ಮಂಗಳೂರು : ದುಷ್ಕರ್ಮಿಗಳ ತಂಡವೊಂದು ಮನೆಯೊಳಗೆ ನುಗ್ಗಿ ಮನೆಯವರ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರ ರಾತ್ರಿ ಸುರತ್ಕಲ್‌ನ ಜನತಾ ಕಾಲನಿಯಲ್ಲಿ ನಡೆದಿದೆ. ಹಲ್ಲೆಯಿಂದ ಗಾಯಗೊಂಡ ಐವರನ್ನು ಸುರತ್ಕಲ್‌ನ ಪದ್ಮವಾತಿ ಆಸ್ಪತ್ರೆಗೆ ದಾಖಲು ಪಡಿಸಲಾಗಿದೆ.
ಹಲ್ಲೆಗೊಳಗದವರನ್ನು ಮಧಾವ ಪೂಜಾರಿ ( 45 ) ಅನಿಲ ( 25 ) ಶಿವರಾಜ ಗಾಣಿಗ (19 ) ಮಧು ( 20 ) ಜಾನಕಿ ( 50 ) ಎಂದು ಗುರುತಿಸಲಾಗಿದೆ.
ಸೋಮವಾರ ರಾತ್ರಿ ಸಮಾರು 9 ಘಂಟೆಯ ಸಮಯಕ್ಕೆ ಒಂಭತ್ತು ಮಂದಿಯ ತಂಡವೊಂದು ಸುರತ್ಕಲ್ ಜನತಾ ಕಾಲನಿಯ ಮನೆಯೊಂದಕ್ಕೆ ನುಗ್ಗಿ ಮನೆಯಲ್ಲಿದ್ದವರ ಮೇಲೆ ಏಕಏಕಿ ಹಲ್ಲೆ ನಡೆಸಿದೆ ಎನ್ನಲಾಗಿದೆ. ಹಲ್ಲೆ ನಡೆಸಿದವರು ಯಾರು ಮತ್ತು ಹಲ್ಲೆ ನಡೆಸಲು ಕಾರಣವೇನು ಎಂಬ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇದುವರೆಗೆ ಯಾವೂದೇ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ.
ಅಸ್ಪತ್ರೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪ್ರಕರಣದ ಕುರಿತು ಗಾಯಾಳುಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ.
ಸುರತ್ಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನೆ ನಡೆದ ಜನತಾ ಕಾಲನಿಯ ಮನೆಯ ಮುಂದೆ ಕೆ.ಎಸ್.ಆರ್.ಪಿ ಮತ್ತು ಸುರತ್ಕಲ್ ಪೋಲಿಸರು ಜಮಾಯಿಸಿದ್ದು ಮಂದಿನ ತನಿಖೆ ಕೈಗೊಂಡಿದ್ದಾರೆ.
30 ಮಂದಿಯ ತಂಡದಿಂದ ಹಲ್ಲೆ – ದೂರು ದಾಖಲು : ಹಲ್ಲೆಗೆ ಹಲವು ಕಾರಣಗಳು..!
ಸುರತ್ಕಲ್ ಜನತಾ ಕಾಲನಿಯ ಕೆಲವು ನಿವಾಸಿಗಳ ಮೇಲೆ ಸುಮಾರು 30 ಮಂದಿಯ ಗುಂಪು ಸೋಮವಾರ ತಡರಾತ್ರಿ ಹಲ್ಲೆ ನಡೆಸಿ ಪರಾರಿಯಾಗಿದೆ ಎಂದು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯ ಮುಂಭಾಗದಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದ ವೇಳೆ ಸುಮಾರು 30 ಮಂದಿಯ ತಂಡ ವಿನಾಃಕಾರಣ ಹಲ್ಲೆ ನಡೆಸಿ ಪರಾರಿಯಾಗಿದೆ ಎಂದು ಹಲ್ಲೆಗೊಳಗಾದವರು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಜನತಾ ಕಾಲನಿಯಲ್ಲಿ ಪರವಾನಿಗೆ ರಹಿತವಾಗಿ ಮಸೀದಿ ನಿರ್ಮಾಣ ಮಾಡುತ್ತಿರುವ ಬಗ್ಗೆ ಸ್ಥಳೀಯ ಹಿಂದುಗಳು ಆಕ್ಷೇಪ ಎತ್ತಿರುವ ಕಾರಣ ಹಲ್ಲೆ ನಡೆಸಲಾಗಿದೆ ಎಂದು ಹಲ್ಲೆಗೊಳಗಾದ ಕೆಲವರು ಆರೋಪಿಸಿದ್ದಾರೆ.
ಗಾಂಜಾ ವಿಚಾರವಾಗಿ ಸ್ಥಳೀಯ ಮುಸ್ಲಿಂ ಯುವಕರಿಗೆ ಬುದ್ದಿಮಾತು ಹೇಳಿದ್ದ ಕಾರಣ ಹಲ್ಲೆ ನಡೆಸಲಾಗಿದೆ ಎಂದು ಹಲ್ಲೆಗೊಳಗಾದ ಮಾಧವ ಪೂಜಾರಿ ಹೇಳಿಕೆ ನೀಡಿದ್ದಾರೆ.
ಸ್ಥಳೀಯ ಕ್ರಿಸ್ತಿನ್ ಮಸ್ಕರೇನಸ್ ಎಂಬವರ ಆಡಿನ ವಿಚಾರವಾಗಿ ಶನಿವಾರ ಗಲಾಟೆ ನಡೆದು ಸ್ಥಳೀಯರಾದ ಅಶ್ರಫ್, ಅಕ್ರಮ್, ಆಸೀಫ್, ತೌಯಿಬ್ ಎಂಬವರ ಮೇಲೆ ದೂರು ದಾಖಲಾಗಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಆರೋಪಿಗಳು ಹಾಗೂ ಮಸ್ಕರೇನಸ್ ಅವರನ್ನು ರವಿವಾರ ಸಂಜೆ ಸುರತ್ಕಲ್ ಠಾಣೆಯಲ್ಲಿ ರಾಜಿ ಪಂಚಾಯ್ತಿ ನಡೆಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಹಲ್ಲೆ ನಡೆಸಲಾಗಿದೆ ಎಂದು ಕ್ರಿಸ್ತಿನ್ ಮಸ್ಕರೇನಸ್ ರವರ ಮಗ ಎಂದು ಪರಿಚಯಿಸಿ ಕೊಂಡಿರುವವರೊಬ್ಬರು ತಿಳಿಸಿದ್ದಾರೆ.
ಹಲ್ಲೆಗೊಳಗಾದವರು ಸುರತ್ಕಲ್ ಪದ್ಮಾವತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾನೂನು ಸುವ್ಯವಸ್ಥೆಯ ಡಿ.ಸಿ.ಪಿ.ಶಾಂತರಾಜು ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದವರ ಹೇಳಿಕೆಗಳನ್ನು ಪಡೆದು ಕೊಂಡಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂಬೋಬಸ್ತ್ ಮಾಡಲಾಗಿದೆ.
ಆಸ್ಪತ್ರೆಯ ಮುಂಭಾಗದಲ್ಲಿ ವಾಹನಗಳನ್ನು ತಡೆದು ಹಲ್ಲೆ ನಡೆಸಲು ಮುಂದಾದ ಕೆಲವರನ್ನು ಸ್ಥಳೀಯರು ಮನವೊಲಿಸಿ ಕಳುಹಿಸಿದ್ದಾರೆ.