ಕನ್ನಡ ವಾರ್ತೆಗಳು

ನೇತ್ರಾವತಿ ನದಿ ಕಿನಾರೆಯಲ್ಲಿ ಪುರಾತನ ಶಿವಲಿಂಗ ಪತ್ತೆ.

Pinterest LinkedIn Tumblr

old_shiva_linga

ಬಂಟ್ವಾಳ, ಏ.04: ನಾಮಾವಶೇಷವಾಗಿರುವ ಪುರಾತನ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಶಿವಲಿಂಗವೊಂದು ಬಂಟ್ವಾಳ ಸಮೀಪದ ನೇತ್ರಾವತಿ ನದಿ ಕಿನಾರೆಯಲ್ಲಿ ಪತ್ತೆಯಾಗಿದೆ.

ಈ ಹಿಂದೆ ನ‌ಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ದೇವಳಕ್ಕೆ ಸಂಬಂಧಿಸಿ ಎರಡು ಶಿವಲಿಂಗ ಇದೆ ಎಂದು ತಿಳಿದು ಬಂದಿತ್ತು. ಅದರಂತೆ ನದಿ ಕಿನಾರೆಯಲ್ಲಿ ನಿನ್ನೆ ಉತ್ಖನನ ನ‌‌ಡೆಸಿದಾಗ ಒಂದು ಶಿವಲಿಂಗ ಪತ್ತೆಯಾಗಿದೆ.

ಇನ್ನೊಂದು ಶಿವಲಿಂಗ ದೇವಸ್ಥಾನದ ಪುಷ್ಕರಿಣಿಯಲ್ಲಿ ಇದೆ ಎಂಬ ಮಾಹಿತಿ ಅಷ್ಟಮಂಗಲ ಪ್ರಶ್ನೆಯಲ್ಲಿ ಸಿಕ್ಕಿದೆ. ಅದರ ಪತ್ತೆಗೂ ಉತ್ಖನನ ಕಾರ್ಯ ನ‌ಡೆಯುತ್ತಿದೆ. ಈ ದೇವಸ್ಥಾನ 1500 ವರ್ಷಕ್ಕಿಂತಲೂ ಪುರಾತನವಾದುದು ಎಂದು ಹೇಳಲಾಗುತ್ತಿದೆ.

Write A Comment