ಉಡುಪಿ: ಕುಂದಾಪುರ ತಾಲೂಕಿನಲ್ಲಿ 56 ಸೂಕ್ಷ್ಮ ಹಾಗೂ 13 ಅತಿ ಸೂಕ್ಷ್ಮ ಮತಗಟ್ಟೆಗಳು, 27 ನಕ್ಸಲ್ ಪ್ರದೇಶದ ಮತಗಟ್ಟೆಗಳು, 260 ಸಾಮಾನ್ಯ ಮತಗಟ್ಟೆ ಸೇರಿಂದತೆ ಒಟ್ಟು ಒಟ್ಟು 356 ಮತಗಟ್ಟೆಗಳವೆ. ಶಿರೂರು ಜಿ.ಪಂ.ರಲ್ಲಿ 4, ತ್ರಾಸಿ ಕ್ಷೇತ್ರದಲ್ಲಿ 1, ವಂಡ್ಸೆ ಕ್ಷೇತ್ರದಲ್ಲಿ 1, ಕಾವ್ರಾಡಿ ಕ್ಷೇತ್ರದಲ್ಲಿ 2, ಕೋಟೇಶ್ವರ ಕ್ಷೇತ್ರದಲ್ಲಿ 3, ಸಿದ್ದಾಪುರ ಕ್ಷೇತ್ರದಲ್ಲಿ 2 ಹೀಗೆ ಒಟ್ಟು 13 ಅತಿಸೂಕ್ಷ್ಮ ಮತಗಟ್ಟೆಗಳಿದೆ ಎಂದು ಗುರುತಿಸಲಾಗಿದೆ.
ಜಿ.ಪಂ., ತಾ.ಪಂ. ಚುನಾವಣೆಯ ಕುಂದಾಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು ಕುಂದಾಪುರದ ಭಂಡಾರ್‌ರ್ಕಾರ್ಸ್ ಕಾಲೇಜಿನಲ್ಲಿ ನಡೆಯಲಿದ್ದು, ಮಸ್ಟರಿಂಗ್ ಹಾಗೂ ಡೀಮಸ್ಟರಿಂಗ್ ಕೇಂದ್ರವೂ ಅದೇ ಆಗಿದೆ. ಒಟ್ಟು ಬಸ್ಸು ರೂಟಗಳ ಸಂಖೆ 53, ವ್ಯಾನ್ ರೂಟ್ 31 ಹಾಗೂ ಜೀಪು ರೂಟ್‌ಗಳು ಸೇರಿದಂತೆ ಒಟ್ಟು 94 ರೂಟ್‌ಗಳನ್ನು ಗುರುತಿಸಲಾಗಿದೆ.
ತಾಲೂಕಿನಲ್ಲಿ 393 ಪ್ರಿಸೈಡಿಂಗ್ ಆಫಿಸರ್, 392 ಅಸಿಸ್ಟೆಂಟ್ ಪ್ರಿಸೈಡಿಂಗ್ ಆಫಿಸರ್, 1176 ಪೋಲಿಂಗ್ ಆಫಿಸರ್ ಹಾಗೂ 362ಗ್ರೂಫ್ ಡಿ ಸೇರಿದಂತೆ ಒಟ್ಟು 3272 ಮಂದಿ ಸಿಬಂದಿಗಳು ಕರ್ತವ್ಯ ನಿರ್ವಹಿಸಲಿದ್ದು, ಇದಲ್ಲದೇ 24 ಸೆಕ್ಟರ್ ಆಫಿಸರ್, 15 ಮಾಸ್ಟರ್ ಟ್ರೈನರ್ ಮತ್ತು 6 ಎ.ವಿ.ಎಂ. ಕಾರ್ಯನಿರ್ವಹಿಸಲಿದ್ದಾರೆ.
ತಾಲೂಕಿನಲ್ಲಿ 1,46,949 ಪುರುಷರು ಹಾಗೂ 1,58,506 ಮಹಿಳಾ ಮತದಾರರು ಸೇರಿದಂತೆ ಒಟ್ಟು 3,05,471 ಮತದಾರರಿದ್ದಾರೆ. ಒಟ್ಟು 108 ಸೇವಾ ಮತದಾರರಿದ್ದಾರೆ. ತಾಲೂಕಿನಲ್ಲಿ 10 ಜಿ.ಪಂ. 37 ತಾ.ಪಂ. ಕ್ಷೇತ್ರಗಳಲ್ಲಿ 99 ಮಂದಿ ಅಭ್ಯರ್ಥಿಗಳಿದ್ದಾರೆ.
ಬಿಗು ಭದ್ರತೆ: ಜಿ.ಪಂ. ಹಾಗೂ ತಾ.ಪಂ. ಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜಿಲ್ಲೆ ಸೇರಿದಂತೆ ಉತ್ತರಕನ್ನಡ ಹಾಗೂ ಬೆಂಗಳೂರು ಭಾಗಗಳಿಂದ ಹೆಚ್ಚುವರಿ ಪೊಲೀಸರು ಚುನಾವಣೆ ಭದ್ರತೆಯ ಕರ್ತವ್ಯದಲ್ಲಿರುತ್ತಾರೆ. ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಬೆಂಗಳೂರು ನಗರ ಡಿವೈಎಸ್ಪಿ ಸಚಿನ್ ಘೋರ್ಪಾಡೆ, 7 ಮಂದಿ ಸರ್ಕಲ್ ಇನ್ಸ್‌ಪೆಕ್ಟರ್, 14 ಪಿ.ಎಸ್.ಐ., 28 ಎ.ಎಸ್.ಐ., 474 ಸಿಬ್ಬಂದಿಗಳು, 30 ಡಿಸ್ಟ್ರಿಕ್ಟ್ ಆರ್ಮಡ್ ಫೋರ್‍ಸ್, 4 ಕೆ.ಎಸ್.ಆರ್.ಪಿ, 2 ಡಿಎಆರ್, 154 ಮಂದಿ ಗೃಹರಕ್ಷಕ ದಳ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಉಳಿದಂತೆ ಸೈಕ್ಲಿಂಗ್ ಫೋರ್ಸ್, ಶಿರೂರಿನಲ್ಲಿ ಚೆಕ್‌ಪೋಸ್ಟ್ ರಚಿಸಲಾಗಿದೆ. ಇನ್ನು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹೆಚ್ಚುವರಿ ಶಸಸ್ತ್ರಧಾರಿ ಪೊಲೀಸರು ನಿಯೋಜನೆಗೊಂಡಿದ್ದಾರೆ.