ಮಂಗಳೂರು : ಇಸ್ಕಾನ್ ವತಿಯಿಂದ ಶ್ರೀಕೃಷ್ಣ-ಬಲರಾಮರ 13ನೆ ವರ್ಷದ ರಥಯಾತ್ರೆ ಶನಿವಾರ ಸಂಜೆ ನಗರದ ಕೆ.ಎಸ್. ರಸ್ತೆಯ ನವರತ್ನ ಪ್ಯಾಲೇಸ್ ಮುಂಭಾಗದಲ್ಲಿ ಉದ್ಘಾಟನೆಗೊಂಡು ಬಳಿಕ ಸಿಟಿ ಸೆಂಟರ್ ಮಾಲ್ ಮುಂಭಾಗದಿಂದ ಆರಂಭಗೊಂಡಿತ್ತು.
ಉಡುಪಿ ಶ್ರೀ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಶ್ರೀಕೃಷ್ಣ-ಬಲರಾಮ ರಥಯಾತ್ರೆಗೆ ಚಾಲನೆ ನೀಡಿದರು. ಸಿಟಿ ಸೆಂಟರ್ ಮಾಲ್ ಮುಂಭಾಗದಿಂದ ಹೊರಟ ರಥಯಾತ್ರೆಯು ಹಂಪನ್ ಕಟ್ಟೆ, ಮಾರ್ಕೆಟ್ ರೋಡ್, ಜಿ.ಎಚ್.ಎಸ್.ರಸ್ತೆ, ಪಿ.ಎಂ.ರಾವ್.ರೋಡ್, ಕೆ.ಎಸ್.ರಾವ್.ರೋಡ್, ನವಭಾರತ ವೃತ್ತ, ಪಿವಿಎಸ್ ವೃತ್ತ, ಬಂಟ್ಸ್ ಹಾಸ್ಟೇಲ್ ಸರ್ಕಲ್ ಮೂಲಕ ತೆರಳಿ ಸುಜೀರ್ ಸಿ.ವಿ.ನಾಯಕ್ ಮುಂಭಾದಲ್ಲಿ ಸಮಾಪನಗೊಂಡಿತ್ತು.
ಬೆಂಗಳೂರಿನ ಅಕ್ಷಯ ಪೌಂಡೇಶನ್ ಉಪಾಧ್ಯಕ್ಷ ಚಂಚಲ ಪತಿ ದಾಸ್, ಇಸ್ಕಾನ್‍ನ ಚೆನ್ನೈ ಶಾಖೆಯ ಅಧ್ಯಕ್ಷ ಕೃಷ್ಣ ದಾಸ್, ಹುಬ್ಬಳ್ಳಿ ಶಾಖೆಯ ಅಧ್ಯಕ್ಷ ರಾಜೀವ ಲೋಚನದಾಸ್, ಮಂಗಳೂರಿನ ಅಧ್ಯಕ್ಷ ಕಾರುಣ್ಯ ಸಾಗರ್ ದಾಸ್ ರಥಯಾತ್ರೆಯ ಸಂಘಟನಾ ಕಾರ್ಯದರ್ಶಿ ಸನಂದನ ದಾಸ, ರೋಹಿಣಿ ಸುಖದಾಸ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀಕೃಷ್ಣ-ಬಲರಾಮರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಮೆರವಣಿಗೆಗೆ ವಿಶೇಷ ಮೆರಗು ತಂದರು.