ಉಳ್ಳಾಲ,ಎ.25 : ಉಳ್ಳಾಲದಲ್ಲಿ ಮತ್ತೆ ಗಲಭೆ ಹಬ್ಬುವ ಲಕ್ಷಣ ಕಂಡುಬಂದಿದ್ದು, ಸಹಜವಾಗಿಯೇ ಜನರಲ್ಲಿ ಆತಂತಕ್ಕೆ ಕಾರಣವಾಗಿದೆ. ಇಲ್ಲಿನ ವೀರಭದ್ರ ದೇವಾಳಯದ ಸನಿಹ ಇಂದು ಮುಂಜಾನೆ ವ್ಯಕ್ತಿಯೊಬ್ಬನಿಗೆ ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಧರ್ಮನಗರ ನಿವಾಸಿ ನಸ್ಸಾನ್ ಎಂದು ಗುರುತಿಸಲಾಗಿದ್ದು, ಸದ್ಯ ಈತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈತ ಇಂದು ಮುಂಜಾನೆ ಎಂದಿನಂತೆ ಬೈಕ್‌ನಲ್ಲಿ ಮಂಗಳೂರಿನ ಧಕ್ಕೆಗೆ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಇದೇ ಸಮಯಕ್ಕೆ ಕಾದು ಕುಳಿತಿದ್ದ ದುಷ್ಕರ್ಮಿಗಳು ವೀರಭದ್ರ ದೇವಾಳಯದ ಬಳಿ ನಸ್ಸಾನ್‌ರನ್ನು ಅಡ್ಟಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ನಸ್ಸಾನ್ ಬೈಕ್‌ನ ಹಿಂದೆಯೇ ಆತನ ಅಣ್ಣಂದಿರು ಮತ್ತೊಂದು ವಾಹನದಲ್ಲಿ ಬರುತ್ತಿದ್ದು, ಇದನ್ನು ಗಮನಿಸಿದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸದ್ಯ ನಸ್ಸಾನ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಯಿಂದ ನಸ್ಸಾನ್‌ರ ಸೊಂಟ, ಕೈಬೆರಳಿಗೆ ಗಾಯವಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.