ಕನ್ನಡ ವಾರ್ತೆಗಳು

ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಸವಲತ್ತು ನೀಡುವ ಮೂಲಕ ಮೋದಿ ಸರ್ಕಾರದಿಂದ ಮುಸ್ಲಿಂರ ಅಭಿವೃದ್ದಿಗೆ ಪ್ರೋತ್ಸಾಹ : ಅಂಕಣಕಾರ ಚಕ್ರವರ್ತಿ ಸೂಲಿಬೆಲೆ

Pinterest LinkedIn Tumblr

sunni_townhall_photo_1

ಮಂಗಳೂರು,ಫೆ.10: ಮುಸ್ಲಿಂ ಸಮುದಾಯದಲ್ಲಿ ಜನಸಂಖ್ಯೆ ಜಾಸ್ತಿಯಾಗಿರುವುದರಿಂದ ಸಮುದಾಯದಲ್ಲಿ ಬಡತನವೂ ಜಾಸ್ತಿಯಾಗಿದೆ. ಇದರಿಂದ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಔರಂಗಜೇಬನ ಕಾಲದಲ್ಲಿ ಇದ್ದ ಮದ್ರಸ ಶಿಕ್ಷಣದ ಸಿಲೆಬಸ್ ಇವತ್ತಿಗೂ ಇದೆ.ಮದ್ರಸಗಳು ಮತಾಂಧತೆಯ ಕೇಂದ್ರಬಿಂದುವಾಗಿದೆ ಎಂಬ ಭಾವನೆ ಹೊರಗಡೆ ಇದೆ. ಮೋದಿ ಸರಕಾರ ಬಂದ ನಂತರ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಸವಲತ್ತು ನೀಡುವ ಮೂಲಕ ಮುಸ್ಲಿಂ ಅಭಿವೃದ್ದಿಗೆ ಪ್ರೋತ್ಸಾಹಿಸಿದ್ದಾರೆ. ಮದ್ರಸದ ಸಿಕ್ಷಣದ ಜೊತೆಗೆ ಸಾರ್ವತ್ರಿ ಶಿಕ್ಷಣವು ಸಿಗಬೇಕಾಗಿದೆ ಎಂದು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆಎ ಮಂಗಳೂರು ಜಿಲ್ಲಾ ವತಿಯಿಂದ ಇಂದು ನಗರದ ಪುರಭವನದಲ್ಲಿ ನಡೆದ ಎಸ್.ಇ.ಡಿ.ಸಿ ಸ್ಫಟಿಕ ಸಂಭ್ರಮ ಪ್ರಯುಕ್ತ ‘ಜಾತ್ಯಾತೀತ ಸಮಾಜದಲ್ಲಿ ಮದ್ರಸಾ ವ್ಯವಸ್ಥೆ’ ಎಂಬ ವಿಷಯದ ಬಗ್ಗೆ ಆಯೋಜಿಸಲಾದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ಸಮಾಜದಲ್ಲಿರುವ ಶೇಕಡ 99 ರಷ್ಟು ಜನರು ಒಗ್ಗಟ್ಟಾಗಿ ಜೀವಿಸಲು ಬಯಸುತ್ತಿದ್ದರೂ ಕೆಲವರು ಸಮಸ್ಯೆಗಳನ್ನು ದೊಡ್ಡದು ಮಾಡಿ ಅಶಾಂತಿ ಸೃಷ್ಟಿಸುತ್ತಾರೆ. ನಮ್ಮಲ್ಲಿ ವಿಶ್ವಾಸದ ಕೊರತೆಯಿರುವುದು ಮತ್ತು ಸಮಾಜದಲ್ಲಿ ಏನೇ ನಡೆದರೂ ಶೇಕಡ 95 ರಷ್ಟು ಜನರು ವೌನವಾಗಿರುವುದು ಸಮಸ್ಯೆ ಬೃಹದಾಕಾರವಾಗಿ ಬೆಳೆಯಲು ಕಾರಣವಾಗಿದೆ ಎಂದು ಹೇಳಿದರು.

ಅಸ್ಸಯ್ಯಿದ್ ಇಸ್ಮಾಯಿಲ್ ಮದನಿ ಅಲ್‌ಹಾದಿ ತಂಙಳ್ ಉಜಿರೆ ದುಅ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಜೆಎಂ ಮಂಗಳೂರು ಜಿಲ್ಲೆ ಅಧ್ಯಕ್ಷ ಅಲ್‌ಹಾಜ್ ಕೆ.ಬಿ.ಸುಲೈಮಾನ್ ಸಖಾಫಿ ವಹಿಸಿದ್ದರು.

sunni_townhall_photo_2 sunni_townhall_photo_3 sunni_townhall_photo_5 sunni_townhall_photo_6

