ಕನ್ನಡ ವಾರ್ತೆಗಳು

ಆಳದ ಬಾವಿಗೆ ಬಿದ್ದ ಜಿಂಕೆ ಮರಳಿ ಕಾಡಿಗೆ; ಕುಂದಾಪುರ ಅಗ್ನಿಶಾಮಕ ದಳದ ಕಾರ್ಯಾಚರಣೆ

Pinterest LinkedIn Tumblr

ಕುಂದಾಪುರ: ಆಳದ ಬಾವಿಯೊಂದಕ್ಕೆ ಬಿದ್ದ ಜಿಂಕೆಯನ್ನು ಸತತ ಕಾರ್ಯಾಚರಣೆ ಮೂಲಕ ಅಗ್ನಿಶಾಮಕದಳದ ಸಿಬ್ಬಂದಿ ಸುರಕ್ಷಿತವಾಗಿ ಮೇಲಕ್ಕೆತ್ತಿ ಅರಣ್ಯ ಇಲಾಖೆಯ ಅಧಿಕಾರಿಗಳ ನೇತ್ರತ್ವದಲ್ಲಿ ಕಾಡಿಗೆ ಬಿಟ್ಟ ಘಟನೆ ಕುಂದಾಪುರ ತಾಲೂಕಿನ ಬಸ್ರೂರು ಮೂಡುಕೇರಿ ಎಂಬಲ್ಲಿ ಬುಧವಾರ ಮುಂಜಾನೆ ನಡೆದಿದೆ.

ಕಾಡಿನಿಂದ ಆಹಾರವನ್ನರಿಸಿ ನಾಡಿಗೆ ಬಂದಿದ್ದ ಜಿಂಕೆಯೊಂದು ಮೂಡುಕೇರಿ ನಿವಾಸಿ ಐರಿನ್ ಬೆರೆಟ್ಟೋ ಎನ್ನುವವರ ಮನೆಯ ಸುಮಾರು 8 ಅಡಿ ಅಗಲ 35 ಅಡಿ ಆಳದ ಬಾವಿಗೆ ಬಿದ್ದಿದೆ. ನಾಯಿ ಕೂಗುವ ಶಬ್ದ ಹಾಗೂ ಬಾವಿಯಲ್ಲಿ ಶಬ್ದವನ್ನುಕೇಳಿದ ಮನೆಯವರು ಬಾವಿ ನೋಡುವಾಗ ಪ್ರಾಣಿಯೊಂದು ಬಿದ್ದಿರುವುದು ತಿಳಿದಿದ್ದು ಬಳಿಕ ಅದು ಜಿಂಕೆಯೆಂದು ಖಚಿತಪಡಿಸಿಕೊಂಡ ಕೂಡಲೇ ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳದರು ಹಾಗೂ ಅರಣ್ಯ ಇಲಾಖೆಯವರು ಕಾರ್ಯಾಚರಣೆಗಿಳಿದಿದ್ದಾರೆ.

Basruru_Deer_Rescue  (14) Basruru_Deer_Rescue  (6) Basruru_Deer_Rescue  (1) Basruru_Deer_Rescue  (15) Basruru_Deer_Rescue  (4) Basruru_Deer_Rescue  (3) Basruru_Deer_Rescue  (12) Basruru_Deer_Rescue  (10) Basruru_Deer_Rescue  (7) Basruru_Deer_Rescue  (5) Basruru_Deer_Rescue  (2) Basruru_Deer_Rescue  (13) Basruru_Deer_Rescue  (9) Basruru_Deer_Rescue  (8) Basruru_Deer_Rescue  (11) Basruru_Deer_Rescue  (16)

ಸತತ ಒಂದೂವರೆ ತಾಸುಗಳ ಕಾಲ ಕಾರ್ಯಾಚರಣೆಯ ಬಳಿಕ ಜಿಂಕೆಯನ್ನು ಸುರಕ್ಷಿತಾವಾಗಿ ಮೇಲಕ್ಕೆತ್ತಿ ಕಾಡಿಗೆ ಬಿಡಲಾಯಿತು.

ಅಗ್ನಿಶಾಮಕ ದಳದ ಠಾಣಾಧಿಕಾರಿ ಭರತ್ ಕುಮಾರ್ ಮಾರ್ಗದರ್ಶನದಲ್ಲಿ ಸಿಬ್ಬಂದಿ ಚಂದ್ರಕಾಂತ ಜೆ ನಾಯ್ಕ್ ಹಾಗೂ ಸ್ಥಳೀಯರಾದ ಸುಬ್ಬಯ್ಯ ಪೂಜಾರಿ ಅವರು ಈ ಆಳದ ಬಾವಿಗಿಳಿದು ಜಿಂಕೆಯನ್ನು ನಾಜೂಕಾಗಿ ಹಗ್ಗದ ಸಹಾಯದಲ್ಲಿ ಬಂಧಿಸಿ ಇತರ ಸಿಬಂದಿಗಳು ಜಿಂಕೆಯನ್ನು ಮೇಲಕ್ಕೆತ್ತಿದ್ದು ಜಿಂಕೆ ಸುರಕ್ಷಿತವಾಗಿ ಮೇಲಕ್ಕೆ ಬಂದಿದ್ದು ಕಾಡಿಗೆ ಮರಳಿ ತಲುಪಿದೆ.

ಅರಣ್ಯ ಇಲಾಖೆಯ ಅಧಿಕಾರಿ ದಿಲೀಪ್ ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಸಾಥ್ ನೀಡಿದ್ದರು.

Write A Comment