ವಿಟ್ಲ, ಏ.22: ವಿದ್ಯುತ್ ಕಂಬದ ಮೇಲೆ ಹತ್ತಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ದುರ್ದೈವಿಯನ್ನು ವೀರಕಂಬ ಬಳಿಯ ಕಳಿಂಜಾ ನಿವಾಸಿ ನಾರಾಯಣ ಪೂಜಾರಿ ಅವರ ಪುತ್ರ ಸುರೇಶ್ ಪೂಜಾರಿ (29) ಎಂದು ಗುರುತಿಸಲಾಗಿದೆ.
ನಡು ವಳಚ್ಚಿಲ್ ಕಳಂಜ ನಿವಾಸಿ ನಾರಾಯಣ ಪೂಜಾರಿಯವರ ಪುತ್ರರಾದ ಇವರು, ಹೊಸದಾಗಿ ಬಾಡಿಗೆ ಮನೆಯನ್ನು ಪಡೆದು ಆ ಮನೆಯಲ್ಲಿ ವಾಸಿಸುವ ಸಲುವಾಗಿ ಆ ಮನೆಯ ವಿದ್ಯುತ್ ತಂತಿಗಳನ್ನು ದುರಸ್ತಿ ಮಾಡಲು ಸಿದ್ದರಾದರು ,ವಾಸ್ತವವಾಗಿ ಇಲ್ಲಿ ಎಲ್‌ಟಿ ಲೈನ್ ಆಫ್ ಆಗಿತ್ತು. ಆದರೆ ಪಕ್ಕದಲ್ಲೇ ಇರುವ ಎಚ್‌ಟಿ ಲೈನ್ ಶಾಕ್ ನೀಡಿತ್ತು. ಸರ್ವೀಸ್ ತಂತಿ ಎಚ್‌ಟಿ ತಂತಿಗೆ ಸ್ಪರ್ಶಿಸಿದ ಪರಿಣಾಮ ಅವರಿಗೆ ವಿದ್ಯುತ್ ಶಾಕ್ ಹೊಡೆದಿದ್ದು ಕಂಬದಿಂದ ಕೆಳಗಡೆ ಎಸೆಯಲ್ಪಟ್ಟಿದ್ದಾರೆ. ಈ ವೇಳೆ ಆವರನ್ನು ಕೂಡಲೇ ವಿಟ್ಲ ಸಮುದಾಯ ಭವನ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆದಲ್ಲೇ ಮೃತಪಟ್ಟಿದ್ದಾರೆ
ಸುರೇಶ್ ಮಂಗಳೂರಿನಲ್ಲಿ ಕೆಲಕಾಲ ಉದ್ಯೋಗಿಯಾಗಿದ್ದು, ಇತ್ತೀಚೆಗೆ ಕೆಲಿಂಜದಲ್ಲಿ ಅಮ್ಮ ಎಂಬ ಹೆಸರಿನ ಅಂಗಡಿಯಲ್ಲಿ ವ್ಯಾಪಾರ ಹಾಗೂ ವಿದ್ಯುತ್ ಸಂಬಂಧಪಟ್ಟ ದುರಸ್ತಿ ಕಾರ್ಯ ಮಾಡುತ್ತಿದ್ದರು. ಇಲೆಕ್ಟ್ರೀಶಿಯನ್ ಆಗಿದ್ದರು.
ಇವರು ಸುಮಾರು ಒಂದು ವರ್ಷದ ಹಿಂದೆ ಮದುವೆಯಾಗಿದ್ದು, ಇವರ ಪತ್ನಿಯು ತುಂಬು ಗರ್ಭೀಣಿಯಾಗಿದ್ದಾರೆ. ಮುಂದಿನ ಹತ್ತು ದಿನಗಳೊಳಗೆ ತಮ್ಮ ಮಗುವನ್ನು ಬರ ಮಾಡಿಕೊಳ್ಳುವ ನಿರೀಕ್ಷೆಯಲ್ಲಿರುವಾಗಲೇ ಈ ಅಘಾತಕಾರಿ ಘಟನೆ ನಡೆದಿದೆ. ಮೆಸ್ಕಾಂ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಹಾಗೂ ಮೆಸ್ಕಾಂ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.