ಉಳ್ಳಾಲ. ಎ, 09: ಯುವಜನಾಂಗ ಇಸ್ಲಾಂ ಧರ್ಮದ ಚೌಕಟ್ಟುವಿನನಲ್ಲಿ ಬಾಳಿ ಬದುಕಿದರೆ ಇಸ್ಲಾಂ ಧರ್ಮ ನೆಲೆನಿಲ್ಲಲು ಸಾಧ್ಯ ಎಂದು ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯರ್ ಅಭಿಪ್ರಾಯಪಟ್ಟರು.
ಅವರು ಗುರುವಾರ ತಾಜುಲ್ ಇಸ್ಲಾಂ ಆಶ್ರಯದಲ್ಲಿ ಕೊಣಾಜೆ ಅಡ್ಕರೆ ಪಡ್ಪುವಿನಲ್ಲಿ ನಡೆದ ತಾಜುಲ್ ಉಲಮಾ, ನೂರುಲ್ ಉಲಮಾ, ಪೊಸೋಟ್ ತಂಙಳ್ ಅನುಸ್ಮರಣೆ ಕಾರ್ಯಕ್ರಮ ನೇತೃತ್ವವಹಿಸಿ ಮಾತನಾಡಿದರು.
ದಿನದಿಂದ ದಿನಕ್ಕೆ ಯುವಜನಾಂಗ ದಾರಿ ತಪ್ಪುತ್ತಿದ್ದು ಧರ್ಮದ ಬಗ್ಗೆ ಜಾಗೃತಿ ಮೂಡಿಸುವುದು ಇಸ್ಲಾಂ ಧರ್ಮದ ಪ್ರತಿಯೊಬ್ಬನ ಕರ್ತವ್ಯವಾಗಿದೆ ಎಂದರು.
ಅನುಸ್ಮರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಡ್ಕರೆ ಪಡ್ಪು ಖತೀಬರಾದ ಹಂಝ ಸಖಾಫಿ ಅಲ್ ಅಝ್ಹರಿ ವಹಿಸಿದ್ದರು. ಉಮರ್ ಸಖಾಫಿ ಆನೇಕಲ್ ಮುಖ್ಯ ಪ್ರಭಾಷಣಗೈದರು.
ಮುಖ್ಯ ಅತಿಥಿಗಳಾಗಿ ಸಾಂಬಾರ್ ತೋಟ ಮುದರ್ರಿಸ್ ಅಬೂಸ್ವಾಲಿಹ್ ಸಖಾಫಿ ಅಲ್ ಕಾಮಿಲ್, ಅಡ್ಕರೆ ಜುಮಾ ಮಸೀದಿ ಮಾಜಿ ಖತೀಬರಾದ ಸುಲೈಮಾನ್ ಸಖಾಫಿ, ಅಬ್ದುಲ್ ಬಾರಿ ಸಅದಿ, ಮಾಜಿ ಮುಹಲ್ಲಿಮರಾದ ಅಬ್ದುಲ್ ಹಮೀದ್ ಮದನಿ, ಅಬ್ಬಾಸ್ ಝಹರಿ, ಶರೀಫ್ ಮುಸ್ಲಿಯಾರ್, ಅಬ್ದುಲ್ ರಹಮಾನ್ ಸಖಾಫಿ, ಬದ್ಯಾರ್ ಖತೀಬ್ ಇಸ್ಮಾಯಿಲ್ ಸದಿ ಅಲ್ ಅಫ್ಲಲಿ ಉರುಮಣೆ, ಬೆಳ್ಮದೋಟ ಖತೀಬ್ ಅಬ್ದುಲ್ ಅಝೀಝ್ ಸದಿ ಅಲ್ ಅಫ್ಲಲಿ, ಅಡ್ಕರೆ ಪಡ್ಪು ಮುಹಲೀಂ ಅಬ್ದುಲ್ ಹಮೀದ್ ಮದನಿ, ಅಡ್ಕರೆ ಜುಮಾ ಮಸೀದಿ ಪ್ರ.ಕಾರ್ಯದರ್ಶಿ ಮುಹಮ್ಮದ್ ಮುಸ್ತಫ, ಅಲ್-ಇಹ್ಸಾನ್ ಯೂತ್ ಎಸೋಸಿಯೆಶನ್ ಅಧ್ಯಕ್ಷ ಮಹಮ್ಮದ್ ನಿಯಾಝ್, ಸೈಟ್ ಅಡ್ಕರೆ ಪಡ್ಪು ಅಧ್ಯಕ್ಷ ಉಸ್ಮಾನ್ ಸೈಟ್, ತಾಜುಲ್ ಇಸ್ಲಾಂ ಗೌರವಾಧ್ಯಕ್ಷ ಕೆ ಯು ಮಹಮ್ಮದ್, ಉದ್ಯಮಿ ಹಾಜಿ ಅಹ್ಮದ್ ಬಾವ, ಹಾಜಿ ಶೌಕತ್ ದೇರಳಕಟ್ಟೆ, ಅಡ್ಕರೆ ಪಡ್ಪು ಮುಅಲ್ಲಿಂ ಮಹಮ್ಮದ್ ಮದನಿ, ತಾಜುಲ್ ಇಸ್ಲಾಂ ಅಡ್ಕರೆ ಪಡ್ಪು ಅಧ್ಯಕ್ಷರಾದ ಮುಹಮ್ಮದ್ ಮಹಫೂಝ್ ಉಪಸ್ಥಿತರಿದ್ದರು.
ಅಡ್ಕರೆ ಪಡ್ಪು ಸದರ್ ಮುಅಲ್ಲಿಂ ಅಬ್ದುಲ್ ನಝೀರ್ ಸಖಾಫಿ ಸ್ವಾಗತಿಸಿದರು. ಅಡ್ಕರೆ ಪಡ್ಪು ತಾಜುಲ್ ಇಸ್ಲಾಂ ಪ್ರಧಾನ ಕಾರ್ಯದರ್ಶಿ ರಿಯಾಝ್ ವಂದಿಸಿದರು.