ವಿಚಾರಗೋಷ್ಟಿಯಲ್ಲಿ ಅಭಿಪ್ರಾಯ ಮಂಡಣೆ ಮಾಡಿದ ಅಬ್ದುರ್ರಶೀದ್ ಸಖಾಫಿ ಝೈನಿ ಕಾಮಿಲ್ ಇಸ್ಲಾಮಿಕ್ ಸ್ಟೇಟ್ ಎಂದು ಹೋರಾಟ ನಡೆಸುತ್ತಿರುವ ಐ ಎಸ್‌ಗೆ ಯಾವುದೆ ಧರ್ಮವಿಲ್ಲ. ಅವರು ರಾಕ್ಷಸರಾಗಿದ್ದು ಮಾನವೀಯ ವಿರೋಧಿಗಳಾಗಿದ್ದಾರೆ. ಅವರೊಡನೆ ಮುಸ್ಲಿಮರನ್ನು ಹೋಲಿಸಿ ತಪ್ಪುಕಲ್ಪನೆ ಮಾಡಬಾರದು ಎಂದು ಹೇಳಿದರು. ಮುಸ್ಲಿಮರು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ವಿಚಾರಗಳನ್ನು ಮದ್ರಸದಲ್ಲಿ ಹೇಳಿಕೊಡಲಾಗುತ್ತದೆ. ಇಲ್ಲಿ ನೀಡುವ ಶಿಕ್ಷಣ ಪಾರದರ್ಶಕವಾಗಿದೆ. ಮದ್ರಸದಲ್ಲಿ ನೀಡುವ ಶಿಕ್ಷಣವನ್ನು ಗುಜರಾತ್‌ನಲ್ಲಿ ಅನುಷ್ಠಾನ ಮಾಡುವ ಮೊದಲು ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ 7 ಭಾಷೆಗಳಲ್ಲಿರುವ ಮದ್ರಸ ಪುಸ್ತಕವನ್ನು ಅಧ್ಯಯನ ಮಾಡಿ ಅನುಮತಿಯನ್ನು ಕೊಟ್ಟಿದ್ದಾರೆ. ಮದ್ರಸದ ಬಗ್ಗೆ ಇರುವ ಅಪಸ್ವರ ತೊಡೆದುಹಾಕಬೇಕು, ತಪ್ಪುಭಾವನೆ ಹೋಗಲಾಡಿಸಬೇಕು. ಯಾವುದೆ ಧರ್ಮ ಸಂಘರ್ಷ ಮಾಡುವುದನ್ನು, ಯುದ್ದವನ್ನು ಕಲಿಸಿಲ್ಲ. ಪ್ರೀತಿ ಕರುಣೆಯನ್ನು ಕಲಿಸಿದೆ ಎಂದು ಅವರು ಹೇಳಿದರು.

sunni_townhall_photo_7 sunni_townhall_photo_8 sunni_townhall_photo_9 sunni_townhall_photo_10 sunni_townhall_photo_11 sunni_townhall_photo_12

ಮಂಗಳೂರು ವಿಶ್ವವಿದ್ಯಾನಿಲಯದ ಕ್ರೈಸ್ತ ಅಧ್ಯಯನ ಪೀಠದ ಅಧ್ಯಕ್ಷ ರೆ.ಡಾ. ಜೋನ್ ಬ್ಯಾಪ್ಟಿಸ್ಟ್ ಸಾಲ್ದಾನ, ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್ ಎಂ ರಶೀದ್ ಹಾಜಿ, ಕೆಎಂಜೆಸಿ ರಾಜ್ಯ ಸಮಿತಿ ಪ್ರ.ಕಾರ್ಯದರ್ಶಿ ಹೆಚ್.ಐ. ಅಬೂಸುಫ್ಯಾನ್ ಮದನಿ , ಎಸ್.ಇ.ಡಿ.ಸಿ ಕರ್ನಾಟಕದ ಅಧ್ಯಕ್ಷ ಕೆ.ಕೆ.ಮುಹ್ಯಿದ್ದೀನ್ ಕಾವಿಲ್ ಸಖಾಫಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ್, ಮನಪಾ ಮಾಜಿ ಮೇಯರ್ ಕೆ.ಅಶ್ರಫ್, ಟ್ಯಾಲೆಂಟ್ ರಿಸರ್ಚ್ ಫೌಂಢೇಶನ್ ನ ರಫೀಕ್ ಮಾಸ್ಟರ್ , ಮದರಂಗಿ ಸಂಪಾದಕ ಡಿ.ಎ. ಅಬೂಬಕ್ಕರ್ ಕೈರಂಗಳ, ಶಿಕ್ಷಕ ರವೀಂದ್ರ ಶೆಟ್ಟಿ, ಉಳ್ಳಾಲ ಪುರಸಭೆ ಸದಸ್ಯ ಬಾಜಿಲ್ ಡಿ;ಸೋಜ, ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾದ ಮುಫತ್ತೀಸ್ ಇಸ್ಮಾಯಿಲ್ ಮದನಿ ನೆಕ್ಕಿಲಾಡಿ, ಎಸ್ ಎಂ ಎ ಮಂಗಳೂರು ಜಿಲ್ಲಾ ಅಧ್ಯಕ್ಷ ಯಾಕುಬ್ ಸುರತ್ಕಲ್, ಉಳ್ಳಾಲ ದರ್ಗಾ ಅಧ್ಯಕ್ಷ ಯು.ಎಸ್.ಹಂಝ ಹಾಜಿ ಉಳ್ಳಾಲ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ, ಹೈದರ್ ಪರ್ತಿಪಾಡಿ, ಹನೀಫ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Write A Comment