ಮಂಗಳೂರು,ಫೆ.15: ಚಾಲಕ ನಿಯಂತ್ರಣ ತಪ್ಪಿದ ಸ್ಕಾರ್ಪಿಯೋ ಕಾರೊಂದು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳೂರಿನ ಪ್ಲಾಟಿನಂ ಚಿತ್ರಮಂದಿರ ಮುಂಭಾಗ ಸೋಮವಾರ ನಡೆದಿದೆ.
ಗಾಯಗೊಂಡವರು ಭಟ್ಕಳ ನಿವಾಸಿಗಳಾದ ಅಹ್ಮದ್ (63), ಶಾಹಿದಾ(35), ರಿಕ್ಷಾ ಚಾಲಕ ದಯಾನಂದ (51) ಎಂದು ಗುರುತಿಸಲಾಗಿದೆ.
ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ದಯಾನಂದ ಅವರ ತಲೆಗೆ ಗಂಭೀರ ಗಾಯವಾಗಿದ್ದು, ತಕ್ಷಣ ಎಲ್ಲಾ ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆ.ಎ. 19 ಎಂ.ಇ. 6871 ನೋಂದಾಯಿತ ಸ್ಕಾರ್ಪಿಯೋ ಕಾರು, ಆಟೋ ರಿಕ್ಷಾಗಳಿಗೆ ಡಿಕ್ಕಿ ಹೊಡೆದು ಸಮೀಪದ ಕಂಪೌಂಡ್ ಒಳಗೆ ನುಗ್ಗಿದೆ. ಅಪಘಾತದ ರಭಸಕ್ಕೆ ರಿಕ್ಷಾ ಮತ್ತು ಕಾರಿನ ಮುಂಭಾಗಕ್ಕೆ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ.