ಪುತ್ತೂರು,ಜ.28 : ವಿಶ್ವ ವಿಖ್ಯಾತ ದಾರುಲ್ ಹುದಾ ವಿಶ್ವ ವಿದ್ಯಾಲಯ ಚೆಮಾಡ್ ಇದರ ಆಶ್ರಯದಲ್ಲಿ ಪ್ರತೀ 2 ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಸಿಬಾಕ್ ರಾಷ್ಟೀಯ ಮಟ್ಟದ ಪ್ರತಿಭಾ ಕಲೋತ್ಸವದಲ್ಲಿ ಪ್ರತಿಷ್ಠಿತ ವಿದ್ಯಾ ಸಂಸ್ಥೆ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಅಸ್ಸಾಂ, ಗುಜರಾತ್, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕೇರಳ, ಕರ್ನಾಟಕ ಮುಂತಾದ ಹಲವು ರಾಜ್ಯಗಳಿಂದ ಸುಮಾರು 3900 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು 22 ಕ್ಕೂ ಅಧಿಕ ವೇದಿಗಳಲ್ಲಿ ಉರ್ದು, ಕನ್ನಡ, ಇಂಗ್ಲೀಷ್, ಮಲಯಾಳಂ, ಫಾರಿಸಿ, ಅರಭಿಕ್, ಬಾಷೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಎತ್ತಿ ತೊರಿಸಿದರು.
ಖಿದಾಯ, ಹಿದಾಯ, ಊಲ, ನಿಕ್ಸ್ ಗ್ರೂಪ್‌ಗಳಲ್ಲಿ ಸ್ಪಧೆ ನಡೆಯಿತು. ದ್ವಿತೀಯ ಸ್ಥಾನ ಪಡೆದ ನೂರುಲ್ ಹುದಾ ವಿದ್ಯಾರ್ಥಿಗಳನ್ನು ಮಾಡನ್ನೂರು ಜಮಾಅತ್ ಕಮೀಟಿ ವತಿಯಿಂದ ಕಾಸರಗೋಡ್ ರೈಲು ನಿಲ್ದಾನದಿಂದ ಸ್ವಾಗತಿಸಿ ವಾಹನ ರ್‍ಯಾಲಿಯೊಂದಿಗೆ ಮಾಡನ್ನೂರ್‌ಗೆ ಕರೆತರಲಾಯಿತು. ವಿಜೇತರನ್ನು ಜಮಾಅತ್ ಕಮೀಟಿ, ನೂರುಲ್ ಹುದಾ ಕಾಲೇಜು ಸಮೀತಿ, ಎಸ್ಕೆಎಸ್ಸೆಸ್ಸೆಫ್ ಮಾಡನ್ನೂರು ಶಾಖೆ, ಸ್ಟಾಫ್ ಕೌನ್ಸಿಲ್ ಹಾಗೂ ಮ್ಯಾನೇಜರ್ ಖಲೀಲುರ್ರಹ್‌ಮಾನ್ ಅರ್ಶದಿ ಕೊಲ್ಪೆ ಅಭಿನಂದಿಸಿದರು.