ವರದಿ : ಈಶ್ವರ ಎಂ. ಐಲ್ / ಚಿತ್ರ,: ದಿನೇಶ್ ಕುಲಾಲ್
ಮುಂಬಯಿ: ಬೊಯಿಸರ್ (ಪೂ.) ಕಯಿರ್‌ಪಾಡಾದ ಶ್ರೀ ಸೋಮೇಶ್ವರ ದೇವಸ್ಥಾನ ದಲ್ಲಿ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಜರಗಿತು.
ಧಾರ್ಮಿಕ ಕಾರ್ಯಕ್ರಮದಂಗ ವಾಗಿ ಬೆಳಗ್ಗೆಯಿಂದ ತೋರಣ ಮುಹೂರ್ತ, ಸ್ವಸ್ತಿ ಪುಣ್ಯಾಹ ವಾಚನ, ನವಕ ಪ್ರಧಾನ ಹೋಮ, ಬಳಿಕ ಶ್ರೀ ಸೋಮೇಶ್ವರ ದೇವರಿಗೆ ಪಂಚಾಮೃತ ಅಭಿಷೇಕ ಜರಗಿತು. ಶ್ರೀ ಸತ್ಯನಾರಾಯಣ ಮಹಾಪೂಜೆಯ ಪೂಜಾ ವಿಧಿ-ವಿಧಾನಗಳನ್ನು ಎಂ. ಜೆ. ಪ್ರವೀಣ್ ಭಟ್ ನೆರವೇರಿಸಿದರು.
ದೇವಸ್ಥಾನದ ಆಡಳಿತ ಮುಖ್ಯಸ್ಥ ವಿಜಯ ಸಂಜೀವ ಶೆಟ್ಟಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪೂಜಾ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿ ಗಳಾಗಿ ಸ್ಥಳೀಯ ಶಾಸಕ ಅಮಿತಾ ಕೃಷ್ಣ ಗೋಡ್, ಮೀರಾ-ಡಹಾಣೂ ಬಂಟ್ಸ್‌ನ ಅಧ್ಯಕ್ಷ ಭುಜಂಗ ಶೆಟ್ಟಿ, ಸಮಾಜ ಸೇವಕ ಸತ್ಯಾ ಕೋಟ್ಯಾನ್, ಹೊಟೇಲ್ ಉದ್ಯಮಿಗಳಾದ ಭಾಸ್ಕರ್ ಶೆಟ್ಟಿ, ರಘುರಾಮ ರೈ, ಉದಯ ಕುಲಾಲ್, ಹೇಮಂತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ತುಳು-ಕನ್ನಡಿಗರು, ಸ್ಥಳೀಯ ತುಳು-ಕನ್ನಡ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು.