ಉಡುಪಿ: ತಾಲೂಕು ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಸಂಬಂಧಿಸಿ ಮೀಸಲಾತಿಯನ್ನು ಸರಕಾರ ಪ್ರಕಟಿಸಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಪಂಚಾಯತಿನಲ್ಲಿ ಬಿಜೆಪಿ ಬಹುಮತ ಹೊಂದಿದ್ದರೂ ಮೀಸಲಾತಿಯಿಂದಾಗಿ ಅಧಿಕಾರ ಕಾಂಗ್ರೆಸ್ ಪಾಲಾಗಲಿದೆ.
ಕುಂದಾಪುರ ತಾಲೂಕಿನಲ್ಲಿ ಅಧ್ಯಕ್ಷ ಹುದ್ದೆ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲು ಆಗಿದೆ. ಆದರೆ ಬಹುಮತ ಇರುವ ಬಿಜೆಪಿಯಲ್ಲಿ ಅಭ್ಯರ್ಥಿಗಳಿಲ್ಲ. ಆದುದರಿಂದ ಕಾಂಗ್ರೆಸ್‌ಗೆ ಅಧ್ಯಕ್ಷ ಗದ್ದುಗೆ ದೊರೆಯಲಿದೆ. ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಬ)ಕ್ಕೆ ಮೀಸಲಾಗಿದೆ.
ಮೀಸಲಾತಿ ವಿವರ: ಉಡುಪಿ: ಅಧ್ಯಕ್ಷ-ಸಾಮಾನ್ಯ (ಮ), ಉಪಾಧ್ಯಕ್ಷ-ಸಾಮಾನ್ಯ, ಕಾರ್ಕಳ: ಅಧ್ಯಕ್ಷ-ಸಾಮಾನ್ಯ (ಮ), ಉಪಾಧ್ಯಕ್ಷ-ಸಾಮಾನ್ಯ.