ಮಂಗಳೂರು,ಮಾ.29: ನಗರದಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹ ಅವರಣದಲ್ಲಿ ಮೊಬೈಲ್ ಜಾಮರ್ ನಿಂದ ಜನಸಾಮಾನ್ಯರಿಗೂ ಸಮಸ್ಯೆಯಾಗದಂತೆ ಪರಿಶೀಲಿಸಿ ಸಮಸ್ಯೆಯನ್ನು ಸರಿಪಡಿಸುವಂತೆ ಮೊಬೈಲ್ ಜಾಮರ್ ಕಂಪೆನಿಗೆ ಜಿಲ್ಲಾಧಿಕಾರಿ ಎ.ಬಿ ಇಬ್ರಾಹೀಂ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಛೆರಿಯಲ್ಲಿ ಕರೆದ ಸಭೆಯಲ್ಲಿ ಮಾತನಾಡಿದ ಅವರು ಜಾಮರ್ ಆಳವಡಿಕೆಯಿಂದ ಸುತ್ತಮುತ್ತಲಿನ ಮೊಬೈಲ್ ಪೋನ್ ಬಳಕೆದಾರರಿಗೆ ತೊಂದರೆಯಾಗುವುದು ಗಮನಕ್ಕೆ ಬಂದಿದೆ. ಇದನ್ನು ಪರಿಹರಿಸಲು ತುತು ಕ್ರಮ ಕೈಗೊಳ್ಳುವಂತೆ ಹೈದರಾಬಾದ್ ಮೂಲದ ಜಾಮರ್ ಕಂಪೆನಿಗೆ ಸೂಚನೆ ನೀಡಿದರು.
ವಿವಿಧ ಸಂಸ್ಥೆಯ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದು, ಜಾಮರ್ ನಿಂದಾಗಿರುವ ಸಮಸ್ಯೆಗೆ ಪರಿಹಾರ ನೀಡುವುದ್ದಾಗಿ ಜಿಲ್ಲಾಧಿಕಾರಿಗೆ ಮನವರಿಗೆ ಮಾಡಿದರು