ಕನ್ನಡ ವಾರ್ತೆಗಳು

ಹರಿದ್ವಾರ : ಶ್ರೀಕಾಶೀಮಠದ ಸದ್ಗುರು ಸುಧೀಂದ್ರ ತೀರ್ಥರ ಆರಾಧನಾ ಮಹೋತ್ಸವ

Pinterest LinkedIn Tumblr

haridwar_swamiji_photo_7

ಮೂಡುಬಿದಿರೆ: ಕಳೆದ ಜ17ರಂದು ವೃಂದಾವನಸ್ಥರಾಗಿರುವ ಶ್ರೀಕಾಶೀಮಠ ಸಂಸ್ಥಾನದ ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ ಕಳೆದ ಗುರುವಾರ ಹರಿದ್ವಾರದ ಶ್ರೀ ವ್ಯಾಸಾಶ್ರಮದಲ್ಲಿ ವೈಭವದಿಂದ ನಡೆಯಿತು. ವ್ಯಾಸ ಮಂದಿರದ ಆವರಣದಲ್ಲಿರುವ ಗುರುಗಳ ವೃಂದಾವನದ ಸನ್ನಿಧಿಯಲ್ಲಿ ಶ್ರೀ ಸಂಸ್ಥಾನದ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಹಿರಿತನ ಮತ್ತು ಮಾರ್ಗದರ್ಶನದಲ್ಲಿ ಆರಾಧನಾ ಮಹೋತ್ಸವದ ಧಾರ್ಮಿಕ ಪ್ರಕ್ರಿಯೆಗಳು ಗುರುವಾರ ಮುಂಜಾನೆಯಿಂದ ಆರಂಭಗೊಂಡು ಸಂಜೆಯವರೆಗೂ ಜರಗಿದವು.

ಗುರುವಾರ ಪ್ರಾತಃಕಾಲ 5.30ರ ವೇಳೆಗೆ ವ್ಯಾಸಾಶ್ರಮದಲ್ಲಿ ಶ್ರೀಸಂಯಮೀಂದ್ರ ತೀರ್ಥ ಶ್ರೀಗಳವರು ಸಂಸ್ಥಾನದ ದೇವರುಗಳಿಗೆ ನಿಮರ್ಾಲ್ಯ ವಿಸರ್ಜನೆ, ಉತ್ಸವ ಮೂತರ್ಿಗಳಿಗೆ ಅಭಿಷೇಕ ನೆರವೇರಿಸಿದರು. ಬಳಿಕ ವಿಶೇಷವಾಗಿ ಪುಷ್ಪಾಲಂಕೃತಗಳಿಂದ ಕೂಡಿದ್ದ ವೃಂದಾವನದ ಸನ್ನಿಧಿಯಲ್ಲಿ ಶ್ರೀಗಳವರು ಧಾಮರ್ಿಕ ಪ್ರಕ್ರಿಯೆಗಳನ್ನು ನಡೆಸಿದರು. ವೃಂದಾವನದಲ್ಲಿ ಪೂಜಿಸಲಾಗಿದ್ದ ಶ್ರೀ ಮುಖ್ಯಪ್ರಾಣ ದೇವರ ಬಿಂಬಕ್ಕೂ ವಿಶೇಷ ಪವಮಾನ ಅಭಿಷೇಕಾದಿ ಪೂಜನೆಯನ್ನು ನಡೆಸಲಾಯಿತು. ಕೊನೆಯಲ್ಲಿ ಮಹಾಮಂಗಳಾರತಿ ನಡೆಯಿತು. ಬಳಿಕ ಸದ್ಗುರುಗಳಿಗೆ ಪಟ್ಟಕಾಣಿಕೆ ಸಮರ್ಪಣೆ ಜರಗಿತು. ಬಳಿಕ ಸೇರಿದ್ದ ಸಮಾಜ ಬಾಂಧವರಿಗೆ ಶ್ರೀಗಳವರು ವೃಂದಾವನದ ಸನ್ನಿಧಿಯಲ್ಲಿ ಶ್ರೀಗಂಧ ಪ್ರಸಾದವನ್ನು ವಿತರಿಸಿದರು.

haridwar_swamiji_photo_8 haridwar_swamiji_photo_9

ಸದ್ಗುರು ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಅಲಂಕೃತ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿರಿಸಿ ಶ್ರೀ ವ್ಯಾಸಮಂದಿರದಿಂದ ಗಂಗಾತೀರದ ವ್ಯಾಸಘಾಟ್ವರೆಗೆ ಮೆರವಣಿಗೆಯಲ್ಲಿ ತೆರಳಿ ಮರಳಿ ವ್ಯಾಸ ಮಂದಿರದ ಆವರಣದಲ್ಲಿ ವೇದ ಘೋಷ, ವಾದ್ಯಮೇಳ ,ಸಂಕೀರ್ತನೆ ಹೀಗೆ ಪಂಚಪ್ರದಕ್ಷಿಣೆ ನಡೆಯಿತು. ಭಜಕರ ಸಂಕೀರ್ತನೆ, ಚೆಂಡೆ, ಸಹಿತ ಮಂಗಲವಾದ್ಯಗಳು,ವೈದಿಕ ವೃಂದದವರು ಈ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಸಂಸ್ಥಾನದ ದೇವರುಗಳಿಗೆ ಅಪರಾಹ್ನ ತ್ರಿಕಾಲ ಪೂಜೆ, ಮಹಾ ಸಮಾರಾಧನೆ ಜರಗಿತು.

