ನವದೆಹಲಿ,ಮೇ.4: ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಉಕ್ಕು ಉದ್ಯಮವು ಆಮದು ಹೆಚ್ಚಾಗುತ್ತಿರುವುದರಿಂದ ಕಷ್ಟದಲ್ಲಿದೆ ಎಂದು ಸರ್ಕಾರ ಹೇಳಿದೆ. ಉಕ್ಕು ವಲಯದ ಹಿತಾಸಕ್ತಿ ಕಾಪಾಡಲು ಹಾಗೂ ಉತ್ತೇಜನ ನೀಡಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಸರ್ಕಾರ ರಾಜ್ಯಸಭೆಯಲ್ಲಿಂದು ಆಶ್ವಾಸನೆ ನೀಡಿದೆ.
ಚೀನಾ, ಜಪಾನ್ ಮತ್ತು ಕೊರಿಯಾದಿಂದ ಆಮದು ಹೆಚ್ಚಾಗುತ್ತಿದ್ದು ಇದು ದೇಶೀಯ ಉದ್ಯಮದ ಮೇಲೆ ಪರಿಣಾಮ ಬೀರುತ್ತಿದೆ ಜೊತೆಗೆ ನಷ್ಟಕ್ಕೆ ಕಾರಣವಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಹಾಗಾಗಿ ಸರ್ಕಾರ ಸುರಿ ವಿರೋಧಿ ತೆರಿಗೆ, ಆಮದಾಗುವ ಸ್ಟೀಲ್ ಉತ್ಪನ್ನಗಳ ಮೇಲೆ ಸುರಕ್ಷಾ ತೆರಿಗೆ, ಮತ್ತು ಕನಿಷ್ಟ ಆಮದು ಬೆಲೆ ನೀತಿಯನ್ನು ಹೇರಿ ಉಕ್ಕು ಉದ್ಯಮವನ್ನು ಸಂಕಷ್ಟದಿಂದ ರಕ್ಷಿಸಲು ಕ್ರಮ ಕೈಗೊಂಡಿದೆ.
ಈ ಕ್ರಮಗಳನ್ನು ತೆಗೆದುಕೊಂಡ ಬಳಿಕ ಸಂಕಷ್ಟ ಕಡಿಮೆಯಾಗುತ್ತಿದೆ ಎಂದು ಉಕ್ಕು ಉದ್ಯಮ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.