ಕನ್ನಡ ವಾರ್ತೆಗಳು

ಪುತ್ತೂರು: ಸರಣಿ ಅಫಾಘಾತ :ಪ್ರಾಣಾಪಾಯದಿಂದ ಪಾರಾದ ರಿಕ್ಷಾ ಚಾಲಕ

Pinterest LinkedIn Tumblr

rikshw_bus_lorry_acdent

ಪುತ್ತೂರು,ಮೇ.14 : ರಿಕ್ಷಾವೊಂದಕ್ಕೆ ಲಾರಿ ಹಾಗೂ ಬಸ್ ಎಕಕಾಲದಲ್ಲಿ ಡಿಕ್ಕಿ ಹೊಡೆದರು ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ಪುತ್ತೂರು – ಸುಳ್ಯ ರಾಜ್ಯ ಹೆದ್ದಾರಿಯಲ್ಲಿನ ಕುಂಬ್ರ ಎಂಬಲ್ಲಿ ನಡೆದಿದೆ.

ಕುಂಬ್ರದ ರಿಕ್ಷಾ ಚಾಲಕ ಶಿಹಾಬುದ್ದೀನ್ ಎಂಬವರು ತನ್ನ ರಿಕ್ಷಾದಲ್ಲಿ ಕುಂಬ್ರ ಸೇತುವ ಬಳಿ ರಸ್ತೆ ಉಬ್ಬು ದಾಟುತ್ತಿದ್ದ ವೇಳೆ ಪುತ್ತೂರುನಿಂದ ಮೈಸೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದ್ದು ಈ ಸಂದರ್ಭದಲ್ಲಿ ಪುತ್ತೂರು ಕಡೆಗೆ ಬರುತ್ತಿದ್ದ ಲಾರಿ ರಿಕ್ಷಾಕ್ಕೆ ಮುಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಈ ವೇಳೆ ಚಾಲಕ ಶಿಹಾಬುದ್ದೀನ್ ರಿಕ್ಷಾದಿಂದ ಹಾರಿ ತನ್ನ ಪ್ರಾಣವನ್ನು ಕಾಪಾಡಿಕೊಂಡಿದ್ದಾರೆ.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment