ಮಂಗಳೂರು, ಫೆ. 14 : ದ.ಕ. ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ.ಯವರು ಶನಿವಾರ ಸಂಜೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಸೈಕಲ್ ಸವಾರಿ ಮಾಡುವ ಮೂಲಕ ಗಮನ ಸೆಳೆದರು.
ದಿ ಹಿಂದೂ ಪತ್ರಿಕೆಯ ಹಿರಿಯ ವರದಿಗಾರ ಅನಿಲ್ ಕುಮಾರ್ ಶಾಸ್ತ್ರಿ ಮಂಗಳೂರು ಬೈಸಿಕಲ್ ಕ್ಲಬ್ (ಎಂಬಿಸಿ)ನ ಸದಸ್ಯರಾಗಿದ್ದು, ಇಂದು ತಮ್ಮ ಬೈಸಿಕಲ್‌ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪತ್ರಿಕಾಗೋಷ್ಠಿಗೆ ಆಗಮಿಸಿದ್ದರು.
ಪತ್ರಿಕಾಗೋಷ್ಠಿಯ ಬಳಿಕ ಅನಿಲ್ ಕುಮಾರ್‌ರವರ ಸೈಕಲ್ ಏರಿದ ಡಾ. ಶರಣಪ್ಪ ಕಚೇರಿಯ ಎದುರು ಒಂದು ರೌಂಡ್ ಹಾಕಿದರು.
ಸೈಕಲ್ ಹವ್ಯಾಸಿಗಳಾದ ಕೆಲ ಪತ್ರಕರ್ತ ಸದಸ್ಯರನ್ನೂ ಹೊಂದಿರುವ ಮಂಗಳೂರು ಬೈಸಿಕಲ್ ಕ್ಲಬ್ (ಎಂಬಿಸಿ)ನ ಸದಸ್ಯರು ತಿಂಗಳ 2ನೆ ಶನಿವಾರ ಕಾರು ಮುಕ್ತ ದಿನವನ್ನಾಗಿ ಆಚರಿಸುವ ನಿಟ್ಟಿನಲ್ಲಿ ತಮ್ಮ ಸೈಕಲ್‌ಗಳಲ್ಲಿ ಸಂಚರಿಸುವ ಮೂಲಕ ನಗರದಲ್ಲಿ ಕಳೆದ ಕೆಲ ಸಮಯದಿಂದ ಗಮನ ಸೆಳೆಯುತ್ತಿದ್ದಾರೆ. ಈ ಮೂಲಕ ಇಂಧನ ಉಳಿತಾಯ ಹಾಗೂ ಪರಿಸರ ಮಾಲಿನ್ಯ ಹಾಗೂ ವಾಹನ ದಟ್ಟನೆಯನ್ನು ಕಡಿಮೆಗೊಳಿಸುವುದು ಎಂಬಿಸಿ ಸೈಕಲ್ ಹವ್ಯಾಸಿಗಳ ಉದ್ದೇಶವೂ ಆಗಿದೆ.