ಮಂಗಳೂರು, ಫೆ .02 : ತಾಲೂಕಿನ ಪೊರ್ಕೋಡಿ ಪ್ರದೇಶದ ಕೆಂಜಾರು ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 20 ಸಾವಿರ ಜನ ಸಂಪರ್ಕವಿದ್ದು, ನೂರಾರು ವಿದ್ಯಾರ್ಥಿಗಳು, ದಿನಕೂಲಿ ಕಾರ್ಮಿಕರು ಮತ್ತು ಸಾರ್ವಜನಿಕರು ದಿನನಿತ್ಯ ವಾಹನ ಸಂಪರ್ಕವಿಲ್ಲದೆ ತೊಂದರೆಗೀಡಾಗಿದ್ದಾರೆ.
ಈ ಭಾಗದ ಸಾರ್ವಜನಿಕರು ಹಲವಾರು ಬಾರಿ ಹೋರಾಟ, ಚಳುವಳಿ ಮಾಡಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಿನ ನರ್ಮ್ ಯೋಜನೆಯಡಿ ಬಸ್ ಸಂಪರ್ಕ ಒದಗಿಸಲು ಅವಕಾಶವಿದ್ದು, ಈಗಲಾದರೂ ಸಾರ್ವಜನಿಕರ ಸಮಸ್ಯೆಗೆ ಸ್ಪಂಧಿಸಬಹುದಾಗಿದೆ.
ಸ್ಟೇಟ್‍ಬ್ಯಾಂಕ್‍ನಿಂದ ಪೊರ್ಕೋಡಿಗೆ ಎರಡು ಬಸ್‍ಗಳಿದ್ದು, ಅದನ್ನೇ ಅವಲಂಭಿಸಿರುವ ನಾಗರಿಕರು ತುರ್ತು ಸಮಯದಲ್ಲೂ ಸುಮಾರು ಒಂದುವರೆ ಗಂಟೆ ಮಂಗಳೂರಿಗೆ ತಲುಪುವ ಸಮಯವಿದ್ದು ಈ ಬಸ್‍ಗಳನ್ನೇ ನಂಬಿ ಜನ ಕಾಯುವಂತಾಗಿದೆ ಎಂದು ದಲಿತ ಹಕ್ಕುಗಳ ಸಮಿತಿಯು ಜಿಲ್ಲಾಧಿಕಾರಿ ಹಾಗೂ ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿಯವಗೆ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಮನವಿಯನ್ನು ನೀಡಲಾಗಿದೆ ಎಂದು ಕರ್ನಾಟಕ ದಲಿತ ಹಕ್ಕುಗಳ ಸಮಿತಿ ಪೊರ್ಕೋಡಿ ಘಟಕದ ಸಂಚಾಲಕ ಚೆನ್ನಪ್ಪ ಸಾಲ್ಯಾನ್ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.