ಮಂಗಳೂರು, ಜ 23: ರೋಟರಿ ಮಂಗಳೂರು ಸೆಂಟ್ರಲ್ ಆಶ್ರಯದಲ್ಲಿ ರೋಟರಿ ಮಾಹಿತಿ ಮತ್ತು ಜಾಗೃತಿ ಅಭಿಯಾನದ ಅಂಗವಾಗಿ ರೋಟರಿ ಜಿಲ್ಲಾ ಮಟ್ಟದ 10ನೇ ವಾರ್ಷಿಕ ಅಂತರ ರೋಟರಿ ಕ್ಲಬ್ ರಸಪ್ರಶ್ನಾ ಸ್ಪರ್ಧಾ ಕೂಟ ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ಜರಗಿತು.
ರೋಟರಿ ಕ್ಲಬ್ ರೋಟರಿ ಕ್ಲಬ್ ಮಡಿಕೇರಿ ಮಿಸ್ಟಿ ಹಿಲ್ಸ್‌ನ್ನು ಪ್ರತಿನಿಧಿಸಿದ ರೊ.ಡಾ. ಪ್ರಶಾಂತ್ ಮತ್ತು ರೊ ಗೋಪಾಲಕೃಷ್ಣ ಜೋಡಿ ತಂಡ 106 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿ, ರೋಟರಿ ಪ್ರತಿಷ್ಠಿತ ಪ್ರಶಸ್ತಿ ಫಲಕ ಗಳಿಸಿತು. ರೋಟರಿ ಕ್ಲಬ್ ಬೈಕಂಪಾಡಿ ನ್ನು ಪ್ರತಿನಿಧಿಸಿದ ರೊ. ಪ್ರಸಾದ್ ಪ್ರಭು ಮತ್ತು ರೊ ಸುಭೋದ್ ಕುಮಾರ್ ದಾಸ್ ಜೋಡಿ ತಂಡ 82 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆಯಿತು. ಈ ಸ್ಪರ್ಧಾ ಕೂಟವು ಕೇವಲ ರೋಟರಿ ಸಂಸ್ಥೆಯ ವಿಷಯ ಹಾಗೂ ಚಟುವಟಿಕೆಗಳ ಬಗ್ಗೆ ಜರಗಿಸಲಾಗಿತ್ತು.
ಶಿವಮೊಗ್ಗ ಮೂಲದ ಮಾಜಿ ರೋಟರಿ ಜಿಲ್ಲಾ ಗವರ್ನರ್ ರೋ| ಡಾ. ಪಿ ನಾರಾಯಣ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಸ್ಪರ್ಧಾ ನಿರೂಪಕ ರೊ.ಡಾ| ದೇವದಾಸ್ ರೈ ಯವರ ರೋಟರಿ ಕ್ಷೇತ್ರಕ್ಕೆ ಹಾಗೂಆಂದೋಲನಕ್ಕೆ ನೀಡಿದ ಕೊಡುಗೆ ಅಪಾರ ಮತ್ತು ಅಮೂಲ್ಯ ಎಂದು ನುಡಿದು ವಿಜೇತರಿಗೆ ರೋಟರಿ ಆಕರ್ಶಕ ಟ್ರೋಫಿ, ಪ್ರಮಾಣ ಪತ್ರ, ಮತ್ತು ನಗದು ಬಹುಮಾನವನ್ನು ಹಸ್ತಾಂತರಿಸಿ ಅಭಿನಂದಿಸಿದರು.
ಸಹಾಯಕ ಗವರ್ನರ್ ರೋ| ರಾಮಕೃಷ್ಣ ಕಾಮತ್ ಗೌರವ ಅತಿಥಿಯಾಗಿ ಪಾಲ್ಗೊಂಡು ಕ್ಲಬ್ ನ ಸಾಪ್ತಾಹಿಕ ವಾರ್ತಾ ಗೃಹ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಕ್ಲಬ್‌ನ ಅಧ್ಯಕ್ಷರಾದ ರೋ| ಇಲಾಯಸ್ ಸ್ಯಾಂಕ್ಟಿಸ್ ಅವರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ರೊ. ಸಂತೋಷ್ ಶೇಠ್, ಕಾರ್ಯದರ್ಶಿ ರೊ. ಪ್ರಸಾದ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಲಯ ಅಧಿಕಾರಿ ರೊ. ರಾಜಗೋಪಾಲ್ ರೈ ವಂದಿಸಿದರು. ರೋಟರಿ ಜಿಲ್ಲೆಯ ಶಿವಮೊಗ್ಗ, ಮೈಸೂರು, ಪುತ್ತೂರು, ಮಂಗಳೂರಿನ 8 ತಂಡಗಳು ಅಂತಿಮ ಮತ್ತು ನಿರ್ಣಾಯಕ ಸುತ್ತಿಗೆ ಪ್ರವೇಶ ಪಡೆದಿದ್ದವು