ಕನ್ನಡ ವಾರ್ತೆಗಳು

1,160 ಕಿ.ಮೀ ಕಾಲ್ನಡಿಗೆಯಲ್ಲಿ ಕುಂದಾಪುರದ ಯಡಮೊಗೆ ಬಂದ 457 ಸಾಧುಗಳು;ಹಠ ಯೋಗಿಗಳ ಬಗ್ಗೆ ನಿಮಗಿಷ್ಟು ಗೊತ್ತು?

Pinterest LinkedIn Tumblr

ಕುಂದಾಪುರ: ತಲೆ ಮೇಲೆ ಜಟೆ, ಕೈಯಲ್ಲಿ ಕೋಲು, ಕೆಲವರ ಕೈಯಲ್ಲಿ ತ್ರಿಶೂಲ, ಕುತ್ತಿಗೆಗೆ ವಿವಿಧ ರೀತಿಯ ಮಾಲೆಗಳು. ಕುಂದಾಪುರದ ಯಡಮೊಗೆ ಪರಿಸರದಲ್ಲಿ ಎಲ್ಲೆಲ್ಲಿ ನೋಡಿದ್ರೂ ಸಾಧುಗಳದ್ದೇ ದರ್ಶನ. ಗುಂಪುಗುಂಪಾಗಿ, ಒಬ್ಬೊಬ್ಬರಾಗಿ ಶಿವಮೊಗ್ಗ ರಾಜ್ಯಹೆದ್ದಾರಿಯ ಘಾಟಿ ಪ್ರದೇಶದಿಂದ ಯಡಮೊಗೆಯತ್ತ ಸಾಗಿಬರುವ ದೃಶ್ಯ. ಅಲ್ಲಲ್ಲಿ ಕುಳಿತು ಬಂಗಿ ಸೇದುವ ಝಲಕ್ ಸ್ಥಳೀಯರಲ್ಲಿ ಕುತೂಹಲ ಕೆರಳಿಸಿತ್ತು. ಅಷ್ಟಕ್ಕೂ ಇವರ್‍ಯಾಕೆ ಇಲ್ಲಿಗೆ ಬಂದಿದ್ರು ಅಂತ ಗೊತ್ತಾಗಬೇಕಾದ್ರೇ ಈ ಸ್ಟೋರಿ ಓದಿರಿ.

1160 ಕಿ.ಮೀ ಕಾಲ್ನಡಿಗೆ:
ಸುಮಾರು 1100 ವರ್ಷಗಳ ಇತಿಹಾಸವಿರುವ ಪ್ರಸಿದ್ದ ಕ್ಷೇತ್ರವಾದ ಹಲವರಿ ಮಠಕ್ಕೆ ಹಲವು ಶತಮಾನಗಳಿಂದಲೂ ಈ ಝಂಡಿ ಉತ್ಸವ ಹನ್ನೆರಡು ವರ್ಷಗಳಿಗೊಮ್ಮೆ ಬರುತ್ತಿದೆ. ಧರ್ಮನಾಥ ಪಂಥದ ಈ ಮಠಕ್ಕೆ ನಿನ್ನೆಯೂ ಸೇರಿದಂತೆ 84ನೇ ಬಾರಿಗೆ ಈ ಉತ್ಸವ ಬಂದಿದೆ. ಸಾಧುಗಳ ದೊಡ್ಡ ಗುಂಪಿಗೆ ಝಂಡಿ ಎನ್ನುತ್ತಾರೆ. ತ್ರಯಾಂಬಕೇಶ್ವರದಲ್ಲಿ ನಡೆಯುವ ಮಹಾಕುಂಭ ಮೇಳದಲ್ಲಿ ಮಂಗಳೂರು ಕದ್ರಿ ಶ್ರೀ ಯೋಗೇಶ್ವರ ಮಠದ ಸ್ವಾಮೀಜಿಗಳನ್ನು ಆಯ್ಕೆಮಾಡಲಾಗುತ್ತದೆ. ಈ ಬಾರೀ ಮಠಕ್ಕೆ ಶ್ರೀ ಯೋಗಿ ನಿರ್ಮಲನಾಥ್ ಜೀ ಅವರನ್ನು ಆರಿಸಲಾಗಿದ್ದು ಹೀಗೆ ಆಯ್ಕೆಯಾದ ರಾಜರು ಮಹಂತ್ ಸೂರಜ್‌ನಾತ್ ಜೀ ಅವರ ಉಪಸ್ಥಿತಿಯಲ್ಲಿ ಸುಮಾರು 450ಕ್ಕೂ ಮಿಕ್ಕಿ ಸಾಧುಗಳ ಜೊತೆಗೆ ಅಕ್ಷಯ ಪಾತ್ರೆ ಹಿಡಿದು ನಾಗರಪಂಚಮಿಯಂದು ಅಲ್ಲಿನಿಂದ 1160  ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸುವ ಸಾಧುಸಂತರು ಒಟ್ಟು 57 ಮಠಗಳನ್ನು ಸಂಪರ್ಕಿಸುತ್ತಾರೆ ಮತ್ತು ಅಲ್ಲಲ್ಲಿ ಬೈಠಕ್ ನಡೆಸುತ್ತಾರೆ.

