ಹಿಂದೆಂದೂ ಕಂಡರಿಯದ ಅಪರೂಪದ ನೇರಳೆ ಬಣ್ಣದ ಹರಳು ಪಶ್ಚಿಮ ಅಸ್ಟ್ರೇಲಿಯಾದಲ್ಲಿ ದೊರೆತಿದೆ. ಈ ಹರಳು ರಾಸಾಯನಿಕ ಸಂಯೋಜನೆಯಿಂದ ಉಂಟಾಗಿದ್ದು, ಸ್ಫಟಿಕದ ರಚನೆ ಹೊಂದಿದೆ.
ಈ ಹರಳು ಈವರೆಗೆ ದೊರೆತ ಸುಮಾರು ನಾಲ್ಕು ಸಾವಿರ ಖನಿಜಗಳಿಗಿಂತ ಭಿನ್ನವಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಆಸ್ಟ್ರೇಲಿಯಾದ ಗಣಿಗಾರಿಕೆ ತಜ್ಞ ಆಂಡ್ರು ಮತ್ತು ಕ್ರಿಸ್ಫನ್‌ರವರು ಈ ಹರಳಿಗೆ `ಪುಟ್ನಿ ಸೈಟ್’ ಎಂದು ಹೆಸರು ಇಟ್ಟಿದ್ದಾರೆ. ಈ ನೇರಳೆ ಬಣ್ಣದ ಹರಳು ಸಾಮಾನ್ಯವಾಗಿ ದಕ್ಷಿಣ ಲೇಕ್ ಕೋವನ್, ನಾರ್ವೆ ದೇಶದ ಉತ್ತರ ಮೇಲ್ಮೈಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಅಲ್ಲಿನ ಗಣಿಗಾರಿಕೆ ಪ್ರದೇಶದಲ್ಲಿ ಕೆಲಸಗಾರರು ಸಿಕ್ಕಲ್ ಲೋಹವನ್ನು ಸಂಶೋಧಿಸುತ್ತಿರುವಾಗ ಗುಲಾಬಿ ನೇರಳೆ ಬಣ್ಣದ ಪ್ರಕಾಶಮಾನವಾದ ಖನಿಜವೊಂದು ಪತ್ತೆಯಾಗಿದೆ.ನಂತರ ಈ ಖನಿಜವನ್ನು ಕಾಮನ್‌ವೆಲ್ತ್ ಕೈಗಾರಿಕಾ ಸಂಶೋಧನಾ ಕೇಂದ್ರದಲ್ಲಿ ತೀವ್ರ ಪರೀಕ್ಷೆಗೆ ಒಳಪಡಿಸಲಾಯಿತು.
ವಿಭಿನ್ನ ರೀತಿಯ ರಚನೆ ಹೊಂದಿರುವ ಈ ಖನಿಜ ಯಾವುದೇ ರೀತಿ ರಾಸಾಯನಿಕ ಸಂಯೋಜನೆಯಿಂದಲೋ ಬೇರೆ ರೀತಿಯ ಸ್ಫಟಿಕದ ರಚನೆಯಿಂದ ಉಂಟಾಗಿದೆ ಎಂದು ಸಂಶೋಧಕ ಎಲಿಯಟ್ ಸ್ಪಷ್ಟನೆ ನೀಡಿದ್ದಾರೆ.
ಈ ಖನಿಜ ಸ್ಟ್ರಾಷಿಯಂ ಕ್ಯಾಲ್ಸಿಯಂ ಕ್ರೋಮಿಯಂ ಸಲ್ಪೈಟ್ ಕಾರ್ಬೋನೇಟ್ ಎಂಬ ನವೀನ ರಾಸಾಯನಿಕ ಮತ್ತು ಸ್ಫಟಿಕ ಸಂಯೋಜನೆಯಿಂದ ಉಂಟಾಗಿದೆ ಇದರ ಖನಿಜ ಬಣ್ಣ ತಿಳಿ ಗುಲಾಬಿಯದ್ದು ಅಥವಾ ನೇರಳೆ ಬಣ್ಣ ಹೊಂದಿರುತ್ತದೆ ಎಂದು ಹೇಳಿದ್ದಾರೆ.
ಜ್ವಾಲಾಮುಖಿ ಸ್ಫೋಟಗೊಂಡಾಗ ಬಂಡೆಗಳು ಸಿಡಿದು ಹೊಸ ಹೊಸ ಹರಳುಗಳು ಭೂಮಿ ಮೇಲೆ ಕಂಡು ಬರುತ್ತದೆ. ಇಂತಹ ಹರಳುಗಳು ಸರಾಸರಿ 0.02 ಇಂಚಿನ ವ್ಯಾಸ ಹೊಂದಿರುತ್ತದೆ.
ಮೇಲ್ನೋಟಕ್ಕೆ ಕಲ್ಲಿನಂತೆ ಕಾಣುವ ಈ ಹರಳು ಹಸಿ ಮತ್ತು ಬಿಳಿ ಬಣ್ಣದಲ್ಲಿರುತ್ತದೆ. ಸೂಕ್ಷ್ಮದರ್ಶಕದಲ್ಲಿ ನೋಡಿದರೆ ಮಾತ್ರ ಇದು ಹರಳು ಎಂದು ತಿಳಿಯುತ್ತದೆ.
ಲೇಕ್ ಕೋವನ್ ಪ್ರದೇಶದಲ್ಲಿ ತುಂಬಾ ಹಳೆಯ ಬಂಡೆಗಳಿವೆ. ಎಷ್ಟೋ ಮಿಲಿಯನ್ ವರ್ಷದ ಹಿಂದಿನ ಇಂತಹ ಬಂಡೆಗಳಲ್ಲಿ ಸಣ್ಣ ಪ್ರಮಾಣದ ಸ್ಟ್ರಾಷಿಯಂ ಕ್ಯಾಲ್ಸಿಯಂ ಕ್ರೋಮಿಯಂ ಮತ್ತು ಸಂಪೂರ್ಣ ಕಣಗಳಿರುತ್ತವೆ ಎಂದು ಎಲಿಯಟ್ ಅಭಿಪ್ರಾಯಪಡುತ್ತಾರೆ.