ಮಂಗಳುರು,ಫೆ.16 : ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಆಶ್ರಯದಲ್ಲಿ ಮಂಗಳೂರಿನ ಕೆಎಂಸಿ ಹಾಗೂ ಮಣಿಪಾಲ ಸಮೂಹ ಸಂಸ್ಥೆಗಳ ಉದ್ಯೋಗಿಗಳಿಗೆ ಇತ್ತೀಚೆಗೆ ನಡೆದ ತ್ರೋಬಾಲ್ ಪಂದ್ಯಾಟದಲ್ಲಿ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಮಹಿಳೆಯರ ತಂಡ ದ್ವಿತೀಯ ಪ್ರಶಸ್ತಿ ಪಡೆಯಿತು.
ಕಾಲೇಜಿನ ಡೀನ್ ಡಾ.ಎಂ.ವೆಂಕಟ್ರಾಯ ಪ್ರಭು, ಅಸೋಸಿಯೇಟ್ ಡೀನ್‌ಗಳಾದ ಡಾ. ಎಂ.ಚಕ್ರಪಾಣಿ, ಡಾ.ಆನಂದ್ ಆರ್., ಕಚೇರಿ ವ್ಯವಸ್ಥಾಪಕ ಧರ್ಮೇಂದ್ರ ಎಂ.ಪಿ., ಕಾರ್ಯನಿರ್ವಹಣಾಧಿಕಾರಿಗಳಾದ ಸತೀಶ್ ಶೆಟ್ಟಿ ಕೆ. ಹಾಗೂ ಭಾನುಕಲಾ ಉದಯ್ ಅವರೊಂದಿಗೆತಂಡದ ನಾಯಕಿ ಡಾ.ಸಹನಾ ಡಿ.ಆಚಾರ್ಯ, ಡಾ.ಶೀತಲ್ ಉಳ್ಳಾಲ್, ಡಾ .ಪೂಜಾರಾವ್, ಮೀನಾಕ್ಷಿ, ರೋಸ್ ಮೇರಿ, ತೀಥ೯, ಲಲಿತಾ, ಜ್ಯೋತಿ, ಶುಭಾ ಚಿತ್ರದಲ್ಲಿದ್ದಾರೆ.