ, ಜನಾರ್ಧನ ದೇವಾಡಿಗ ಬಾರ್ಕೂರು, ಹಿರಿಯಡ್ಕ ಮೋಹನದಾಸ್ ಅಲ್ಲದೇ ಸಲಹೆಗಾರರಾದ ವಾಮನ್ ಮರೋಲಿ, ವಾಸು ಎಸ್ ದೇವಾಡಿಗ ಮುಂಬೈ, ರಾಜು ದೇವಾಡಿಗ ತ್ರಾಸಿ, ಶೀನ ದೇವಾಡಿಗ, ಆನಂದ ಎಸ್ ದೇವಾಡಿಗ ದುಬೈ, ಮುಂಬೈ ಸಮಿತಿ ಜಂಟಿ ಅಧ್ಯಕ್ಷರಾದ ಸುಬ್ಬ ಜಿ. ದೇವಾಡಿಗ, ನಾಗರಾಜ್ ಜಿ. ಪಡುಕೋಣೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿಶ್ವಸ್ಥ ನರಸಿಂಹ ದೇವಾಡಿಗ ಸ್ವಾಗತಿಸಿ, ಪ್ರವೀಣ್ ದೇವಾಡಿಗ ಹಾಗೂ ವಸಂತ್ ಕುಮಾರ್ ನಿಟ್ಟೆ, ರಾಘವೇಂದ್ರ ಸಿ. ಹಿರಿಯಡ್ಕ , ಗಣೇಶ್ ಶೇರಿಗಾರ್ ಮುಂಬೈ ನಿರೂಪಿಸಿದರು. ಶಂಕರ ದೇವಾಡಿಗ ಅಂಕದಕಟ್ಟೆ ವಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಕೃಷ್ಣ ದೇವಾಡಿಗ ಬಾರ್ಕೂರು ಮತ್ತು ತಂಡದವರು ಪ್ರಾರ್ಥಿಸಿದರು.

ವರದಿ,ಚಿತ್ರ- ಯೋಗೀಶ್ ಕುಂಭಾಸಿ

Write A Comment