ಮ೦ಗಳೂರು, ಮೇ.03 : ವೈದ್ಯ ವಿಜ್ಞಾನದ ಆಳವಾದ ಜ್ಞಾನ, ಪ್ರಯೋಗ ಪರಿಣತಿಯ ಜೊತೆಗೆ ಕೌಶಲ್ಯಯುಕ್ತ ಚಿಕಿತ್ಸಾ ಪರಿಕಲ್ಪನೆಯಿಂದಷ್ಟೇ ಸಮಾಜಮುಖೀ ವೈದ್ಯ ಸೇವೆಯು ಸಾಕಾರವಾಗುವುದು. ಅದಕ್ಕಾಗಿ ಆಯುರ್ವೇದ ಕಾಲೇಜುಗಳನ್ನು ಒಳಗೊಂಡಂತೆ ಎಲ್ಲಾ ಆಯುಷ್ ವೈದ್ಯ ಪದ್ಧತಿಗಳ ಕಾಲೇಜುಗಳು ಪುಸ್ತಕದ ಜ್ಞಾನದ ಜೊತೆಗೆ ಕೌಶಲ್ಯ ಪೂರ್ಣ ವೈದ್ಯರನ್ನಾಗಿಸಬೇಕಾದ ಹೊಣೆಗಾರಿಕೆಯಿದೆ. ಹಾಗಾಗ ಬೇಕಾದರೆ ಕಲಿಕೆಯ ವಿದ್ಯಾರ್ಥಿಗಳು ಹಾಗೂ ಭೋಧಿಸುವ ಪ್ರಾಧ್ಯಾಪಕ ವೃಂದ ಜವಾಬ್ದಾರಿಯುತವಾಗಿ ನಡೆದುಕೊಂಡಾಗ ಇದು ಸಾಧ್ಯವಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಅಧಿಕಾರಿ ಡಾ.ದೇವದಾಸ್ ಪುತ್ರನ್ ತಿಳಿಸಿದ್ದಾರೆ.
ಅವರು ಮೂಡಬಿದಿರೆಯಲ್ಲಿ ಜರುಗಿದ ರಾಜ್ಯ ಮಟ್ಟದ ಆಯುರ್ವೇದ ಪ್ರಯೋಗ ಪಾಠ-2016 ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ: ಬಿ.ವಿನಯಚಂದ್ರ ಶೆಟ್ಟಿ ಮಾತನಾಡಿ, ಆಯುರ್ವೇದ ಚಿಕಿತ್ಸಾ ಪದ್ಧತಿಯ ವ್ಯಾಪ್ತಿ, ಪರಿಮಿತಿ ಹಾಗೂ ಭವಿಷ್ಯದ ಆಶೋತ್ತರಗಳನ್ನು ವಿವರಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಡಾ: ಪ್ರಸನ್ನ ವೆಂಕಟೇಶ್ ಕಾರ್ಯಕ್ರಮವನ್ನು ಶ್ಲಾಘಿಸಿದರು. ಆಯುರ್ವೇದ ಪ್ರಯೋಗ ಪಾಠದ ಸಂಯೋಜಕರಾದ ಡಾ:ಕೆ.ಎನ್.ರಾಜಶೇಖರ್ ಸ್ವಾಗತಿಸಿದರು. ರಾಜ್ಯದ 16 ಆಯುರ್ವೇದ ಕಾಲೇಜುಗಳಿಂದ ಬಂದ ಸೀಮಿತ 120 ಕಿರಿಯ ವೈದ್ಯರುಗಳು ವೈದ್ಯರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.