ಕನ್ನಡ ವಾರ್ತೆಗಳು

ಮೂರ್ಗನ್ ಗೇಟ್ : ಮ.ನ.ಪಾ ವತಿಯಿಂದ 3.5 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ನೂತನ ರಸ್ತೆ ಉದ್ಘಾಟನೆ

Pinterest LinkedIn Tumblr

casia_road_inugrtin_1

ಮಂಗಳೂರು,ಏ.04 : ಸಂತ ರೀತಾ ದೇವಾಲಯ ಕಾಸಿಯ ಮೂರ್ಗನ್ ಗೇಟ್ ಇದರ ಮುಂದಿನ ರಸ್ತೆಗೆ ಮಹಾನಗರ ಪಾಲಿಕೆವತಿಯಿಂದ ಸಮಾರು 3.5 ಲಕ್ಷ ರೂ ವೆಚ್ಚದಲ್ಲಿ ಇಂಟರ್ ಲಾಕ್ ಹಾಗೂ ದಾರಿ ದೀಪದ ಕಾಮಗಾರಿಯನ್ನು ಮಾಜಿ ಮೇಯರ ಜಸಿಂತಾ ವಿಜಯ ಅಲ್ ಫ್ರೆಡ್ ಉಧ್ಘಾಟಿಸಿದರು.

ಈ ಸಂದಭ೯ದಲ್ಲಿ ಅವರು ನಗರ ಪಾಲಿಕೆಯು ಜನ ಸಮಾನ್ಯರಿಗೆ ಮೂಲಭೂತ ಸೌಕರ್ಯ ಒದಗಿಸಬೇಕಾದ್ದು ಅದ್ಯ ಕರ್ತವ್ಯ ಜನರಿಗೆ ದಾರಿದೀಪ ನೀರು ಮುಂತಾದ ಸಮಸ್ಯೆಗಳು ಉಂಟಾದಾಗ ಜನರ ಸೇವಗೆ ನಾನು ಸದಾ ಸ್ಪಂದಿಸುತ್ತೆನೆ ಎಂದು ಹೇಳಿದರು.

casia_road_inugrtin_2 casia_road_inugrtin_3 casia_road_inugrtin_4 casia_road_inugrtin_5 casia_road_inugrtin_6 casia_road_inugrtin_7 casia_road_inugrtin_8 casia_road_inugrtin_9

ಚರ್ಚಿನ ಮುಖ್ಯ ಧರ್ಮಗರುಗಳಾದ. ಫಾ: ಹೆರಾಲ್ಡ್ ಮಸ್ಕರೇನಸ ರವರು ತಮ್ಮ ಆರ್ಶೀವಚನದಲ್ಲಿ ಜನರ ಸೇವೆ ಪರಮಾತ್ಮನ ಸೇವೆ ಪ್ರತಿಯೋರ್ವ ಮನಷ್ಯನು ತನ್ನಿಂದ ಆದ ಸಹಾಯವನ್ನು ಸಮಾಜಕ್ಕೆ ಮಾಡಬೇಕು ಸರಕಾರದಿಂದ ದೂರೆಯುವ ಸವಲತ್ತುಗಳು ಜನ ಸಮಾನ್ಯರಿಗೆ ತಲುಪುವಂತೆ ನಗರಪಾಲಿಕೆಯ ಸದಸ್ಯರೆಲ್ಲರೂ ಶ್ರಮವಹಿಸಿದಾಗ ಭಗವಂತನ ಸಂಫೂರ್ಣವಾದ ಆಶೀರ್ವಾದ ನಿಮಗೆಲ್ಲರಿಗೂ ಸದಾ ಇರುತ್ತದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಚರ್ಚಿನ ಸಹಾಯಕ ಗುರುಗಳಾದ ಫಾ: ಸುನಿಲ್ ಪಿಂಟೂ ನಗರ ಪಾಲಿಕೆಯ ಸ್ಥಳೀಯ ಸದಸ್ಯೆ ರತಿಕಲಾರವರು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು

Write A Comment