ಕನ್ನಡ ವಾರ್ತೆಗಳು

ಕುಂದಾಪುರ: ಸರಕು ತುಂಬಿದ ಲಾರಿಯ ಅವಾಂತರ; ವಿದ್ಯುತ್ ಕಂಬ ಬಿದ್ದು ಐದು ಬೈಕ್, ಮನೆಗೆ ಹಾನಿ

Pinterest LinkedIn Tumblr

ಕುಂದಾಪುರ: ಸರಕು ತುಂಬಿದ ದೊಡ್ಡ ಗಾತ್ರದ ಲಾರಿಯೊಂದು ವಿದ್ಯುತ್ ತಂತಿಗೆ ತಾಗಿದ ಪರಿಣಾಮ ತಂತಿ ಸಮೇತ ವಿದ್ಯುತ್ ಕಂಬಗಳು ಧರೆಗುರುಳಿ ಐದು ಬೈಕುಗಳು ಹಾಗೂ ಮನೆಯೊಂದಕ್ಕೆ ಹಾನಿಯಾದ ಘಟನೆ ಕುಂದಾಪುರದ ಕೋಣಿ ಸಮೀಪದ ಹುಣ್ಸೆಕಟ್ಟೆ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.

Kundapura_Lorry_Accident (1) Kundapura_Lorry_Accident (2) Kundapura_Lorry_Accident (3) Kundapura_Lorry_Accident (5) Kundapura_Lorry_Accident (6) Kundapura_Lorry_Accident (7) Kundapura_Lorry_Accident (8) Kundapura_Lorry_Accident (9) Kundapura_Lorry_Accident (11) Kundapura_Lorry_Accident (12) Kundapura_Lorry_Accident (13) Kundapura_Lorry_Accident (14) Kundapura_Lorry_Accident (15) Kundapura_Lorry_Accident (16) Kundapura_Lorry_Accident (18) Kundapura_Lorry_Accident (19) Kundapura_Lorry_Accident (20) Kundapura_Lorry_Accident (21) Kundapura_Lorry_Accident (22) Kundapura_Lorry_Accident (24) Kundapura_Lorry_Accident (25)

ಬಸ್ರೂರು ಕಡೆಯಿಂದ ಕುಂದಾಪುರದತ್ತ ಸಾಗಿ ಬಂದ ದೊಡ್ಡ ಗಾತ್ರದ ಸರಕು ತುಂಬಿದ ಲಾರಿಯ ಮೇಲ್ಭಾಗ ಎತ್ತರವಿದ್ದ ಕಾರಣ ವಿದ್ಯುತ್ ತಂತಿಗಳು ಲಾರಿಗೆ ಸಿಲುಕಿದೆ ಲಾರಿ ಮುಂದಕ್ಕೆ ಚಲಿಸಿದಾಗ ವಿದ್ಯುತ್ ತಂತ್ ಎಳೆದು ವಿದ್ಯುತ್ ಕಂಬಗಳು ತುಂಡರಿಸಿ ಧರೆಗುರುಳಿದಿದೆ. ಇದೇ ಸಂದರ್ಭ ಅಂಗಡಿಯೊಂದರ ಸಮೀಪ ನಿಲ್ಲಿಸಲಾದ ಐದು ಬೈಕುಗಳು ವಿದ್ಯುತ್ ಕಂಬದಡಿಗೆ ಸಿಲುಕಿ ಜಖಂಗೊಂಡಿದ್ದಲ್ಲದೇ ಮನೆಯೊಂದಕ್ಕೆ ಅಳವಡಿಸಿದ ವಿದ್ಯುತ್ ತಂತಿ ಬಿಗಿಗೊಂಡು ಮೇಲ್ಮಾಡು ಜಖಂಗೊಂಡಿದೆ. ಇದೇ ವೇಳೆ ಸಮೀಪದ ಟ್ರಾನ್ಸ್ ಪಾರ್ಮ್ರರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎರಡು ವಿದ್ಯುತ್ ಕಂಬಗಳು ನೆಲಕ್ಕಚ್ಚಿದ್ದರಿಂದ ವಿದ್ಯುತ್ ನಿಲುಗಡೆಯೂ ಆಗಿತ್ತು.

ತಪ್ಪಿದ ಬಾರೀ ದುರಂತ:
ಇಷ್ಟೆಲ್ಲಾ ಅವತಂರವಾಗುವಾಗ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರವಾಗಲೇ, ಪಾದಾಚಾರಿಗಳಾಗಲೀ ಇರಲಿಲ್ಲ. ಇನ್ನು ಅಂಗಡಿ ಸಮೀಪವಿದ್ದ ಜನರು ಅವಘಡದಿಂದ ತಪ್ಪಿಸಿಕೊಂಡು ಪಾರಾಗಿದ್ದಾರೆ. ಒಂದೊಮ್ಮೆ ರಸ್ತೆಯಲ್ಲಿ ವಾಹನ ಅಥವಾ ಪಾದಾಚಾರಿಗಳು ಇದ್ದಿದ್ದರೇ ದೊಡ್ಡ ಅನಾಹುತವೇ ನಡೆಯುವ ಸಾಧ್ಯತೆ ಇತ್ತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಭೇಟಿ ನೀಡಿದ್ದರು. ಹಲವು ಸಮಯ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಚಾರ ಸುಗಮಗೊಳಿಸಿ ಲಾರಿ ವಶಕ್ಕೆ ಪಡೆದರು.

Write A Comment