ಮಂಗಳೂರು : ಉಳ್ಳಾಲ ಮೊಗವೀರಪಟ್ನದಲ್ಲಿ ನಡೆದ ರಾಜೇಶ್ ಕೊಟ್ಯಾನ್ ಕೊಲೆ ಪ್ರಕರಣದ ಆರೋಪಿಗಳ ಪೈಕಿ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಉಳ್ಳಾಲ ಕೋಡಿ ನಿವಾಸಿ ಅಬ್ದುಲ್ ರನ್ನೀಸ್ @ ರನ್ನಿ(18) ಎನ್ನಲಾಗಿದೆ.
ದಿನಾಂಕ: 12-04-2016 ರಂದು ಬೆಳಗ್ಗಿನ ಜಾವ ಸುಮಾರು 2-40 ಗಂಟೆಯ ಸಮಯಕ್ಕೆ ಉಳ್ಳಾಲ ಮೊಗವೀರಪಟ್ನ ವಾಸಿ ರಾಜೇಶ್ ಕೊಟ್ಯಾನ್ ಯಾನೆ ರಾಜ ಎಂಬವರು ಎಂದಿನಂತೆ ಉಳ್ಳಾಲ ಮೊಗವೀರಪಟ್ನ ತನ್ನ ವಾಸದ ಮನೆಯಿಂದ ಉಳ್ಳಾಲ ಕೋಟೆಪುರ ಜೆಟ್ಟಿ ಕಡೆಗೆ ಬೋಟಿನಲ್ಲಿ ಮೀನುಗಾರಿಕೆಯ ಬಗ್ಗೆ ಕೆಲಸಕ್ಕೆ ಹೋದವರನ್ನು ದುಷ್ಕಮಿಗಳು ಉಳ್ಳಾಲ ಕೋಟೆಪುರ ಬರಕಾ ಓವರ್ ಸೀಸ್ ಪ್ಯಾಕ್ಟರಿಯ ಬಳಿ ಕೊಲೆ ಮಾಡಿರುವುದಾಗಿ ಮೃತರ ತಮ್ಮ ಜಗದೀಶ ಕೊಟ್ಯಾನ್ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಈ ಕೊಲೆ ಪ್ರಕರಣದಕ್ಕೆ ಸಂಬಂಧ ಪಟ್ಟಂತೆ ಆರು ಆರೋಪಿಗಳ ಪೈಕಿ ಈಗಾಗಲೇ ಮೊಹಮ್ಮದ್ ಅಸ್ವೀರ್ ಯಾನೆ ಅಚ್ಚು, ಅಬ್ದುಲ್ ಮುತ್ತಾಲಿಪ್ ಯಾನೆ ಮುತ್ತು, ಬಾಸಿತ್ ಆಲಿ ಯಾನೆ ಬಾಚಿ ಎಂಬ ಮೂವರು ಆರೋಪಿಗಳನ್ನು ದಿನಾಂಕ: 14-04-2016 ರಂದು ಮಂಗಳೂರು ಸಿಸಿಬಿ ಪೊಲೀಸರು ಉಳ್ಳಾಲ ಸೋಮೇಶ್ವರ ರೈಲ್ವೆ ನಿಲ್ದಾಣದ ಬಳಿಯಲ್ಲಿ ಬಂಧಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ 3 ಮಂದಿ ಆರೋಪಿಗಳ ಪೈಕಿ ಅಬ್ದುಲ್ ರನ್ನೀಸ್ ಎಂಬತಾನನ್ನು ಖಚಿತ ಮಾಹಿತಿ ಪಡೆದುಕೊಂಡ ಸಿಸಿಬಿ ಪೊಲೀಸರು ಫರಂಗಿಪೇಟೆ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ . ಈತನ ಬಂಧನದ ಮೂಲಕ ನಾಲ್ಕನೇಯ ಆರೋಪಿಯ ಬಂಧನವಾಗಿದೆ. ಪ್ರಕರಣದಲ್ಲಿ ಭಾಗಿಯಾದ ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.