Hosangadi_Yadamoge_Sadhu Jandi Fest (39) Hosangadi_Yadamoge_Sadhu Jandi Fest (37) Hosangadi_Yadamoge_Sadhu Jandi Fest (31) Hosangadi_Yadamoge_Sadhu Jandi Fest (22) Hosangadi_Yadamoge_Sadhu Jandi Fest (28) Hosangadi_Yadamoge_Sadhu Jandi Fest (15) Hosangadi_Yadamoge_Sadhu Jandi Fest (10) Hosangadi_Yadamoge_Sadhu Jandi Fest (11) Hosangadi_Yadamoge_Sadhu Jandi Fest (12) Hosangadi_Yadamoge_Sadhu Jandi Fest (13) Hosangadi_Yadamoge_Sadhu Jandi Fest (14) Hosangadi_Yadamoge_Sadhu Jandi Fest (17) Hosangadi_Yadamoge_Sadhu Jandi Fest (16) Hosangadi_Yadamoge_Sadhu Jandi Fest (19) Hosangadi_Yadamoge_Sadhu Jandi Fest (18) Hosangadi_Yadamoge_Sadhu Jandi Fest (36) Hosangadi_Yadamoge_Sadhu Jandi Fest (32) Hosangadi_Yadamoge_Sadhu Jandi Fest (34) Hosangadi_Yadamoge_Sadhu Jandi Fest (35) Hosangadi_Yadamoge_Sadhu Jandi Fest (38) Hosangadi_Yadamoge_Sadhu Jandi Fest (33) Hosangadi_Yadamoge_Sadhu Jandi Fest (26) Hosangadi_Yadamoge_Sadhu Jandi Fest (23) Hosangadi_Yadamoge_Sadhu Jandi Fest (20) Hosangadi_Yadamoge_Sadhu Jandi Fest (21) Hosangadi_Yadamoge_Sadhu Jandi Fest (6) Hosangadi_Yadamoge_Sadhu Jandi Fest (1) Hosangadi_Yadamoge_Sadhu Jandi Fest (2) Hosangadi_Yadamoge_Sadhu Jandi Fest (3) Hosangadi_Yadamoge_Sadhu Jandi Fest (4) Hosangadi_Yadamoge_Sadhu Jandi Fest (9) Hosangadi_Yadamoge_Sadhu Jandi Fest (8) Hosangadi_Yadamoge_Sadhu Jandi Fest (7) Hosangadi_Yadamoge_Sadhu Jandi Fest (5) Hosangadi_Yadamoge_Sadhu Jandi Fest (24) Hosangadi_Yadamoge_Sadhu Jandi Fest (27) Hosangadi_Yadamoge_Sadhu Jandi Fest (29) Hosangadi_Yadamoge_Sadhu Jandi Fest (25) Hosangadi_Yadamoge_Sadhu Jandi Fest (30)

