ಕನ್ನಡ ವಾರ್ತೆಗಳು

ಅಂತರರಾಜ್ಯ ಗಡಿ ಪ್ರದೇಶದ ಅಪರಾಧ ಅಂಕಿ ಅಂಶಗಳ ವಿಮರ್ಶನಾ ಸಭೆ

Pinterest LinkedIn Tumblr

InterState_Police_Meet

ಮಂಗಳೂರು,ಫೆ.09 : ಕಾಸರಗೋಡು ಜಿಲ್ಲೆಯ ಬೇಕಲ್ ಎಂಬಲ್ಲಿ ಅಂತರರಾಜ್ಯ ಗಡಿ ಪ್ರದೇಶವಾದ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಅಪರಾಧ ಅಂಕಿ ಅಂಶಗಳ ವಿಮರ್ಶನಾ ಸಭೆ ಇತ್ತೀಚಿಗೆ ನಡೆಯಿತು.

ಈ ಬಗ್ಗೆ ಈ ಸಭೆಗೆ ಪಶ್ಚಿಮ ವಲಯ ಐಜಿಪಿಯವರಾದ ಶ್ರೀ ಅಮೃತಪೌಲ್, ಐಪಿಎಸ್., ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಚಂದ್ರಸೇಖರ್ ಐ.ಪಿ.ಎಸ್, ರವರು ಕಾಸರಗೋಡು ಪೊಲೀಸ್ ಅಧೀಕ್ಷಕರಾದ ಶ್ರೀ ಶ್ರೀನಿವಾಸ ಐಪಿಎಸ್ ಹಾಗೂ ಪೊಲೀಸ್ ಅಧೀಕ್ಷಕರು ದಕ್ಷಿಣ ಕನ್ನಡ ಮತ್ತು ಕಣ್ಣೂರು, ಮತ್ತು ಮಂಗಳೂರು ನಗರದ ಉಪ-ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ರವರು ಹಾಜರಿದ್ದು ಈ ಸಭೆಯಲ್ಲಿ ಗಡಿ ಪ್ರದೇಶದಲ್ಲಿ ನಡೆಯುವ ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಸಮನ್ವಯ ಸಭೆಯಲ್ಲಿ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು,

ಸಭೆಯಲ್ಲಿ ಅಂತರರಾಜ್ಯ ಅಪರಾಧಿಗಳ ಬಗ್ಗೆ ಮತ್ತು ಅಪರಾಧಗಳ ಬಗ್ಗೆ ವಿಮರ್ಶೆ ನಡೆಸಲಾಯಿತು ಹಾಗೂ ರಾಜ್ಯ ಚುನಾವಣಾ ಸುವ್ಯವಸ್ಥೆ ಬಗ್ಗೆ ಈ ಸಮಯದಲ್ಲಿ ಚರ್ಚಿಸಲಾಯಿತು ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ತಿರ್ಮಾನಿಸಲಾಯಿತು.

Write A Comment