ವರದಿ : ಈಶ್ವರ ಎಂ. ಐಲ್
ಮುಂಬಯಿ : ಕುಲಾಲ ಸಂಘ, ಮುಂಬಯಿ ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದಿಂದ ಹಳದಿ ಕುಂಕುಮ ಕಾರ್ಯಕ್ರಮವು ಫೆ. 7 ರಂದು ಗೋರೆಗಾಂವ್ ಪೂರ್ವ, ಐ. ಬಿ. ಪಟೇಲ್ ರೋಡ್, ಶ್ರೀ ದುರ್ಗಾದೇವಿ ಮಂದಿರದಲ್ಲಿ ಜರಗಿತು.
ಸಮಾರಂಭಕ್ಕೆ ಅತಿಥಿಯಾಗಿ ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ನಿರ್ದೇಶಕಿ ಉಮಾ ಕೃಷ್ಣ ಶೆಟ್ಟಿ ಯವರು ಆಗಮಿಸಿದ್ದು ಕುಲಾಲ ಸಂಘದ ಮಹಿಳೆಯರ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚಿ ಮಾತನಾಡಿದರು. ಒಗ್ಗಟ್ಟು ಮತ್ತು ಭಾಂದವ್ಯವನ್ನು ವೃದ್ದಿಸಲು ಹಳದಿ ಕುಂಕುಮ ಕಾರ್ಯಕ್ರಮವು ಸಹಕರಿಸುತ್ತದೆ. ಈ ಕಾರ್ಯಕ್ರಮಕ್ಕೆ ಧಾರ್ಮಿಕ ಮಹತ್ವವಿದ್ದು ಇದು ಬಹು ಮುಖ್ಯ ಆಚರಣೆ ಎಂದರು.
ಅತಿಥಿಯಾಗಿ ಉಪಸ್ಥಿತರಿದ್ದ ಸ್ಥಳೀಯ ಸಮಾಜ ಸೇವಕಿ ಆಶಾ ರಘುನಾಥ ಕೊಟ್ಟಾರಿ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಂತಸವಾಗಿದೆ ಎನ್ನುತ್ತಾ ಮಹಿಳೆಯರು ತಮ್ಮ ಸಾಂಘಿಕ ಶಕ್ತಿಯ ಮೂಲಕ ಸಮಾಜದ ಚಟುವಟಿಕೆಗಳಲ್ಲಿ ಕ್ರೀಯಾಶೀಲರಾಗಬೇಕು, ಎಂದರು.
ವಿಶೇಷ ಅತಿಥಿಯಾಗಿ ಆಗಮಿಸಿದ ಸಮಾಜ ಸೇವಕಿ ಶ್ರೀಮತಿ ಕೆ. ಆಚಾರ್ಯ ಅವರು ಮಾತನಾಡುತ್ತಾ ಹಳದಿ ಕುಂಕುಮದ ಆಚರಣೆಯು ವೈಭವೀಕರಣವಾಗದೆ, ಧಾರ್ಮಿಕ ಚೌಕಟ್ಟಿನೊಳಗೆ ಆಚರಿಸುವಂತಾಗಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪುಷ್ಪಲತಾ ಸಾಲ್ಯಾನ್ ಅವರು ಮಹಿಳೆಯರೆಲ್ಲರ ಸಹಕಾರದಿಂದ ಈ ಕಾರ್ಯಕ್ರಮವು ಯಶಸ್ವಿಯಾಗಿದ್ದು, ಹಳದಿ ಕುಂಕುಮವು ಆರೋಗ್ಯದ ದೃಷ್ಟಿಯಿಂದಲೂ ಮಹತ್ವಪೂರ್ಣವಾಗಿದೆ ಎನ್ನುತ್ತಾ ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರವನ್ನು ಕೋರಿದರು.
ವೇದಿಕೆಯಲ್ಲಿ ಚಿತ್ರ ನಟಿ ರಜನಿ ಜಗದೀಶ್ ಅಮೀನ್, ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷರುಗಳಾದ ಪ್ರಮೀಳಾ ಬಂಗೇರ ಮತ್ತು ಸುಚೇತಾ ಕುಲಾಲ್, ಕಾರ್ಯದರ್ಶಿ ಮಾಲತಿ ಅಂಚನ್, ಕಾರ್ಯದರ್ಶಿ ಆಶಾಲತಾ ಎಸ್. ಮೂಲ್ಯ, ಕೋಶಾಧಿಕಾರಿ ಆರತಿ ಕೆ. ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಆಶಾಲತಾ ಎಸ್. ಮೂಲ್ಯ ಮತ್ತು ರತ್ನ ದಿನೇಶ್ ಕುಲಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರಾರಂಭದಲ್ಲಿ ಮಕ್ಕಳಿಂದ ನೃತ್ಯ ಕಾರ್ಯಾಕ್ರಮ ಹಾಗೂ ಗಣೇಶ್ ಎರ್ಮಾಳ್ ಅವರಿಂದ ಸಂಗೀತ ನಡೆಯಿತು.
ಸಮಾರಂಭದಲ್ಲಿ ಕುಲಾಲ ಸಂಘದ ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್, ಕಟ್ಟಡ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಗೋಪಾಲ ಬಂಗೇರ, ನಿಧಿ ಸಂಗ್ರಹ ಸಮಿತಿಯ ಕೋಶಾಧಿಕಾರಿ ಕರುಣಾಕರ ಸಾಲ್ಯಾನ್, ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ರಘು ಮೂಲ್ಯ, ಕಾರ್ಯದರ್ಶಿ ಅರುಣ್ ಬಂಗೇರ, ಕೋಶಾಧಿಕಾರಿ ಸತೀಶಾ ಬಂಗೇರ ಹಾಗೂ ಆನಂದ ಕುಲಾಲ್, ಗೋವಿಂದ ಬಂಜನ್ ಮೊದಲಾದವರು ಉಪಸ್ಥಿತರಿದ್ದರು.