ಪುತ್ತೂರು, ಏ.30: ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ವಾಹನವನ್ನು ಶುಕ್ರವಾರ ಮುಂಜಾನೆ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಪುತ್ತೂರಿನ ದರ್ಬೆ ಸಮೀಪ ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪಿಕಪ್‌ನಲ್ಲಿ ನಾಲ್ಕು ದನಗಳು ಪತ್ತೆಯಾಗಿದ್ದು, ವಶಕ್ಕೆ ತೆಗೆದುಕೊಳ್ಳಲಾಗಿದೆ. ರಾತ್ರಿ ಗಸ್ತು ನಿರತ ಪುತ್ತೂರು ನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಪಿಕಪ್ ಚಾಲಕ ಪರಾರಿಯಾಗಿದ್ದಾನೆ.
ಪೊಲೀಸರ ಸೂಚನೆಯನ್ನೂ ಲೆಕ್ಕಿಸದೇ ಪಿಕಪ್ ಪರಾರಿಯಾಗಲು ಯತ್ನಿಸಿತು. ಪಿಕಪನ್ನು ಬೆನ್ನಟ್ಟಿ ಸಾಗಿದ ಪೊಲೀಸ್ ಜೀಪ್‌ಗೆ ಪಿಕಪ್ ಡಿಕ್ಕಿಯಾಯಿತು. ಜೀಪುಗಳು ಜಖಂಗೊಂಡಿತು. ಇದೇ ಸಂದರ್ಭ ಪಿಕಪನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.