ಕನ್ನಡ ವಾರ್ತೆಗಳು

ಮಂಗಳೂರು : 4ನೇ ಅಂತಾರಾಷ್ಟ್ರೀಯ ಮಟ್ಟದ ಯುಜಿಐಟಿ ಸಮ್ಮೇಳನ.

Pinterest LinkedIn Tumblr

intrntionl_ugt_prgm_1

ಮಂಗಳೂರು,ಫೆ.17 : ಮಂಗಳೂರು ವಿ.ವಿ. ವತಿಯಿಂದ ವಿಶ್ವವಿದ್ಯಾನಿಲಯ ಕಾಲೇಜಿನ ಭೌಗೋಳಿಕ ವಿಜ್ಞಾನ ವಿಭಾಗದ ಸಹಯೋಗದಲ್ಲಿ ಯುಜಿಸಿ ಪ್ರಾಯೋಜಿತ “ರಿಮೋಟ್‌ ಸೆನ್ಸಿಂಗ್‌ ಆ್ಯಂಡ್‌ ಜಿಐಎಸ್‌ ಅಪ್ಲಿಕೇಶನ್ಸ್‌ ಆನ್‌ ಕೋಸ್ಟಲ್‌ ಮ್ಯಾನೇಜ್‌ಮೆಂಟ್‌‘ ಕುರಿತು ಮಂಗಳವಾರ ಏರ್ಪಡಿಸಲಾದ 4ನೇ ಅಂತಾರಾಷ್ಟ್ರೀಯ ಮಟ್ಟದ ಯುಜಿಐಟಿ ಸಮ್ಮೇಳನವನ್ನು ಇಂಡಿಯನ್‌ ಸ್ಪೇಸ್‌ ರೀಸರ್ಚ್‌ ಆರ್ಗನೈಸೇಶನ್‌ (ಇಸ್ರೋ) ಸ್ಪೇಸ್‌ ಅಪ್ಲಿಕೇಶನ್‌ ಸೆಂಟರ್‌ನ ಹಿರಿಯ ಸಲಹೆಗಾರ ಡಾ. ರಂಗನಾಥ್‌ ನವಲ್‌ಗ‌ುಂದ್‌ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ರಿಮೋಟ್‌ ಸೆನ್ಸಿಂಗ್‌ ಹಾಗೂ ಜಿಐಸ್‌ ಅಪ್ಲಿಕೇಶನ್‌ನಿಂದ ಕೇವಲ ಭೌಗೋಳಿಕ ಅಧ್ಯಯನ ಮಾತ್ರವಲ್ಲದೆ, ದೇಶದ ಅಭಿವೃದ್ಧಿ ಹಿನ್ನೆಲೆಯಲ್ಲಿ ವಿವಿಧ ರೀತಿಯ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎಂದು ಹೇಳಿದರು.

ರಿಮೋಟ್‌ ತಂತ್ರಜ್ಞಾನ ಹಲವು ವರ್ಷಗಳ ಹಿಂದಿನಿಂದಲೇ ಅಸ್ತಿತ್ವದಲ್ಲಿದ್ದರೂ ಭಾರತದಲ್ಲಿ ಈ ತಂತ್ರಜ್ಞಾನ ಹೆಚ್ಚು ಪರಿಣಾಮಕಾರಿ ರೀತಿಯಲ್ಲಿ ಬಳಸಲಾಗುತ್ತಿದೆ. ಭೂಗೋಳ, ಸಮುದ್ರ ಹಾಗೂ ವಾತಾವರಣಗಳ ಅಧ್ಯಯನ ಮಾತ್ರವಲ್ಲದೆ, ಕೃಷಿ ಕ್ಷೇತ್ರದಲ್ಲೂ ಈ ತಂತ್ರಜ್ಞಾನ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಬೆಳೆಗಳ ಗುಣಮಟ್ಟ, ಉತ್ಪಾದನಾ ಪ್ರಮಾಣವನ್ನು ಕೂಡ ಅಧ್ಯಯನ ನಡೆಸಲು ಸಾಧ್ಯವಿದೆ. ಅಂತರ್ಜಲ, ನದಿಗಳು, ಮರುಭೂಮಿ, ಸೈಕ್ಲೋನ್‌ ಅಪಾಯ, ಪ್ರವಾಹ, ಸುನಾಮಿ ಹಾಗೂ ಕರಾವಳಿ ತೀರಗಳಿಗೆ ಸಂಬಂಧಪಟ್ಟು ಪ್ರತಿಯೊಂದು ಕ್ಷೇತದಲ್ಲಾಗುವ ಅಭಿವೃದ್ಧಿ, ಬದಲಾವಣೆಗಳ ಮಾಹಿತಿಯೂ ದೊರೆಯುತ್ತದೆ ಎಂದರು.

intrntionl_ugt_prgm_2 intrntionl_ugt_prgm_3 intrntionl_ugt_prgm_4

ಮಂಗಳೂರು ವಿ.ವಿ. ಕುಲಪತಿ ಪ್ರೊ. ಕೆ. ಭೈರಪ್ಪ ಮಾತನಾಡಿ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ರಿಮೋಟ್‌ ಸೆನ್ಸಿಂಗ್‌ ವೇಗವಾಗಿ ಬೆಳೆಯುತ್ತಿದೆ. ಇದರ ಮೂಲಕ ಪ್ರತಿಯೊಂದು ಕ್ಷೇತ್ರದ ಭೌಗೋಳಿಕ ಪ್ರದೇಶದ ಮಾಹಿತಿ ಪಡೆಯುವುದು ಸಾಧ್ಯ. 1840ರಲ್ಲಿ ಈ ತಂತ್ರಜ್ಞಾನವನ್ನು ಏರಿಯಲ್‌ ಫೋಟೋಗ್ರಾಫಿಗೆ ಬಳಸಲಾಗುತ್ತಿತ್ತು. ಪ್ರಸ್ತುತ, ದೇಶದ ಅಭಿವೃದ್ಧಿಗೆ ಪೂರಕವಾಗುವ ರೀತಿಯಲ್ಲಿ ಪ್ರತಿಯೊಂದು ರೀತಿಯಲ್ಲೂ ಉಪಯೋಗಿಸಲಾಗುತ್ತಿದೆ ಎಂದರು.

ವಿ.ವಿ. ಕಾಲೇಜಿನ ಭೌಗೋಳಿಕ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಡಿ.ಪಿ. ಅಂಗಡಿ, ಯುಜಿಐಟಿ ಅಧ್ಯಕ್ಷ ಡಾ. ಕೆ.ಎಸ್‌. ರಾಯಮನೆ, ಕಾರ್ಯದರ್ಶಿ ಡಾ. ಅಶೋಕ್‌, ವಿ.ವಿ. ಕಾಲೇಜು ಪ್ರಾಂಶುಪಾಲ ಡಾ.ಉದಯ ಕುಮಾರ್‌, ಸಂಸ್ಕೃತ ವಿಭಾಗದ ಡಾ. ಲಕ್ಷ್ಮೀನಾರಾಯಣ ಭಟ್ಟ ಎಚ್‌.ಆರ್‌. ಮೊದಲಾದವರು ಈಸಂದರ್ಭದಲ್ಲಿ ಉಪಸ್ಥಿತರಿದ್ದರು.

Write A Comment