ಕನ್ನಡ ವಾರ್ತೆಗಳು

ಉಳ್ಳಾಲ : ಎಸ್ಸೆಸ್ಸೆಫ್ ಕುತುಬಿನಗರ ಮೀನಾದಿನಲ್ಲಿ ಬುರ್ದಾ ಮಜ್ಲಿಸ್ ಕಾರ್ಯಕ್ರಮ.

Pinterest LinkedIn Tumblr

kinya_Burda_photo_1

ಉಳ್ಳಾಲ,ಜ.23  : ಸುನ್ನತ್ ಜಮಾ‌ಅತ್‌ನ್ನು ಉಳಿಸಿ ಬೆಳೆಸಲು ಧಾಮಿಕ ಶಿಕ್ಷಣ ಕೆಂದ್ರವನ್ನು ಆರಂಭಿಸಿದ ಊರು ಎರಡು ದಶಕಗಳ ಹಿಂದೆಯೇ ಇಲ್ಲಿ ಶಿಕ್ಷಣ ಕೇಂದ್ರ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕಿನ್ಯ ಗ್ರಾಮದಲ್ಲಿ ಶಿಕ್ಷಣ ಕೇಂದ್ರ ಬೆಳೆದು ನಿಂತಿದೆ ಎಂದು ಅಶ್ರಫ್ ಸಖಾಫಿ ಕನ್ನಂಗಾರ್ ಹೇಳಿದರು

ಅವರು ಕಿನ್ಯ ಗ್ರಾಮದ ಕುತುಬಿನಗರದಲ್ಲಿ ಎಸ್‌ವೈ‌ಎಸ್ ಮತ್ತು ಎಸ್ಸೆಸ್ಸೆಫ್ ಕುತುಬಿನಗರ ಮೀನಾದಿ ಇದರ ಜಂಟಿ ಆಶ್ರಯದಲ್ಲಿ ಗುರುವಾರ ನಡೆದ ಬುರ್ದಾ ಮಜ್ಲಿಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಎಸ್ಸೆಸೆ‌ಎಫ್ ಮತ್ತು ಎಸ್‌ವೈ‌ಎಸ್ ಇಲ್ಲಿ ಧಾರ್ಮಿಕ ಶಿಕ್ಷಣ ಕೆಂದ್ರದ ಬೆಳವಣಿಗೆಗೆ ಒತ್ತು ನೀಡುತ್ತಿದೆ. ಈ ಸಂಘಟನೆಯಲ್ಲಿದ್ದುಕೊಂಡು ಇಸ್ಮಾಂನ ತತ್ವಾದರ್ಶಗಳಡಿಯಲ್ಲಿ ಅಭಿವೃದ್ದಿಗೆ ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು.

ದುವಾ ನೇತೃತ್ವವನ್ನು ವಹಿಸಿದ್ದ ಅಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ಮಾತನಾಡಿ, ವಾಟ್ಸ್‌ಅಪ್, ಫೇಸ್‌ಬುಕ್‌ನಿಂದ ಹೆಣ್ಣುಮಕ್ಕಳು ದಾರಿತಪ್ಪುತ್ತಿದ್ದಾರೆ. ಅಂತರ್ಜಾಳವನ್ನು ಬಳಕೆ ಮಾಡಿ ಇಸ್ಲಾಂ ಸಿದ್ಧಾಂತಗಳನ್ನು ಕಡೆಗಣಿಸಿ ನಡೆದರೆ ಅವರಿಗೆ ಯಾವುದೇ ರಕ್ಷಣೆ ಸಿಗದು. ಫೇಸ್‌ಬುಕ್ ಮೂಲಕ ಬೇಡದ ಕಾರ್ಯಗಳನ್ನು ಮಾಡಿ ಸಂಘರ್ಷಕ್ಕೆ ಅವಕಾಶ ನೀಡುವವರು ಮೊದಲು ಧರ್ಮದ ಬಗ್ಗೆ ಅರಿತುಕೊಳ್ಳಬೇಕು ಎಂದು ಹೇಳಿದರು.

kinya_Burda_photo_2 kinya_Burda_photo_3 kinya_Burda_photo_4 kinya_Burda_photo_5 kinya_Burda_photo_6 kinya_Burda_photo_7 kinya_Burda_photo_8 kinya_Burda_photo_9

ಬುರ್ದಾಮಜ್ಲಿಸ್ ಕಾರ್ಯಕ್ರಮದಲ್ಲಿ ಮಾಸ್ಟರ್ ಸವಾದ್ ಮಲಯಾಳಂ ಉರ್ದು ಹಾಡು ಹಾಡಿದರು. ಮಾಸ್ಟರ್ ಅಮೀನ್ ತಳಿಪರಂಬು ಮಲಯಾಳಂನಲ್ಲಿ ಹಾಡಿದರು. ಮಾಸ್ಟರ್ ಮಹಮ್ಮದ್ ಫಝಲ್ ಮತ್ತು ಹಾಫಿಳ್ ಮುಹಮ್ಮದ್ ಫಲ್‌ಳ್ ಕಣ್ಣೂರು ನ‌ಅತೇ ಆಲಾಪನೆ ಗೈದರು. ಆರೀಫ್ ತಳಿಪರಂಬು ಮಲಯಾಳಂ ಹಾಡು ಹಾಡಿದರು.

ಎಸ್‌ವೈ‌ಎಸ್ ದ.ಕ. ಜಿಲ್ಲಾ ಉಪಾಧ್ಯಕ್ಷ ಅಶ್-ಅರಿಯ್ಯಾ ಸಿ.ಎಚ್. ಮಹಮ್ಮದಾಲಿ ಸಖಾಫಿ ಸುರಿಬೈಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅಬ್ದುಲ್ ಸಮದ್ ಅಮಾನಿ ಉಸ್ತಾದ್, ಉದ್ಯಮಿ ಏಷ್ಯನ್ ಬಾವ ಹಾಜಿ, ಅಶ್ರಫ್ ಸಖಾಫಿ ಕಿನ್ಯ, ಅಜ್ಜಿನಡ್ಕ ಮಳ್‌ಹರ್ ಅಲ್ ಹಿದಾಯ ಸಂಸ್ಥೆಯ ಸಂಚಾಲಕ ಎನ್.ಎಸ್. ಉಮರಬ್ಬ, ಕೆಸಿರೋಡ್ ಎಸ್‌ವೈ‌ಎಸ್ ಸದಸ್ಯ ಉಸ್ಮಾನ್ ಮೊದಲಾದವರು ಉಪಸ್ತಿತರಿದ್ದರು.

ಎಸ್‌ವೈ‌ಎಸ್ ಕುತುಬಿನಹರ ಶಾಖೆಯ ಉಪಾಧ್ಯಕ್ಷ ಉಸ್ಮಾನ್ ಮುಸ್ಲಿಯಾರ್ ಅತಿಥಿಗಳನ್ನು ಸ್ವಾಗತಿಸಿದರು.

Write A Comment