ಕನ್ನಡ ವಾರ್ತೆಗಳು

ಎರಡು ದಿನದ ನವಜಾತ ಶಿಶು ಕದ್ದ ಕಳ್ಳರ ಬಂಧನ

Pinterest LinkedIn Tumblr

boring_baby_theft

ಬೆಂಗಳೂರು,ಮೇ.03: ಬೆಂಗಳೂರಿನ ಹೆಸರಾಂತ ಬೌರಿಂಗ್ ಆಸ್ಪತ್ರೆಯಿಂದ ಅಕ್ಟೋಬರ್ 2015 ರಲ್ಲಿ ಎರಡು ದಿನಗಳ ನವಜಾತ ಶಿಶುವನ್ನು ಕಳ್ಳತನ ಮಾಡಿದ್ದ ಇಬ್ಬರನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಡಿ.ಜೆ ಹಳ್ಳಿ ನಿವಾಸಿಗಳಾದ ಜಬೀನಾ ಮತ್ತು ಸೈಯ್ಯದ್ ನೂರುಲ್ಲಾ ಎಂದು ಗುರುತಿಸಲಾಗಿದೆ.ಇವರನ್ನು ಆರು ತಿಂಗಳ ನಂತರ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ದರ್ಗಾದಲ್ಲಿ ಬಂಧಿಸಲಾಗಿದೆ.

ಮಕ್ಕಳಿಲ್ಲದ ದಂಪತಿಯೊಬ್ಬರು ನವಜಾತ ಶಿಶುವನ್ನು ತಂದುಕೊಟ್ಟರೆ ಒಂದು ಲಕ್ಷ ಹಣ ನೀಡುವುದಾಗಿ ಹೇಳಿದ್ದರು. ಹಣದ ಆಮೀಷಕ್ಕಾಗಿ ಇವರು ಮಗು ಕಳ್ಳತನ ಮಾಡಿದ್ದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಇನ್ನು ಈ ಕಳ್ಳರು ಮಕ್ಕಳ ಅಪಹರಣ ಜಾಲದಲ್ಲಿ ಭಾಗಿಯಾಗಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ಸೈಯ್ಯದ್ ಹಬೀಬ್ ಮತ್ತು ಫರೀದಾ ದಂಪತಿಯ 2 ದಿನಗಳ ಮಗುವನ್ನು ಜಬೀನಾ ಕದ್ದು ಪರಾರಿಯಾಗಿದ್ದಳು. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.

Write A Comment