ದುರ್ಗಮ ಹಾದಿ ಪಯಣ- ಮಹಾನ್ ಸಾಧಕರು
ಹಿಂದೂ ಧರ್ಮ ಹಾಗೂ ನಾಥಪಂಥದ ಉದ್ದಾರಕ್ಕಾಗಿ ಧೀಕ್ಷೆ ಪಡದು ಹಠಯೋಗಿಗಳಾಗುವ ಈ ಸಾಧುಗಳು ಮಹಾನ್ ಸಾಧಕರಾಗಿದ್ದಾರೆ. ಹಲವರು ಕಠಿಣ ತಪಸ್ಸು, ಧ್ಯಾನಗಳ ಮೂಲಕ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡಿದ್ದಾರೆ. 457 ಮಂದಿ ಸಾಧುಗಳ ಪೈಕಿ 8 ಮಂದಿ ಪಧವಿದರರು ಇದ್ದಾರೆ. ಈ ಸಾಧುಗಳು ತಮ್ಮ ನಿತ್ಯದ ಸಸ್ಯಹಾರಿ ಊಟ-ಉಪಹಾರಗಳನ್ನು ಅವರೇ ತಯಾರಿಸಿಕೊಳ್ಳುತ್ತಾರೆ. ಎಲ್ಲಿಯೂ ವಾಹನವನ್ನು ಏರುವುದಿಲ್ಲ.ಬಹುತೇಕ ದುರ್ಗಮ ಕಾಡುಹಾದಿಯಲ್ಲಿಯೇ ಇವರ ಪಯಣ. ವಿಶ್ವಕಲ್ಯಾಣಕ್ಕಾಗಿ ಶಿವಸೇವೆಯನ್ನು ಗುರಿಯಾಗಿಸಿಕೊಂಡು ನಾಸಿಕ್‌ನಿಂದ 2015ರ ಆಗಸ್ಟ್ 15ಕ್ಕೆ ಕಾಲ್ನಡಿಗೆಯಲ್ಲಿ ಹೊರಟ ಝಂಡಿ ಯಾತ್ರೆ ಜನವರಿ 24ಕ್ಕೆ ಕರ್ನಾಟಕದ ಬೆಳಗಾವಿಗೆ ತಲುಪಿ ಅಲ್ಲಿಂದ ಹಳಿಯಾಳ, ಸಿರಸಿ, ಚಂದ್ರಗುತ್ತಿ, ಸಾಗರ , ಹೊಸನಗರದ ಮೂಲಕ ಹೊಸಂಗಡಿ ಸಮೀಪದ ಯಡಮೊಗೆ ತಲುಪಿದೆ. ಬೆಳಗಾವಿಯಿಂದ ಭೈರವನಾಥ ಎಂಬ ಶ್ವಾನವು ಇವರೊಂದಿಗೆ ಯಡಮೊಗೆಗೆ ಆಗಮಿಸಿದ್ದು ಸ್ಥಳೀಯ ಜನರಲ್ಲಿ ಅಚ್ಚರಿಯನ್ನುಂಟು ಮಾಡಿತ್ತು.

ಕುಂದಾಪುರ ಯಡಮೊಗೆ ಹಲವರಿ ಮಠಕ್ಕೆ 457 ಸಾಧು ಸಂತರ ತಂಡ ಗುರುವಾರ ಆಗಮಿಸಿದರು. ಅವರನ್ನು ಮಠದ ವತಿಯಿಂದ ಸ್ವಾಗತಿಸಲಾಯಿತು. ಶುಕ್ರವಾರದಂದು ಮಠದಲ್ಲಿ ದೋನಿಪೂಜೆ, ಪಾತ್ರದೇವತಾ ಪೂಜೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳು ನಡೆಯುತ್ತದೆ. ಅಲ್ಲದೇ ನಾಥಪಂಥದ ಇಡೀ ಸಮಾಜದ ಏಳಿಗೆ ಹಾಗೂ ಹಲವರಿ ಮಠದ ಅಭಿವೃದ್ಧಿಗಾಗಿ ಮುಂದಿನ 12 ವರ್ಷ ಅವಧಿಗೆ ಒಬ್ಬರು ಪೀಠಾಧಿಪತಿಯನ್ನು ನೇಮಿಸುವ ಕಾರ್ಯವೂ ಇದೆ. ಈ ಸಂದರ್ಭ ಶ್ರೀ ಕ್ಷೇತ್ರ ಕೊಡಚಾದ್ರಿ ಹಲವರಿ ಜೋಗಿ ಮಠ ಅಭಿವೃದ್ದಿ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಡಾ|| ಕೇಶವ ಕೋಟೇಶ್ವರ, ಝಂಡಿ ಉತ್ಸವ ಸ್ವಾಗತ ಸಮಿತಿಯ ರಾಮನಾಥ ಭಟ್ಕಳ, ತಾಲೂಕು ಜೋಗಿ ಸಮಾಜದ ಅಧ್ಯಕ್ಷ ಶೇಖರ್ ಬಳೆಗಾರ ಮೊದಲಾದವರು ಉಪಸ್ಥಿತರಿದ್ದರು.

ಒಟ್ಟಿನಲ್ಲಿ ಟಿವಿ ಹಾಗೂ ಪತ್ರಿಕೆಗಳಲ್ಲಿ ಹಠಯೋಗಿಗಳು ಹಾಗೂ ಸಾಧುಗಳನ್ನು ನೋಡುತ್ತಿದ್ದ ಇಲ್ಲಿನ ಜನರು ಅವರನ್ನು ನೈಜವಾಗಿ ಕಂಡು ಆಶಿರ್ವಾದ ಪಡೆದರು. ಇನ್ನು ಇವರನ್ನು ಕಾಣಬೇಕಿದ್ರೇ ಆಶಿರ್ವಾದ ಪಡೆಯಬೇಕಿದ್ದರೇ ಮತ್ತೆ ಹನ್ನೆರಡು ವರ್ಷ ಕಾಯಲೇಬೇಕು.

ಚಿತ್ರ ಮತ್ತು ವರದಿ -ಯೋಗೀಶ್ ಕುಂಭಾಸಿ

Write A Comment