ಗುರು ಪೀಠಾರೋಹಣ:

ವ್ಯಾಸ ಮಂದಿರದ ಆವರಣದಲ್ಲಿನ ವಿಶಾಲ ಸಭಾಂಗಣದಲ್ಲಿ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರನ್ನು ಮಹಾಸಭೆಗೆ ಮೆರವಣಿಗೆಯಲ್ಲಿ ರಾಜೋಪಚಾರದಿಂದ ಸ್ವಾಗತಿಸಲಾಯಿತು. ಶಿಷ್ಯವರ್ಗದಿಂದ ಶ್ರೀಗಳವರಿಗೆ ಸಂಸ್ಥಾನದ ಗೌರವಾದರ ಪ್ರಕಟಿಸಿ ‘ಬಹುಪರಾಕ್’ ಹರ್ಷಘೋಷ ಮೊಳಗಿಸಲಾಯಿತು.

ಈ ಸಂದರ್ಭದಲ್ಲಿ ದೀಪೋತ್ಸವ, ಶ್ರೀಗಳವರಿಂದ ಗುರುಗಳ ಭಾವಚಿತ್ರಕ್ಕೆ ಪುಷ್ಪಹಾರ ಸಮರ್ಪಣೆ, ಮಹಾಮಂಗಲಾರತಿ, ವೈದಿಕ ವೃಂದ,ನೆರೆದ ಶಿಷ್ಯವರ್ಗದ ಉಪಸ್ಥಿತಿಯಲ್ಲಿ ಪೀಠಾರೋಹಣ, ಹತ್ತು ಸಮಸ್ತರಿಂದ ಗುರುಗಳ ಪಾದಪೂಜೆ ನಡೆಯಿತು. ಶ್ರೀಗಳವರಿಂದ ಗುರುಗುಣಗಾನ, ಆಶೀರ್ವಚನದ ಬಳಿಕ ಶಿಷ್ಯವರ್ಗದಿಂದ ಪಟ್ಟಕಾಣಿಕೆ ಸಮರ್ಪಣೆ, ಗುರುಗಳಿಂದ ಫಲಮಂತ್ರಾಕ್ಷತೆ ಸ್ವೀಕಾರ ನಡೆಯಿತು.

ಆರಾಧನಾ ಮಹೋತ್ಸವದಲ್ಲಿ…

* ದೇಶವಿದೇಶಗಳಿಂದ ವ್ಯಾಸ ಮಂದಿರಕ್ಕೆ ಬಂದು ಕಲೆತ ಎರಡೂವರೆ ಸಾವಿರಕ್ಕೂ ಮಿಕ್ಕಿದ ಶಿಷ್ಯವೃಂದ
* ಮಹೋತ್ಸವಕ್ಕೆ ಕೇರಳ ಸರಕಾರದ ಕೊಚ್ಚಿಯ ಶಾಸಕ ಡೊಮಿನಿಕ್ ಪ್ರೆಸೆಂಟೇಶನ್, ಎರ್ನಾಕುಲಂನ ಹೈಬಿ ಇಡನ್,
ದ.ಕ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರ ಭೇಟಿ
* ಭಜಕರಿಗೆ ಸೇವಾರೂಪದಲ್ಲಿ ಉಚಿತವಾಗಿ ಮುಂಬೈನ ನ್ಯಾಚುರಲ್ ಐಸ್ಕ್ರೀಂ ವತಿಯಿಂದ ಐಸ್ಕ್ರೀಂಗಳ ವಿತರಣೆ, ಮಂಗಳೂರಿನ ಎಕ್ಸೆಲ್ ಸ್ಟೂಡಿಯೋ ವತಿಯಿಂದ ಸದ್ಗುರು ಸುಧೀಂದ್ರರ ವೃಂದಾವನ ಕುರಿತ ಉಚಿತ ಸಿ.ಡಿಗಳ ವಿತರಣೆ.
* ಪಂಡಿತ್ ಉಪೇಂದ್ರ ಭಟ್, ಕು.ಮಹಾಲಕ್ಷ್ಮೀ ಶೆಣೈ ಸಹಿತ ಪ್ರಮುಖ ಗಾಯಕರಿಂದ, ಹಲವು ಮಂಡಳಿಗಳಿಂದ ಸಂಕೀರ್ತನಾ ಸೇವೆ
* ದೇಶದ ವಿವಿಧೆಡೆಯ ಜಿ.ಎಸ್.ಬಿ. ಮಠ, ಮಂದಿರದ ಪ್ರತಿನಿಧಿಗಳು, ಮೊಕ್ತೇಸರರುಗಳ ಉಪಸ್ಥಿತಿ,
* ನೇರ ಪ್ರಸಾರದ ಮೂಲಕ ಮಹೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ನೆರವಾದ ನಮ್ಮ ಕುಡ್ಲ,ತುಳು ನಾಡು ನ್ಯೂಸ್, ಸ್ಪಂದನ ಚಾನೆಲ್, ಅಂತರ್ಜಾಲ ತಾಣಗಳು
* ಕೊರೆಯುವ ಚಳಿಯ ವಾತಾವರಣದ ನಡುವೆಯೂ ಗುರುಸೇವೆಯಲ್ಲಿ ತೊಡಗಿಕೊಂಡ ಭಜಕರು

ಚಿತ್ರಗಳು: ಮಂಜು ನೀರೇಶ್ವಾಲ್ಯ
ವರದಿ: ಗಣೇಶ್ ಕಾಮತ್ ಮೂಡುಬಿದಿರೆ.

Write A Comment