ಕನ್ನಡ ವಾರ್ತೆಗಳು

ಕಾರಿಗೆ ಲಾರಿ ಡಿಕ್ಕಿ :ಒಂದೇ ಕುಟುಂಬದ ಮೂವರ ದಾರುಣ ಸಾವು

Pinterest LinkedIn Tumblr

acdent_putur_family

ಮಂಗಳೂರು, ಫೆ.19 : ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕಗೊಂಡನಹಳ್ಳಿಯಲ್ಲಿ ಇಂದು ಬೆಳಗಿನ ಜಾವ ಲಾರಿಯೊಂದು ಮಾರುತಿ ಆಲ್ಟೋ ಕಾರಿಗೆ ಅಪ್ಪಳಿಸಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬಂಟ್ವಾಳ ತಾಲೂಕು ಕಾವಳಕಟ್ಟೆಯ ಒಂದೇ ಕುಟುಂಬಕ್ಕೆ ಸೇರಿದ ಮೂವರು ದಾರುಣ ಸಾವನ್ನಪ್ಪಿದ್ದಾರೆ.

ಮೃತಪಟ್ಟವರನ್ನು ಮೂಲತಃ ಬಂಟ್ವಾಳ ತಾಲೂಕಿನವರಾದ ಕಾವಳಕಟ್ಟೆ ನಿವಾಸಿ ಜಯ ಕೀರ್ತಿಇಂದ್ರ (50), ಅವರ ಪತ್ನಿ ವಾಗೀಶ್ವರಿ (48) ಮತ್ತು ಪುತ್ರ ಪ್ರಶಾಂತ್ (28) ಎಂದು ಗುರುತಿಸಲಾಗಿದೆ.

ಪ್ರಶಾಂತ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಜಯಕೀರ್ತಿ ದಂಪತಿ ಕೆಲವು ದಿನಗಳ ಹಿಂದೆ ಮಗನ ಮನೆಗೆ ತೆರಳಿದ್ದರು.ಈ ಕುಟುಂಬ ನಿನ್ನೆ ರಾತ್ರಿ ಬೆಂಗಳೂರಿನಿಂದ ಆಲ್ಟೋ ಕಾರಿನಲ್ಲಿ ಹೊರಟು ಮಂಗಳೂರಿಗೆ ಬರುತ್ತಿದ್ದಾಗ ನಸುಕಿನಲ್ಲಿ ಚಿಕ್ಕಗೊಂಡನ ಹಳ್ಳಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಮೂವರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತ ಜಯಕೀರ್ತಿ ಇಂದ್ರ ಅವರು ಕಾವಳಕಟ್ಟೆ ಬಸದಿಯ ಅರ್ಚಕ ದಿವಾಕರ ಇಂದ್ರರ ಸಹೋದರರಾಗಿದ್ದಾರೆ.

ಈ ಬಗ್ಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಯತ್ತಿದೆ.

 

Write A Comment